ಮುದ್ದೇಬಿಹಾಳ : ಯಾವುದೇ ರಾಜಕೀಯ ಪ್ರತಿಫಲಾಪೇಕ್ಷೆಯಿಲ್ಲದೇ ಅಸ್ಕಿ ಫೌಂಡೇಶನ್ ಕಳೆದ 15 ವರ್ಷಗಳಿಂದ ಜನಸೇವೆಯಲ್ಲಿ ತೊಡಗಿಕೊಂಡಿದೆ ಎಂದು ಅಸ್ಕಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರೈತರಿಗೆ ರಿಯಾಯಿತಿ ದರದಲ್ಲಿ ಜೆಸಿಬಿ ಸೇವೆ, ರೈತರ ಆತ್ಮಹತ್ಯೆ,ಅಪಘಾತದ ಪ್ರಕರಣಗಳಲ್ಲಿ ನೊಂದವರಿಗೆ ಫೌಂಡೇಶನ್ದಿoದ ಕಾರ್ಯ ಮಾಡುತ್ತಾ ಬಂದಿದ್ದೇವೆ ಎಂದರು.
ರಂಜಾನ್ ಮಾಸದ ನಿಮಿತ್ಯ ಮುಸ್ಲಿಂ ಬಾಂಧವರಿಗೆ ಇಫ್ತಾರಕೂಟಗಳನ್ನು ಆಯೋಜಿಸಿದ್ದು ಮಾ.9 ರಂದು ಮುದ್ದೇಬಿಹಾಳದ ಮಹೆಬೂಬ ನಗರದ ಉರ್ದು ಶಾಲೆಯಲ್ಲಿ, ನಾಲತವಾಡದಲ್ಲಿ ಜಾಮೀಯಾ ಮಸೀದಿಯಲ್ಲಿ, ಮಾ.11 ರಂದು ಕಾಳಗಿಯಲ್ಲಿ, ಮಾ.15 ರಂದು ಕಾಶಿನಕುಂಟಿ ಗ್ರಾಮಗಳಲ್ಲಿ ಇಫ್ತಾರಕೂಟಗಳನ್ನು ಆಯೋಜಿಸಿದ್ದೇವೆ ಎಂದು ಹೇಳಿದರು.
ಮೌಲಾನಾ ಅಲ್ಲಾಭಕ್ಷ ಖಾಜಿ ಮಾತನಾಡಿ, ಸಾಮಾಜಿಕ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಮುದ್ದೇಬಿಹಾಳದ ಇಫ್ತಾರಕೂಟ ಕಾರ್ಯಕ್ರಮದಲ್ಲಿ ಎಲ್ಲ ಮುಸ್ಲಿಂ ಬಾಂಧವರು ಸಂಜೆ 5.30ಕ್ಕೆ ಆಗಮಿಸಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಮಾತನಾಡಿ, ಅಸ್ಕಿ ಫೌಂಡೇಶನ್ದಿoದ ಸಮಾಜ ಸೇವಾ ಚಟುವಟಿಕೆಗಳು ನಡೆಯುತ್ತಿವೆ.ಕಾರಣ ಈಗ ಯಾವ ಚುನಾವಣೆಗಳು ಇಲ್ಲ.ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರ ಮಾನವೀಯ ಕಾರ್ಯವನ್ನು ಎಲ್ಲರು ಬೆಂಬಲಿಸೋಣ ಎಂದರು.
ಗೋವಾ ಕನ್ನಡಿಗರ ಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ,ಎಂ.ಜಿ.ಬಿರಾದಾರ(ಬಾoಬೆಗೌಡ) ಮಾತನಾಡಿದರು.ಜಮೇಯತೆ ಉಲಮಾ ಹಿಂದ್ ಘಟಕದ ಅಧ್ಯಕ್ಷ ಕಾರಿ ಇಸಾಕ್ ಮಾಗಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮುಖಂಡರಾದ ನಾನಾಗೌಡ ಕೊಣ್ಣೂರ,ಕಲಾಂ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹುಸೇನ್ ಮುಲ್ಲಾ,ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಉಪಾಧ್ಯಕ್ಷ ಜಬ್ಬಾರ ಗೋಲಂದಾಜ,ಗ್ಯಾರoಟಿ ಸಮೀತಿ ಸದಸ್ಯ ಸಂಗಣ್ಣ ಮೇಲಿನಮನಿ, ಮೊಹ್ಮದ್ರಫೀಕ ನಾಗರಾಳ, ಸರ್ಕಾರಿ ಆಸ್ಪತ್ರೆಆರೋಗ್ಯ ರಕ್ಷಾ ಸಮೀತಿ ನಾಮನಿರ್ದೇಶಿತ ಸದಸ್ಯ ಮಹ್ಮದರಫೀಕ ಶಿರೋಳ ಇದ್ದರು.







