ಮುದ್ದೇಬಿಹಾಳ : ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮಂಗಳವಾರ ಕೆಲಕಾಲ ಸುರಿದ ಭಾರೀ ಬಿರುಗಾಳಿ,ಆಲಿಕಲ್ಲು ಮಳೆ ರೈತರಿಗೆ ನಷ್ಟವನ್ನುಂಟು ಮಾಡಿದ್ದು ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ.
ತಾಲ್ಲೂಕಿನ ಆಲೂರ ಗ್ರಾಮದಲ್ಲಿ ಬಿರುಗಾಳಿ,ಮಳೆಗೆ ಶಿವಪುತ್ರಪ್ಪ ಗೂಳಿ ಎಂಬುವರ ಹೊಲದಲ್ಲಿ ಬೆಳೆದಿದ್ದ ಐದು ಎಕರೆ ದ್ರಾಕ್ಷಿ ಬೆಳೆ ಹಾನಿಯಾಗಿದೆ.ಇನ್ನೆನ್ನು ವಾರದಲ್ಲಿ ದ್ರಾಕ್ಷಿ ಕಟಾವು ಮಾಡಬೇಕಿದ್ದ ರೈತನಿಗೆ ಈ ಬಿರುಗಾಳಿ,ಮಳೆ ಬರಸಿಡಿಲಿನಂತೆ ಬಂದೆರಗಿದ್ದು ದ್ರಾಕ್ಷಿ ಗೊನೆಗಳು,ಹಣ್ಣುಗಳು ಉದುರಿ ಬಿದ್ದಿವೆ.ಇದರೊಟ್ಟಿಗೆ ಚಿಕ್ಕು ಗಿಡಗಳಿಂದ ಕಾಯಿಗಳು ಉದುರಿ ಬಿದ್ದಿದ್ದು ಐದಾರು ತೆಂಗಿನ ಮರಗಳು ನೆಲಕ್ಕಚ್ಚಿವೆ.
ಮುದ್ದೇಬಿಹಾಳ ಪಟ್ಟಣದಲ್ಲಿ ಜೋರಾಗಿ ಬಿದ್ದ ಆಲಿಕಲ್ಲುಗಳು ಜನತೆಯಲ್ಲಿ ಕೆಲಕಾಲ ಆತಂಕವನ್ನುoಟು ಮಾಡಿತು.ಪಟ್ಟಣದ ಬಸ್ ನಿಲ್ದಾಣ,ಟ್ಯಾಕ್ಸಿ ಸ್ಟಾö್ಯಂಡ್,ಜೀಪ್,ಆಟೋ ಸ್ಟಾö್ಯಂಡದಲ್ಲಿ ನಿಂತಿದ್ದ ವಾಹನಗಳ ಗಾಜುಗಳಿಗೆ ಎಲ್ಲಿ ಧಕ್ಕೆಯಾಗುತ್ತದೆಯೋ ಎಂಬ ಆತಂಕ ನಾಲ್ಕು ಚಕ್ರಗಳ ವಾಹನ ಚಾಲಕರು,ಮಾಲೀಕರಿಗೆ ಉಂಟಾಗಿತ್ತು.
ಇನ್ನುಳಿದoತೆ ಬಿರು ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಪಟ್ಟಣದ ಜನತೆಗೆ ಈ ಮಳೆ ತಂಪೆರೆಯಿತು.ಶಾಲೆ,ಅoಗಡಿಸರ್ಕಾರಿ ಕಚೇರಿ,ಮನೆಗಳಲ್ಲಿ ಜನರು ಆಲಿಕಲ್ಲು ಹಿಡಿದುಕೊಳ್ಳಲು ಬೀದಿಗೆ ಇಳಿದರು.ಕೆಲವು ಶಾಲೆಗಳಲ್ಲಿ ಮಕ್ಕಳು ಆಲಿಕಲ್ಲು ಹಿಡಿದು ಕುಣಿದ ಕುಪ್ಪಳಿಸಿದರು.
ಎಂಜಿವಿಸಿ ಕಾಲೇಜಿನ ಪ್ರಾಧ್ಯಾಪಕ ಪ್ರಕಾಶ ನರಗುಂದ, ಬೈಕ್ ಸರ್ವಿಸ್ ಸೆಂಟರ್‌ನ ವಿನಾಯಕ ಸಂಗಮದ, ಶ್ರೀಕಾಂತ ಗೌಡರ, ಪಂಡಿತ ಚವ್ಹಾಣ,ಸುನಿಲ್ ಅಂಬಿಗೇರ, ಅಸ್ಲಾಂ, ಶಿವಕುಮಾರ್ ಶಿರೋಳ ಮೊದಲಾದ ಯುವಕರು ಇಂಥ ಮಳೆಯಾಗಿದ್ದು ಇದೇ ಮೊದಲು ಎಂದು ಸಂಭ್ರಮ ಹಂಚಿಕೊAಡರು.







