ಮುದ್ದೇಬಿಹಾಳ : ಸಂಗೊಳ್ಳಿ ರಾಯಣ್ಣ ವೃತ್ತದ ನಿರ್ಮಾಣ ಕಾರ್ಯಕ್ಕೆ ಚಾಲನೆ

ಮುದ್ದೇಬಿಹಾಳ : ಸಂಗೊಳ್ಳಿ ರಾಯಣ್ಣ ವೃತ್ತದ ನಿರ್ಮಾಣ ಕಾರ್ಯಕ್ಕೆ ಚಾಲನೆ

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್‌ಗೆ ತೆರಳುವ ರಸ್ತೆ ಮುಂದೆ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಪ್ರತಿಷ್ಠಾಪನೆಗೆ ವೃತ್ತದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ಹೇಳಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಭಾನುವಾರ ತಾಲ್ಲೂಕು ಕುರುಬರ ಸಂಘದ ಪದಾಧಿಕಾರಿಗಳೊಂದಿಗೆ ವೃತ್ತದ ಕಾಮಗಾರಿ, ರೂಪುರೇಷೆಯ ಕುರಿತು ಇಂಜಿನಿಯರ್‌ರೊAದಿಗೆ ಚರ್ಚೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ರಸ್ತೆ ನಿರ್ಮಾಣದ ವೇಳೆ ಅಶೋಕಾ ಬಿಲ್ಡಕಾನ್ ಕಂಪನಿಯವರು ವೃತ್ತದ ನಿರ್ಮಾಣಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದ್ದರು.ಆದರೆ ಈವರೆಗೂ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.ಹೀಗಾಗಿ ಸಮಾಜದವರೇ ಮುಂದೆ ನಿಂತು ರಾಯಣ್ಣನವರ ವೃತ್ತದ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ.ಆದಷ್ಟು ಬೇಗನೇ ವೃತ್ತದ ಕಾಮಗಾರಿ ಪೂರ್ಣಗೊಂಡು ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸುವ ಕಾರ್ಯ ಮಾಡಲಾಗುವುದು.ಬಸವೇಶ್ವರ ಹಾಗೂ ಅಂಬೇಡ್ಕರ್ ವೃತ್ತಗಳ ಎತ್ತರ ಗಮನಿಸಿ ರಾಯಣ್ಣನವರ ವೃತ್ತ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲ ಎಸ್.ಎಸ್.ಪೂಜಾರಿ, ಮುಖಂಡರಾದ ಹಣಮಂತ ಮೇಲಿನಮನಿ, ಸಂಗಣ್ಣ ಮೇಲಿನಮನಿ,ಸಂತೋಷ ನಾಯ್ಕೋಡಿ,ನಾಗಪ್ಪ ರೂಢಗಿ,ಬಿ.ಎಸ್.ಮೇಟಿ ಮೊದಲಾದವರು ಇದ್ದರು.

Latest News

ಮಾ.9 ರಂದು ಎಂಟನೇ ವರ್ಷದ ವಾರ್ಷಿಕೋತ್ಸವ

ಮಾ.9 ರಂದು ಎಂಟನೇ ವರ್ಷದ ವಾರ್ಷಿಕೋತ್ಸವ

ಮುದ್ದೇಬಿಹಾಳ : ಪಟ್ಟಣದ ಮಹಾಂತೇಶ ನಗರದಲ್ಲಿರುವ ವಿಶ್ವಭಾರತಿ ಪಬ್ಲಿಕ್ ಸ್ಕೂಲ್‌ನ ಎಂಟನೇ ವಾರ್ಷಿಕೋತ್ಸವ ಕಾರ್ಯಕ್ರಮ

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮುದ್ದೇಬಿಹಾಳ : ಕರಾವಳಿ ಮತ್ತು ಒಳನಾಡು ಮೀನುಗಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ

ಶಾಸಕ ನಾಡಗೌಡ,ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ:           ಮಾ.11 ರಿಂದ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಶಾಸಕ ನಾಡಗೌಡ,ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಮಾ.11 ರಿಂದ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಮುದ್ದೇಬಿಹಾಳ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ-ನೌಕರರ ವಿವಿಧ ಬೇಡಿಕೆಗಳನ್ನು ರಾಜ್ಯ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ :                 ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ : ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಒಳ

ಮುದ್ದೇಬಿಹಾಳ : ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮುದ್ದೇಬಿಹಾಳ : ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಮುದ್ದೇಬಿಹಾಳ : ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹಳೇ ಸರಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಬುಧವಾರ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವನನ್ನು ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದ ಶರಣಬಸಪ್ಪ ಸಾಯಬಣ್ಣ ಗೋನಾಳ(45) ಎಂದು ಗುರುತಿಸಲಾಗಿದೆ. ಕುಡಿದ ಮತ್ತಿನಲ್ಲಿ ಯಾವುದೋ ವಿಚಾರಕ್ಕೆ ಮಾನಸಿಕ ಮಾಡಿಕೊಂಡು ತನ್ನ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತನ ಪತ್ನಿ V.S ಗೋನಾಳ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ (ಬಿಎನ್‌ಎಸ್-194) ಪ್ರಕರಣ

ಅಗ್ನಿಶಾಮಕ ತಂಡದಿOದ ಕಾರ್ಮಿಕನ ರಕ್ಷಣೆ;                ಕಾಂಕ್ರಿಟ್ ಮಿಕ್ಸರ್ ಯಂತ್ರದಲ್ಲಿ ಕೈ ಸಿಲುಕಿ ಎಲುಬುಗಳ ತುಂಡು..!

ಅಗ್ನಿಶಾಮಕ ತಂಡದಿOದ ಕಾರ್ಮಿಕನ ರಕ್ಷಣೆ; ಕಾಂಕ್ರಿಟ್ ಮಿಕ್ಸರ್ ಯಂತ್ರದಲ್ಲಿ ಕೈ ಸಿಲುಕಿ ಎಲುಬುಗಳ ತುಂಡು..!

ಮುದ್ದೇಬಿಹಾಳ : ಕಾಂಕ್ರೀಟ್ ಮಿಕ್ಸರ್‌ನಲ್ಲಿ ಕಾರ್ಮಿಕನೊಬ್ಬನ ಕೈ ಸಿಲುಕಿಕೊಂಡು ಎಲುಬುಗಳು ತುಂಡಾಗಿರುವ ಘಟನೆ ಮಂಗಳವಾರ ಇಲ್ಲಿನ ಪಟ್ಟಣದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಬಳಿ ನಡೆದಿದೆ. ಅಬ್ಬಿಹಾಳ ಗ್ರಾಮದ ಕಾರ್ಮಿಕ ಗಂಗಣ್ಣ ಬಸಪ್ಪ ಕಂಬಳಿ(25) ಘಟನೆಯಲ್ಲಿ ಅವರ ಬಲಗೈ ಮಣಿಕಟ್ಟಿಗೆ ತೀವ್ರ ಗಾಯವಾಗಿ ನರಗಳು ಮತ್ತು ಎಲಬು ತುಂಡಾಗಿದೆ.ವಿಷಯ ತಿಳಿದ ತಕ್ಷಣ ಹತ್ತಿರದಲ್ಲಿಯೇ ಇದ್ದ ಅಗ್ನಿಶಾಮಕ ಇಲಾಖೆ ಇಡೀ ತಂಡದ ಸಿಬ್ಬಂದಿ ಧಾವಿಸಿ ಬಂದು ಕಾರ್ಮಿಕನನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಿದರು. ಕಾಂಕ್ರಿಟ್