ಮುದ್ದೇಬಿಹಾಳ : ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ನೂರು ದಿನಗಳ ಖಾತರಿ ಕೊಡುವ ಯೋಜನೆಯಾಗಿದ್ದು 370 ರೂ.ದಿನಗೂಲಿ ನೀಡುತ್ತಿದೆ ಎಂದು ತಾಪಂ ನೂತನ ಪ್ರಭಾರ ಸಹಾಯಕ ನಿರ್ದೇಶಕ ಎಸ್.ಎಸ್.ಗಣಾಚಾರಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಹಿಂದಿನ ಅಧಿಕಾರಿ ಪಿ.ಎಸ್.ಕಸನಕ್ಕಿ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೇಮಕವಾದ ಬಳಿಕ ಅಧಿಕಾರ ಸ್ವೀಕರಿಸಿ ಅವರು ಮಾತನಾಡಿದರು.
ರೈತರ ಹೊಲದಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಕೆಲಸಗಳಿಗೆ ಪಂಚಾಯಿತಿಯಿAದ ಆದ್ಯತೆ ನೀಡಲಾಗುತ್ತಿದೆ ಎಂದರು.
ತಾಪA ಇಒ ವೆಂಕಟೇಶ ವಂದಾಲ ಮಾತನಾಡಿ, ಗ್ರಾಮೀಣ ಜನರಿಗೆ ನಿರಂತರ ನೂರು ದಿನಗಳ ಉದ್ಯೋಗ ಒದಗಿಸುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಉದ್ಯೋಗ ಖಾತ್ರಿ ಯೋಜನೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿಡಿಒ ಆನಂದ ಹಿರೇಮಠ, ಪಿ.ಎಸ್.ನಾಯ್ಕೋಡಿ, ಖೂಭಾಸಿಂಗ ಜಾಧವ,ಕಲ್ಮೇಶ ಕುಂಬಾರ,ವೀರೇಶ ಹೂಗಾರ,ಹಡಲಗೇರಿ ಗ್ರಾಪಂ ಮಾಜಿ ಅಧ್ಯಕ್ಷ ಹಣಮಂತ ತಳ್ಳಿಕೇರಿ, ಗುತ್ತಿಗೆದಾರ ಯಲ್ಲಪ್ಪ ಚಲವಾದಿ, ರಮೇಶ ಬಿರಾದಾರ,ಉಪಾಧ್ಯಕ್ಷ ಅಬ್ದುಲರಜಾಕ ಮಕಾಶಿ,ಚಂದು ಕರೇಕಲ್, ವೆಂಕಟೇಶ ಭಜಂತ್ರಿ ಸೇರಿದಂತೆ ಹಲವರು ಇದ್ದರು.







