ಮುದ್ದೇಬಿಹಾಳ : ಪಟ್ಟಣದ ಬನಶಂಕರಿ ದೇವಿ ಜಾತ್ರೆ ಡಿ.30 ರಿಂದ ಜ.5ರವರೆಗೆ ನಡೆಯಲಿದೆ.ಡಿ.30ರಂದು ಬೆಳಗ್ಗೆ 8ಕ್ಕೆ ಗೋಮಾತಾ ಪೂಜೆ,ಸಂಜೆ 5.30ಕ್ಕೆ ಹುಚ್ಚಯ್ಯನ ಕಳಸವು ಲೇಶಪ್ಪ ಪ್ಯಾಟಿಗೌಡರ ಮನೆಯಿಂದ ಬನಶಂಕರಿ ದೇವಸ್ಥಾನಕ್ಕೆ ಕರೆತರಲಾಗುವುದು.
ರಾತ್ರಿ 7ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ,7.30ಕ್ಕೆ ಸಾಧಕರಿಗೆ ದಾನಿಗಳಿಗೆ ಸನ್ಮಾನ ಹಾಗೂ ವೀಣಾವಾಣಿ ಸಂಗೀತ ವಿದ್ಯಾಲಯದ ಚೈತ್ರಾ ಡಂಬಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ಡಿ.31 ರಂದು ಬಳೆ ಉತ್ಸವ,ಮುಂಜಾನೆ 7ಕ್ಕೆ ಬಳೆಗಳ ಅಲಂಕಾರ,ಮದ್ಯಾಹ್ನ 12.30ಕ್ಕೆ ಎತ್ತು ಕುದುರೆ ಓಟದ ಸ್ಪರ್ಧೆ,ಮದ್ಯಾಹ್ನ 3ಕ್ಕೆ ಜೋಡು ಎತ್ತಿನ ಕೂಡುಗಾಡಿ ಓಟದ ಸ್ಪರ್ಧೆ,ಅಂದು ರಾತ್ರಿ ದಾನಿಗಳ ಸನ್ಮಾನ,ಸ್ಥಳೀಯ ಕಲಾವಿದರಿಂದ ಕಲಾ ಪ್ರದರ್ಶನ,ರಾತ್ರಿ 8ಕ್ಕೆ ಪ್ರಸಾದ ನಡೆಯಲಿದೆ.ಜ.1 ರಂದು ದೇವಿಗೆ ಅಲಂಕಾರ,ರಾತ್ರಿ 7ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ,ದಾನಿಗಳಿಗೆ ಸಾಧಕರಿಗೆ ಸನ್ಮಾನ ನಡೆಯಲಿದೆ.
8ಕ್ಕೆ ಪಂಡಿತ ಪುಟ್ಟರಾಜ ಗವಾಯಿಗಳ ಕನ್ನಡ ಮತ್ತು ಸಾಂಸ್ಕೃತಿಕ ಕಲಾ ಬಳಗದಿಂದ ಸಂಗೀತ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಜ.2 ರಂದು ಬೆಳಗ್ಗೆ 4ಕ್ಕೆ ದೇವಿಗೆ ರುದ್ರಾಭಿಷೇಕ,5.30ಕ್ಕೆ ಚಂಡಿ ಹವನ ಸಂಕಲ್ಪ ಪೂಜಾ,ಚಂಡಿ ಹವನ ಪ್ರಾರಂಭ, 10ಕ್ಕೆ ಚಂಡಿ ಹವನ ಪೂರ್ಣಾಹುತಿ,ಮದ್ಯಾಹ್ನ 1ಕ್ಕೆ ಮಹಾಪ್ರಸಾದ,2.30ಕ್ಕೆ ಶ್ರೀದೇವಿಯ ಅಗ್ನಿಪುಟು ಪೂಜಾ ಮಹೋತ್ಸವ,ಸಂಜೆ 5ಕ್ಕೆ ಪುರವಂತರ ಮೆರವಣಿಗೆ ನಂತರ ಅಗ್ನಿಪ್ರವೇಶ ರಾತ್ರಿ 8.30ಕ್ಕೆ ಮಹಾಪ್ರಸಾದ ನಡೆಯಲಿದೆ.
ಆ.3 ರಂದು ದೇವಿಗೆ ಮಹಾರುದ್ರಾಭಿಷೇಕ,ಮದ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಮದ್ಯಾಹ್ನ 3ಕ್ಕೆ ದೇವಿಯ ರಥದ ಕಳಸದ ಮೆರವಣಿಗೆ ನಡೆಯಲಿದೆ.ಸಂಜೆ 5ಕ್ಕೆ ಶಿರೋಳ ಗ್ರಾಮದಿಂದ ರಥೋತ್ಸವದ ಹಗ್ಗದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬರುವುದು.ಸಂಜೆ 6ಕ್ಕೆ ದೇವಿಯ ರಥೋತ್ಸವ ಜರುಗಲಿದೆ.7ಕ್ಕೆ ಮಹಾದಾನಿಗಳಿಗೆ ಸಾಧಕರಿಗೆ ಸನ್ಮಾನ ನಡೆಯಲಿದೆ.ನಂತರ ಕಲಾ ಸಿಂಚನ ಮೆಲೋಡಿಯಸ್ ತಂಡದಿAದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







