ಮುದ್ದೇಬಿಹಾಳ : ಡಿ.30 ರಿಂದ ಜ.5ರವರೆಗೆ ಬನಶಂಕರಿ ದೇವಿ ಜಾತ್ರೋತ್ಸವ

ಮುದ್ದೇಬಿಹಾಳ : ಡಿ.30 ರಿಂದ ಜ.5ರವರೆಗೆ ಬನಶಂಕರಿ ದೇವಿ ಜಾತ್ರೋತ್ಸವ

ಮುದ್ದೇಬಿಹಾಳ : ಪಟ್ಟಣದ ಬನಶಂಕರಿ ದೇವಿ ಜಾತ್ರೆ ಡಿ.30 ರಿಂದ ಜ.5ರವರೆಗೆ ನಡೆಯಲಿದೆ.ಡಿ.30ರಂದು ಬೆಳಗ್ಗೆ 8ಕ್ಕೆ ಗೋಮಾತಾ ಪೂಜೆ,ಸಂಜೆ 5.30ಕ್ಕೆ ಹುಚ್ಚಯ್ಯನ ಕಳಸವು ಲೇಶಪ್ಪ ಪ್ಯಾಟಿಗೌಡರ ಮನೆಯಿಂದ ಬನಶಂಕರಿ ದೇವಸ್ಥಾನಕ್ಕೆ ಕರೆತರಲಾಗುವುದು.

ರಾತ್ರಿ 7ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ,7.30ಕ್ಕೆ ಸಾಧಕರಿಗೆ ದಾನಿಗಳಿಗೆ ಸನ್ಮಾನ ಹಾಗೂ ವೀಣಾವಾಣಿ ಸಂಗೀತ ವಿದ್ಯಾಲಯದ ಚೈತ್ರಾ ಡಂಬಳ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

ಡಿ.31 ರಂದು ಬಳೆ ಉತ್ಸವ,ಮುಂಜಾನೆ 7ಕ್ಕೆ ಬಳೆಗಳ ಅಲಂಕಾರ,ಮದ್ಯಾಹ್ನ 12.30ಕ್ಕೆ ಎತ್ತು ಕುದುರೆ ಓಟದ ಸ್ಪರ್ಧೆ,ಮದ್ಯಾಹ್ನ 3ಕ್ಕೆ ಜೋಡು ಎತ್ತಿನ ಕೂಡುಗಾಡಿ ಓಟದ ಸ್ಪರ್ಧೆ,ಅಂದು ರಾತ್ರಿ ದಾನಿಗಳ ಸನ್ಮಾನ,ಸ್ಥಳೀಯ ಕಲಾವಿದರಿಂದ ಕಲಾ ಪ್ರದರ್ಶನ,ರಾತ್ರಿ 8ಕ್ಕೆ ಪ್ರಸಾದ ನಡೆಯಲಿದೆ.ಜ.1 ರಂದು ದೇವಿಗೆ ಅಲಂಕಾರ,ರಾತ್ರಿ 7ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ,ದಾನಿಗಳಿಗೆ ಸಾಧಕರಿಗೆ ಸನ್ಮಾನ ನಡೆಯಲಿದೆ.
8ಕ್ಕೆ ಪಂಡಿತ ಪುಟ್ಟರಾಜ ಗವಾಯಿಗಳ ಕನ್ನಡ ಮತ್ತು ಸಾಂಸ್ಕೃತಿಕ ಕಲಾ ಬಳಗದಿಂದ ಸಂಗೀತ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಜ.2 ರಂದು ಬೆಳಗ್ಗೆ 4ಕ್ಕೆ ದೇವಿಗೆ ರುದ್ರಾಭಿಷೇಕ,5.30ಕ್ಕೆ ಚಂಡಿ ಹವನ ಸಂಕಲ್ಪ ಪೂಜಾ,ಚಂಡಿ ಹವನ ಪ್ರಾರಂಭ, 10ಕ್ಕೆ ಚಂಡಿ ಹವನ ಪೂರ್ಣಾಹುತಿ,ಮದ್ಯಾಹ್ನ 1ಕ್ಕೆ ಮಹಾಪ್ರಸಾದ,2.30ಕ್ಕೆ ಶ್ರೀದೇವಿಯ ಅಗ್ನಿಪುಟು ಪೂಜಾ ಮಹೋತ್ಸವ,ಸಂಜೆ 5ಕ್ಕೆ ಪುರವಂತರ ಮೆರವಣಿಗೆ ನಂತರ ಅಗ್ನಿಪ್ರವೇಶ ರಾತ್ರಿ 8.30ಕ್ಕೆ ಮಹಾಪ್ರಸಾದ ನಡೆಯಲಿದೆ.

ಆ.3 ರಂದು ದೇವಿಗೆ ಮಹಾರುದ್ರಾಭಿಷೇಕ,ಮದ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಮದ್ಯಾಹ್ನ 3ಕ್ಕೆ ದೇವಿಯ ರಥದ ಕಳಸದ ಮೆರವಣಿಗೆ ನಡೆಯಲಿದೆ.ಸಂಜೆ 5ಕ್ಕೆ ಶಿರೋಳ ಗ್ರಾಮದಿಂದ ರಥೋತ್ಸವದ ಹಗ್ಗದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಬರುವುದು.ಸಂಜೆ 6ಕ್ಕೆ ದೇವಿಯ ರಥೋತ್ಸವ ಜರುಗಲಿದೆ.7ಕ್ಕೆ ಮಹಾದಾನಿಗಳಿಗೆ ಸಾಧಕರಿಗೆ ಸನ್ಮಾನ ನಡೆಯಲಿದೆ.ನಂತರ ಕಲಾ ಸಿಂಚನ ಮೆಲೋಡಿಯಸ್ ತಂಡದಿAದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರುಗಲಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ :                 ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಲಕ್ಷ್ಮೀ ಅಡಗಿಮನಿ ರಾಜ್ಯಕ್ಕೆ 6ನೇ ಸ್ಥಾನ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಅಮೋಘ ಸಾಧನೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಸರ್ವ ಸಮಾಜದ ಬಾಂಧವರೊoದಿಗೆ ಬಸವ ಜಯಂತಿ ಆಚರಣೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಮಾ.20 ರಂದು ನಡೆಯಲಿರುವ ವಿಶ್ವ ಗುರು ಬಸವಣ್ಣನವರ ಜಯಂತಿಯನ್ನು ಸರ್ವ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ನಾಗರಬೆಟ್ಟ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ

ಮುದ್ದೇಬಿಹಾಳ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಶೇ.100ರಷ್ಟು ಫಲಿತಾಂಶ

ಮುದ್ದೇಬಿಹಾಳ : ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ಫಲಿತಾಂಶ

ಡೆತ್ ನೋಟ್ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ಟು ಖಾಸಗಿ ಟ್ರಾವೆಲ್ಸ್ ಏಜೆಂಟ್ ಆತ್ಮಹತ್ಯೆ

ಮುದ್ದೇಬಿಹಾಳ : ಸಾಲಗಾರರಿಗೆ ಕೊಟ್ಟಿದ್ದ ಹಣ ಮರಳಿ ಕೊಡದ ಕಾರಣಕ್ಕೆ ಮನನೊಂದು ಖಾಸಗಿ ಟ್ರಾವೆಲ್ಸ್ ಏಜೆಂಟ್‌ವೊಬ್ಬರು ಜಮೀನೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ತಾಲ್ಲೂಕಿನ ಬಿದರಕುಂದಿ ಗ್ರಾಮದ ಹತ್ತಿರ ಬೆಳಕಿಗೆ ಬಂದಿದೆ. ಮುದ್ದೇಬಿಹಾಳದಲ್ಲಿ ಎಸ್.ಆರ್.ಎಸ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮೂಲತಃ ಗೋನಾಳ ಎಸ್.ಎಚ್.ಗ್ರಾಮದ ನಿವಾಸಿಯಾಗಿದ್ದ ಚನ್ನಯ್ಯ ಗಂಗಯ್ಯ ಹಿರೇಮಠ(45)ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ನನ್ನ ಸಾವಿಗೆ ರವಿ ನಾಲವಡೆ ಹಾಗೂ ವೈಜನಾಥ ಮರಾಠೆ ಎಂಬುವರು ಕಾರಣರಾಗಿದ್ದಾರೆ ಎಂದು ನಾಲ್ಕು

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಹೋಳ್ಕರ್ ಅವಾರ್ಡ್ ಪರೀಕ್ಷೆಗೆ 900 ವಿದ್ಯಾರ್ಥಿಗಳು ಭಾಗಿ : ಪ್ರತಿಭಾನ್ವಿತ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ-ಎಂ.ಎನ್.ಮದರಿ

ಮುದ್ದೇಬಿಹಾಳ : ಬಡ,ಕೂಲಿ ಕಾರ್ಮಿಕರ ಪ್ರತಿಭಾವಂತ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳಲು ನಮ್ಮ ವಿದ್ಯಾಸಂಸ್ಥೆಯಿoದ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು,ಸಮಾಜ ಸೇವಕರಾದ ಎಂ.ಎನ್.ಮದರಿ ಹೇಳಿದರು. ಪಟ್ಟಣದ ಅಭ್ಯುದಯ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಹಿಲ್ಯಾದೇವಿ ಹೋಳ್ಕರ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅವರು ಮಾತನಾಡಿದರು.2017ರಿಂದ ಇಲ್ಲಿವರೆಗೆ ವಿವಿಧ ಸಾಧನೆಗಳನ್ನು ಶಾಲೆ ಮಾಡುತ್ತ ಬಂದಿದೆ.ಇಬ್ಬರು