ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಶೂ ಎಸೆತ ಪ್ರಕರಣ, ತಾಲ್ಲೂಕಿನ ಗ್ರಾಮವೊಂದರಲ್ಲಿ ದಲಿತ ಅಪ್ರಾಪ್ತ ಯುವತಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣ ಹಾಗೂ ರಾಜ್ಯದ ವಿವಿಧೆಡೆ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಘಟನೆಗಳನ್ನು ಖಂಡಿಸಿ ಶುಕ್ರವಾರ ವಿವಿಧ ದಲಿತಪರ ಸಂಘಟನೆಗಳು ಕರೆ ನೀಡಿದ್ದ ಮುದ್ದೇಬಿಹಾಳ ಬಂದ್‌ಗೆ ನಾಗರಿಕರು ಉತ್ತಮ ಸ್ಪಂದನೆ ನೀಡಿದ್ದು ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬೆಳಗ್ಗೆ 6 ಗಂಟೆಯಿAದಲೇ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಬಸ್ ನಿಲ್ದಾಣದಲ್ಲಿ ಜನರು ಬರಲಿಲ್ಲ.ಬಂದ್ ಕರೆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವವರ ಸಂಖ್ಯೆಯೂ ಇಳಿಮುಖವಾಗಿ ಜನಸಂಚಾರ ವಿರಳವಾಗಿತ್ತು. ಸರಕಾರಿ ನೌಕರಿ ಸೇವೆಗೆ ತೆರಳಲು ಬಸ್ ಇಲ್ಲದೇ ಪರದಾಡಿ ಖಾಸಗಿ ವಾಹನಗಳನ್ನು ಪಟ್ಟಣದ ಹೊರವಲಯದಲ್ಲಿ ಆಶ್ರಯಿಸಿದರು.

ಬಂದ್ ಯಶಸ್ವಿಗೆ ಸಹಕರಿಸುವಂತೆ ನಾಗರಿಕರಲ್ಲಿ,ವ್ಯಾಪಾರಸ್ಥರಲ್ಲಿ,ವಿವಿಧ ಖಾಸಗಿ ಶಾಲೆಗಳು,ಹೊಟೇಲ್,ಬಟ್ಟೆ,ಬಜಾರ್ ಅಸೋಶಿಯೇಷನ್,ಏಪಿಎಂಸಿ,ಸರಾಫ್ ವರ್ತಕರು,ಕಿರಾಣಿ ವರ್ತಕರು,ಬೀದಿ ಬದಿ ವ್ಯಾಪಾರಸ್ಥರು ಸೇರಿದಂತೆ ಪಟ್ಟಣದ ನಾಗರಿಕರಿಗೆ ದಲಿತಪರ,ಪ್ರಗತಿಪರ ಸಂಘಟನೆಯ ಒಕ್ಕೂಟದವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಯಾರೊಬ್ಬರೂ ಅಂಗಡಿಗಳನ್ನು ತೆರೆಯಲಿಲ್ಲ.

ಅಗತ್ಯ ವಸ್ತುಗಳಾದ ಔಷಧಿ,ಹಾಲು,ದಿನಪತ್ರಿಕೆ ಹಾಗೂ ಆಸ್ಪತ್ರೆಗಳ ಸೇವೆ ಅಬಾಧಿತವಾಗಿತ್ತು.ಅಟೋ ಸಂಚಾರ ತುರ್ತು ಪರಿಸ್ಥಿತಿಗೆ ಸೇವೆ ನೀಡಿದ್ದು ಕಂಡು ಬಂದಿತು.

ಭಾರಿ ಪೊಲೀಸ್ ಬಂದೋಬಸ್ತ್ : ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ವಹಿಸಿದ್ದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೆಳಗ್ಗೆ ಸಿಪಿಐ ಮೊಹ್ಮದಫಸಿವುದ್ದೀನ,ಪಿಎಸ್‌ಐ ಸಂಜಯ ತಿಪರೆಡ್ಡಿ ಸಿಬ್ಬಂದಿಗೆ ಪೆಟ್ರೋಲಿಂಗ್ ನಡೆಸಿದರು.ಪಟ್ಟಣದ ವ್ಯಾಪ್ತಿಯಲ್ಲಿ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ,ಮಾನವ ಸರಪಳಿ ನಿರ್ಮಾಣದ ಹಿನ್ನೆಲೆಯಲ್ಲಿ ಬ¸ Àವೇಶ್ವರ ಸಂಪರ್ಕಿಸುವ ನಾಲ್ಕು ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಪೊಲೀಸರು ಬಂದ್ ಮಾಡಿಸಿದ್ದರು.ಇದರಿಂದ ಬೈಕ್,ಕಾರು,ಜೀಪು,ಅಂಬ್ಯುಲೆನ್ಸ್ಗಳAತಹ ತುರ್ತು ಸೇವೆಗಳನ್ನು ನೀಡಲು ತೊಂದರೆಯಾಗಿತು.ಚಹಾ, ಪಾನ್ ಅಂಗಡಿ ಬಂದ್ ಮಾಡಿದ್ದರು.

ಸಂವಿಧಾನಕ್ಕೆ ಅವಮಾನವಾದರೆ ಸಹಿಸುವುದಿಲ್ಲ-ನಡಹಳ್ಳಿ
ಮುದ್ದೇಬಿಹಾಳ : ಸುಪ್ರೀಂಕೋರ್ಟ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದ ವಕೀಲರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಆಗ್ರಹಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ವಿವಿಧ ದಲಿತಪರ,ಪ್ರಗತಿಪರ ಒಕ್ಕೂಟದ ನೇತೃತ್ವದಲ್ಲಿ ಕರೆ ನೀಡಿದ್ದ ಮುದ್ದೇಬಿಹಾಳ ಬಂದ್ ಕರೆಯ ಹಿನ್ನೆಲೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರನ್ನುದ್ದೇಶಿಸಿ ಅವರು ಮಾತನಾಡಿದರು.ಕ್ಷಮೆಗೆ ಅರ್ಹ ಅಲ್ಲದ ಕೆಲಸ ಮಾಡಿರುವ ವಕೀಲನ ರಕ್ಷಣೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಟೀಕಿಸಿದರು.

ಮಾನವ ಬಂಧುತ್ವ ವೇದಿಕೆ ಸಂಚಾಲಕ ಎಸ್.ಎಂ.ನೆರಬೆAಚಿ,ದಲಿತಪರ ಸಂಘಟನೆ ಹೋರಾಟಗಾರ ಚೆನ್ನಪ್ಪ ವಿಜಯಕರ,ಎನ್.ಎಸ್.ಯೂ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ, ರೇವಣೆಪ್ಪ ಚಲವಾದಿ ಮತ್ತಿತರರು ಮಾತನಾಡಿ,ತಾಲ್ಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು.ಅಮಾನವೀಯವಾದ ಇಂತಹ ಘಟನೆಗಳು ನಡೆಯಬಾರದೆಂದರೆ ಸರಕಾರ ಕಠಿಣ ಶಿಕ್ಷೆ ತ್ವರಿತವಾಗಿ ವಿಧಿಸಬೇಕು.ಸಂವಿಧಾನದವನ್ನು ಅಪಮಾನಿಸುವ ಯಾರೇ ಇದ್ದರೂ ಅವರನ್ನು ಮಟ್ಟ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಹೋರಾಟದ ನೇತೃತ್ವ ವಹಿಸಿದ್ದ ಮುಖಂಡ ಹರೀಶ ನಾಟೀಕಾರ,ಯುವ ಕಾಂಗ್ರೆಸ್ ಮುಖಂಡ ಮಹ್ಮದರಫೀಕ ಶಿರೋಳ,ವಾಲ್ಮೀಕಿ ಸಮಾಜದ ಅಧ್ಯಕ್ಷ ಬಲಭೀಮ ನಾಯ್ಕಮಕ್ಕಳ ಮತ್ತಿತರರು ಮಾತನಾಡಿದರು.
ಮುಖಂಡರಾದ ಪರಶುರಾಮ ಮುರಾಳ,ಪ್ರಕಾಶ ಚಲವಾದಿ ಸರೂರ,ಆನಂದ ದೇವೂರ, ಆನಂದ ಮುದೂರ,ಮಲ್ಲು ತಳವಾರ, ಸಿದ್ದಪ್ಪ ಚಲವಾದಿ,ಮಂಜುನಾಥ ಕಟ್ಟಿಮನಿ,ಪ್ರಶಾಂತ ಕಾಳೆ,ಯಮನಪ್ಪ ಚಲವಾದಿ ಮೊದಲಾದವರು ಪಾಲ್ಗೊಂಡಿದ್ದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಹೋರಾಟಗಾರರು ರ‍್ಯಾಲಿ ನಡೆಸಿದರು.ಅಂಬೇಡ್ಕರ್ ವೃತ್ತದಲ್ಲಿ ತಹಶೀಲ್ದಾರ್ ಕೀರ್ತಿ ಚಾಲಕ್ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

ಅತ್ಯಾಚಾರ ಎಸಗಿ,ಕೊಲೆಯಾಗಿರುವ ಅಪ್ರಾಪ್ತೆ ಕುಟುಂಬಕ್ಕೆ ಎರಡು ಎಕರೆ ಜಮೀನು, 50 ಲಕ್ಷ ಪರಿಹಾರ,ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ಒದಗಿಸಬೇಕು.ಆರೋಪಿತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.ಸಿಜೆಐ ಮೇಲೆ ಶೂ ಎಸೆದ ವಕೀಲ ರಾಕೇಶ ಕಿಶೋರ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು. ಚಾಮರಾಜನಗರ ಜಿಲ್ಲೆ ಜ್ಯೋತಿಗೌಡನಪುರ ಗ್ರಾಮದಲ್ಲಿ ಬುದ್ದ,ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿರುವ ದುಷ್ಕರ್ಮಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಯಿತು.

Latest News

6.83 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ:                                                                                                                                                           ಸ್ಥಿತಿವಂತರು, ಗ್ಯಾರಂಟಿ ಟೀಕಿಸುವವರು ಯೋಜನೆ ಬಿಟ್ಟುಕೊಡಿ – ನಾಡಗೌಡ

6.83 ಕೋಟಿ ರೂ.ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ: ಸ್ಥಿತಿವಂತರು, ಗ್ಯಾರಂಟಿ ಟೀಕಿಸುವವರು ಯೋಜನೆ ಬಿಟ್ಟುಕೊಡಿ – ನಾಡಗೌಡ

ಮುದ್ದೇಬಿಹಾಳ : ಗ್ಯಾರಂಟಿ ಯೋಜನೆಗಳಿಗಾಗಿ ರಾಜ್ಯ ಸರ್ಕಾರ 50 ಸಾವಿರ ಕೋಟಿ ರೂ.ವೆಚ್ಚ ಮಾಡುತ್ತಿದೆ.ಗ್ಯಾರಂಟಿ

ಈ ಸಲ ನನ್ನನ್ನು ಮಂತ್ರಿ ಮಾಡುವುದಾಗಿ ಹೇಳಿದ್ದಾರೆ-ಅಪ್ಪಾಜಿ ನಾಡಗೌಡ

ಈ ಸಲ ನನ್ನನ್ನು ಮಂತ್ರಿ ಮಾಡುವುದಾಗಿ ಹೇಳಿದ್ದಾರೆ-ಅಪ್ಪಾಜಿ ನಾಡಗೌಡ

ಮುದ್ದೇಬಿಹಾಳ : ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೆ ಇಲ್ಲ. ಅದು ಹೈಕಮಾಂಡ್ ನಿರ್ಧಾರ.ಈ ವಿಷಯದ

TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಧಾರವಾಡ ಅ.27: ಸುಮಾರು ವರ್ಷಗಳ ನಂತರ ಪ್ರಥಮ ಬಾರಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು

ಘತ್ತರಗಿ ಭಾಗ್ಯವಂತಿಯ 23ನೇ ವರ್ಷದ ಪಾದಯಾತ್ರೆ ಆರಂಭ

ಘತ್ತರಗಿ ಭಾಗ್ಯವಂತಿಯ 23ನೇ ವರ್ಷದ ಪಾದಯಾತ್ರೆ ಆರಂಭ

ಮಾರನಾಳ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳದಿಂದ ಶ್ರೀ ಘತ್ತರಗಿ ಭಾಗ್ಯವಂತಿಯವರೆಗೆ ಪಾದಯಾತ್ರೆಯನ್ನು ಗ್ರಾಮದೇವತೆ ಶ್ರೀ ಗದ್ಯಮದೇವಿ ದೇವಸ್ಥಾನದಿಂದ ಪ್ರಾರಂಭಿಸಿದರು. ಪ್ರತಿ ವರ್ಷದಂತೆ ಈ ವರ್ಷ ಸೇರಿ 23ನೇ ವರ್ಷ ಪಾದಯಾತ್ರೆ ಇದಾಗಿದ್ದು ಈ ಪಾದಯಾತ್ರೆಯಲ್ಲಿ ಮಾರನಾಳ ಊರಿನ ಗುರು ಹಿರಿಯರು ಯುವಕರು ಹಾಗೂ ಮಹಿಳೆಯರು ಸೇರಿ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯು ಸರಿ-ಸುಮಾರು 120 ಕಿಲೋ ಮೀಟರ್ ನಷ್ಟು ದೂರವಿದ್ಧಿ ಆದರೂ ಸಹಾ ಮಳೆ, ಗಾಳಿ, ಚಳ್ಳಿ,

ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ

ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ

ಮುದ್ದೇಬಿಹಾಳ : ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಬಾಯ್ಲರ್ ಪ್ರದೀಪನ ಕಾರ್ಯಕ್ಕೆ ಕಾರ್ಖಾನೆ ಅಧ್ಯಕ್ಷ ಹಣಮಂತಗೌಡ ಪಾಟೀಲ ಚಾಲನೆ ನೀಡಿದರು. ಬಾಯ್ಲರ್ ಪ್ರದೀಪನಕ್ಕೂ ಮುನ್ನ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.ಕಾರ್ಖಾನೆಯ ನಿರ್ದೇಶಕರಾದ ಎಚ್.ಎಲ್.ಪಾಟೀಲ್,ರಾಹುಲಗೌಡ ಪಾಟೀಲ, ಶ್ರೀನಿವಾಸ ಅರಕೇರಿ,ಅಧಿಕ ಪಾಟೀಲ, ಪ್ರಜ್ವಲ ಪಾಟೀಲ,ನಾಲತವಾಡ ಪ.ಪಂ ಸದಸ್ಯ ಪೃಥ್ವಿ ನಾಡಗೌಡ, ಅಪ್ಪು ನಾಡಗೌಡ, ಮಲ್ಲಿಕಾರ್ಜುನ ನಾಡಗೌಡ ಇದ್ದರು.