Minister Santhosh Lad advised to take action to distribute fertilizer vouchers to farmers

ರೈತರಿಗೆ ರಸಗೊಬ್ಬರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲು ಸಚಿವ ಸಂತೋಷ್‌ ಲಾಡ್‌ ಸಲಹೆ

ರೈತರಿಗೆ ರಸಗೊಬ್ಬರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲು ಸಚಿವ ಸಂತೋಷ್‌ ಲಾಡ್‌ ಸಲಹೆ

ಬೆಂಗಳೂರು, ಜುಲೈ 30: ಪಡಿತರ ಚೀಟಿ ರೀತಿಯಲ್ಲೇ ರೈತರಿಗೆ ರಸಗೊಬ್ಬರ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌. ಲಾಡ್‌ ಸಲಹೆ ನೀಡಿದ್ದಾರೆ.

ಪ್ರತಿಯೊಬ್ಬ ರೈತರಿಗೂ ಸರ್ವೆ ನಂಬರ್‌ವಾರು ಬೆಳೆಯಬೇಕಾದ ಬೆಳೆ ಮತ್ತು ಅವಶ್ಯವಿರುವ ರಸಗೊಬ್ಬರಗಳನ್ನು ಪ್ರತ್ಯೇಕವಾಗಿ ರಸಗೊಬ್ಬರ ಚೀಟಿಯಲ್ಲಿ ನಮೂದಿಸಿ ವಿತರಿಸಬಹುದಾಗಿದೆ. ಈ ಸಂಬಂಧ ಕ್ರಮ ವಹಿಸಿ ಎಂದು ಧಾರವಾಡ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿಗಳು ಹಾಗೂ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಪತ್ರ ಮುಖೇನ ತಿಳಿಸಿದ್ದಾರೆ.

ಧಾರವಾಡದಲ್ಲಿರುವ ಕೃಷಿ ವಿಶ್ವವಿದ್ಯಾಲಯವು ವಿವಿಧ ಬೆಳೆಗಳಿಗೆ ಸಂಬಂಧಿಸಿದ ಹಲವು ಸಂಶೋಧನೆಗಳನ್ನು ನಡೆಸುತ್ತಿದೆ. ಗ್ರಾಮಗಳಲ್ಲಿರುವ ರೈತರಿಗೆ ಅನುಕೂಲವಾಗುವಂತೆ ಪ್ರತಿ ರೈತರ ಸರ್ವೆ ನಂಬರ್‌ವಾರು ಬೆಳೆಗಳನ್ನು ಬೆಳೆಯಲು ಸೂಕ್ತ ಅಧ್ಯಯನ ನಡೆಸಿ ಶಿಫಾರಸು ಮಾಡುವುದು ಅನಿವಾರ್ಯವಾಗಿದೆ. ಇದರಿಂದ ರೈತರ ಬೇಡಿಕೆಗಳಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಅನುಪಾತವನ್ನು ಸರಿದೂಗಿಸಲು ಸಹಾಯವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.

ರಸಗೊಬ್ಬರ ಚೀಟಿಯಲ್ಲಿ ಒಳಗೊಂಡಿರಬೇಕಾದ ಅಂಶಗಳು:
ರಸಗೊಬ್ಬರ ಚೀಟಿಯಲ್ಲಿ ಹಲವು ಅಂಶಗಳು ಒಳಗೊಂಡಿರಬೇಕು. ರೈತರ ಸರ್ವೆ ನಂಬರ್‌, ಜಮೀನಿನ ಮಣ್ಣಿನ ಫಲವತ್ತತೆಯ ಪರೀಕ್ಷಾ ವರದಿ, ಪರೀಕ್ಷಾ ವರದಿಯ ಅನುಗುಣವಾಗಿ ಬೆಳೆಯ ಬೇಕಾದ ಬೆಳೆ, ಶಿಫಾರಸು ಮಾಡಿದ ಬೆಳೆಗೆ ಬೇಕಾದ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರದ ವಿವರ ಹಾಗೂ ಶಿಫಾರಸಿಗೆ ಅನುಗುಣವಾಗಿ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರ ವಿವರಣೆ ಇರಬೇಕು ಎಂದಿದ್ದಾರೆ.

ಅನುಕೂಲಗಳು ಏನು?
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳುವುದರಿಂದ ಬಿತ್ತನೆಗೆ ಬೇಕಾದ ಬೀಜ, ರಸಗೊಬ್ಬರದ ಕೊರತೆ ಉಂಟಾಗುವುದಿಲ್ಲ. ಈ ಸಂಬಂಧ ಕೃಷಿ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಒಂದು ತಾಲೂಕಿನಲ್ಲಿ ಒಂದು ಹೋಬಳಿಯಲ್ಲಿ ಪ್ರಾಯೋಗಿಕವಾಗಿ ಈ ವಿಧಾನ ಅನುಸರಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲು ಕ್ರಮ ವಹಿಸಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮಣ್ಣಿನ ಫಲವತ್ತತೆ ಕ್ಷೀಣ ಸಮಸ್ಯೆಗೆ ಪರಿಹಾರ:
ರೈತರು ಬೆಳೆಯುತ್ತಿರುವ ಬೆಳೆಗಳಿಗೂ ಹಾಗೂ ರಸಗೊಬ್ಬರದ ಬೇಡಿಕೆಗೂ ವ್ಯತ್ಯಾಸ ಉಂಟಾಗುತ್ತಿದೆ. ಒಂದೇ ರೀತಿಯ ಬೆಳೆ ಬೆಳೆಯುವುದು ಹೆಚ್ಚುತ್ತಿದೆ. ಹಲವು ಬಾರಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕುತ್ತಿಲ್ಲ. ಇದೆಲ್ಲಕ್ಕಿಂತ ಮಣ್ಣಿನ ಫಲವತ್ತತೆ ಸಹ ಕ್ಷೀಣಿಸುತ್ತಿದೆ. ಈ ಎಲ್ಲವೂಗಳಿಗೆ ಪರಿಹಾರ ಎಂಬಂತೆ ರಸಗೊಬ್ಬರ ಚೀಟಿ ಸಹಾಯವಾಗಲಿದೆ ಎಂದು ಸಚಿವರು ವಿವರಿಸಿದ್ದಾರೆ.

Latest News

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ :                 ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ : ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಒಳ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮುದ್ದೇಬಿಹಾಳ : ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ಸಮಾನ ಮನಸ್ಕರ ಯುವ ಬಳಗದ ಸಹಯೋಗದಲ್ಲಿ 4 ರಂದು ಬೆಳಗ್ಗೆ 8 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಪಟ್ಟಣದ ಹುಡ್ಕೋದಲ್ಲಿರುವ ಗವಿಸಿದ್ದೇಶ್ವರ ವೇದಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮುದ್ದೇಬಿಹಾಳದ ಎಲ್ಲಾ ಬಾಂಧವರು ತಮ್ಮ ಮಕ್ಕಳನ್ನು ಕರೆತಂದು ಈ ಕಾರ್ಯಕ್ರಮದಲ್ಲಿ ತೊಡಗಿಸಿ ಹೋಳಿ ಆಚರಣೆ ಯಶಸ್ವಿಗೊಳಿಸುವಂತೆ ಬಳಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಮುದ್ದೇಬಿಹಾಳ : ಪಟ್ಟಣಕ್ಕೆ ಕುಡಿವ ನೀರು ಪೂರೈಕೆ ಎರಡು ದಿನ ವಿಳಂಬವಾಗಿದ್ದು ಮಾ.3 ರಿಂದ ಯತಾಸ್ಥಿತಿಯಲ್ಲಿ ವಿವಿಧ ವಾರ್ಡಗಳಿಗೆ ಸರದಿ ಮೇಲೆ ಪೂರೈಕೆ ಆಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿವ ನೀರು ಪೂರೈಕೆ ವಿಭಾಗದ ಉಸ್ತುವಾರಿ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ದಿನಗಳಿಂದ ಇಲ್ಲಿನ ಜ್ಞಾನ ಭಾರತಿ ಶಾಲೆ ಮುಂದೆ ಮುಖ್ಯ ಕೊಳವೆ ಪೈಪ್‌ನಲ್ಲಿ ಸೋರಿಕೆ ಕಂಡು ಬಂದಿತ್ತು.ಅದನ್ನು