ಇಂದು ಹಿಂದೂ ಮಹಾ ಸಮ್ಮೇಳನಕ್ಕೆ ಮುದ್ದೇಬಿಹಾಳ ಸಜ್ಜು
ಮುದ್ದೇಬಿಹಾಳ : ಹಿಂದೂ ಧರ್ಮವನ್ನು ಒಪ್ಪಿಕೊಂಡಿರುವ ಎಲ್ಲ ಜಾತಿಗಳನ್ನು ಒಗ್ಗೂಡಿಸಿ ಇದೇ ಪ್ರಥಮ ಬಾರಿಗೆ ಮುದ್ದೇಬಿಹಾಳದಲ್ಲಿ ಭಾನುವಾರ ಹಿಂದೂ ಮಹಾ ಸಮ್ಮೇಳನ ನಡೆಯಲಿದ್ದು ಇದಕ್ಕಾಗಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ.
ಮುದ್ದೇಬಿಹಾಳದ ಬನಶಂಕರಿ ದೇವಸ್ಥಾನದಿಂದ ಮದ್ಯಾಹ್ನ 3.45 ಕ್ಕೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು ಅಂದಾಜು 20 ಸಾವಿರ ಜನ ಭಾಗಿಯಾಗುವ ನಿರೀಕ್ಷೆ ಇದೆ.
ಸಂಜೆ 5.30 ಕ್ಕೆ ಇಲ್ಲಿನ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಸಿದ್ದೇಶ್ವರ ವೇದಿಕೆಯಲ್ಲಿ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ತಾಳಿಕೋಟ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದು ಅಧ್ಯಕ್ಷತೆಯನ್ನು ಉದ್ಯಮಿ ಬಿ.ಆರ್.ನಾವದಗಿ ವಹಿಸುವರು.ವಕ್ತಾರರಾಗಿ ಹಣಮಂತ ಮಳಲಿ,ವಕೀಲೆ ಜಯಶ್ರೀ ಸಾಲಿಮಠ ಭಾಗವಹಿಸುವರು.
ಮುದ್ದೇಬಿಹಾಳ ಪಟ್ಟಣದಾದ್ಯಂತ ಕೇಸರಿ ಬಣ್ಣದ ಬಂಟಿಂಗ್ಸ್ ,ಬ್ಯಾನರಗಳನ್ನು ಅಳವಡಿಸಲಾಗಿದೆ.
ಈ ಸಮ್ಮೇಳನ ಆರ್.ಎಸ್.ಎಸ್ ನ ಶತಮಾನೋತ್ಸವದ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಯೋಜನೆ ಆಗಿದೆ.
.







