Muda case Muda case: Permission for prosecution.. Nikhil said victory for alliance parties

Muda case: ಪ್ರಾಸಿಕ್ಯೂಷನ್‌ಗೆ ಅನುಮತಿ.. ಮೈತ್ರಿಪಕ್ಷಗಳ ಹೋರಾಟಕ್ಕೆ ಸಂದ ಜಯ ಎಂದ ನಿಖಿಲ್‌

Muda case: ಪ್ರಾಸಿಕ್ಯೂಷನ್‌ಗೆ ಅನುಮತಿ.. ಮೈತ್ರಿಪಕ್ಷಗಳ ಹೋರಾಟಕ್ಕೆ ಸಂದ ಜಯ ಎಂದ ನಿಖಿಲ್‌

ಬೆಂಗಳೂರು: ಮೂಡಾ ಹಗರಣದಲ್ಲಿ (Muda case) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ಮೈತ್ರಿಪಕ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ. ಹೀಗಾಗಿ ನೈತಿಕ‌ ಹೊಣೆ‌ ಹೊತ್ತು‌ ಸಿಎಂ ಸಿದ್ದರಾಮಯ್ಯ ‌ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ‌ ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಆಗ್ರಹಿಸಿದ್ದಾರೆ.

Join Our Telegram: https://t.me/dcgkannada

ಈ ಬಗ್ಗೆ ಅವರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ, ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ನಾನು ಶುದ್ಧಹಸ್ತ ಎಂದು ಪದೇಪದೆ ಹೇಳುವ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ರಾಜೀನಾಮೆ ನೀಡಿಲಿ ಎಂದಿದ್ದಾರೆ.

ಮೂಡಾ‌‌ ಹಗರಣದಲ್ಲಿ (Muda case) ಸಿಎಂ ರಾಜೀನಾಮೆಗೆ ಆಗ್ರಹಿಸಿ ಜೆಡಿಎಸ್-ಬಿಜೆಪಿ ಜಂಟಿಯಾಗಿ ಆ.3ರಂದು ಬೆಂಗಳೂರಿನ ಕೆಂಗೇರಿಯಿಂದ ಮೈಸೂರು ನಗರಕ್ಕೆ ಪಾದಯಾತ್ರೆ ನಡೆಸಿದನ್ನ ಸ್ಮರಿಸಬಹುದು.

ನಮ್ಮ ಹೋರಾಟ ಸತ್ಯದ ಪರ:

ನಮ್ಮ ಹೋರಾಟ ಸತ್ಯದ ಪರ ಎಂಬುದನ್ನು ರಾಜ್ಯಪಾಲರು ಕೈಗೊಂಡಿರುವ ಈ ಕ್ರಮ ಸಾಬೀತುಪಡಿಸಿದೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬ ಗಾದೆ ಮಾತು ಈಗ ಅಕ್ಷರಶಃ ಸತ್ಯವಾಗಿದೆ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬ ಅಕ್ರಮ ಎಸಗಿದೆ ಎಂಬುದು ಅಷ್ಟೇ ಸತ್ಯ ಎಂದಿದ್ದಾರೆ.

ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ:

ಸದ್ಯ ಸಂಕಷ್ಟದಲ್ಲಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ಬೇರೆ ಆಯ್ಕೆಯೇ ಇಲ್ಲ. ಅವರು ಸತ್ಯ ಒಪ್ಪಬೇಕು, ಅಕ್ರಮ ಅಂಗೀಕರಿಸಬೇಕು. ಕೂಡಲೇ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಾನು ಶುದ್ಧ ಎಂದು ಪದೇ ಪದೆ ಹೇಳುವ ಸಿದ್ದರಾಮಯ್ಯನವರು ಗೌರವಯುತವಾಗಿ ನಿರ್ಗಮಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Muda case : ಸಿಎಂ ರಾಜೀನಾಮೆ.. ಡಿಕೆಶಿ ಮಹತ್ವದ ಹೇಳಿಕೆ..

Latest News

ಡಿ.22 ರಂದು ದಿನದರ್ಶಿಕೆ ಲೋಕಾರ್ಪಣೆ

ಡಿ.22 ರಂದು ದಿನದರ್ಶಿಕೆ ಲೋಕಾರ್ಪಣೆ

ಮುದ್ದೇಬಿಹಾಳ : ಪ್ರಜಾನಾಡು ಡಿಜಿಟಲ್ ಸುದ್ದಿವಾಹಿನಿಯ ದಿನದರ್ಶಿಕೆ ಲೋಕಾರ್ಪಣೆ ಕಾರ್ಯಕ್ರಮ ಡಿ.22 ರಂದು ಸಂಜೆ

ಅಂಗವೈಕಲ್ಯ ತಡೆಗೆ ಪೊಲೀಯೋ ಲಸಿಕೆ ಹಾಕಿಸಿ

ಅಂಗವೈಕಲ್ಯ ತಡೆಗೆ ಪೊಲೀಯೋ ಲಸಿಕೆ ಹಾಕಿಸಿ

ಮುದ್ದೇಬಿಹಾಳ : ಮಕ್ಕಳು ಹುಟ್ಟಿನಿಂದಲೇ ಅಂಗವೈಕಲ್ಯತೆ ಹೊಂದುವುದನ್ನು ತಪ್ಪಿಸಲು ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ

T20 World Cup 2026 ಏಳು ಆಟಗಾರರು ಔಟ್!

T20 World Cup 2026 ಏಳು ಆಟಗಾರರು ಔಟ್!

T20 World Cup 2026: ಟಿ20 ವಿಶ್ವಕಪ್​​ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ

Good News: Gruha Lakshmi ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವೆ Lakshmi Hebbalkar ​​

Good News: Gruha Lakshmi ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವೆ Lakshmi Hebbalkar ​​

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯ (Gruha Lakshmi) ಹಣ ಬಿಡುಗಡೆ ವಿಚಾರವಾಗಿ ಇತ್ತೀಚೆಗೆ ಅಧಿವೇಶನದಲ್ಲಿ ಚರ್ಚೆಗೆ

Shocking News: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಪುಟಾಣಿ ದುರ್ಮರಣ

Shocking News: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಪುಟಾಣಿ ದುರ್ಮರಣ

ಮೈಸೂರು: ರಾಜ್ಯದಲ್ಲಿ ಘೋರ ದುರಂತ ಎನ್ನುವಂತೆ ಬಿಸಿನೀರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಧಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಲ್ಲಿ ಸಂಭವಿಸಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಜಯಗಿರಿ ಹಾಡಿಯಲ್ಲಿ ಈ ದುರಂತ ಸಂಭವಿಸಿದೆ. ರಮ್ಯಾ ಮತ್ತು ಬಸಪ್ಪ ಎಂಬುವರ ದಂಪತಿಗಳ ಪುತ್ರಿ ವೇದಾ(2) ಬಿಸಿ ನೀರಿನ ಪಾತ್ರೆಗೆ ಬಿದ್ದು ಸಾವನ್ನಪ್ಪಿದ್ದಾಳೆ. ತಾಯಿ ಸ್ನಾನ ಮಾಡಿಸೋದಕ್ಕೆ ಬಿಸಿ ನೀರು ತೋಡಿ, ತಣ್ಣೀರು ಬೆರೆಸೋದಕ್ಕೆ ತರಲು ಹೋಗಿದ್ದಾರೆ. ಈ ವೇಳೆ ವೇದಾ

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಮುದ್ದೇಬಿಹಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗರಸಂಗಿ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಂಗವಾಗಿ ಶನಿವಾರ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಲಾಯಿತು. ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, "ಪೋಲಿಯೋ ಮಾರಕ ರೋಗವಾಗಿದ್ದು, ಐದು ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು ಎಂದರು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಹಾಗೂ