ಮುದ್ದೇಬಿಹಾಳ : ಆರ್.ಎಸ್.ಎಸ್ ಶತಮಾನೋತ್ಸವ ಹಿನ್ನೆಲೆಯಲ್ಲಿ ಜ.11 ರಂದು ಮುದ್ದೇಬಿಹಾಳದಲ್ಲಿ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು ಸಮ್ಮೇಳನದ ಯಶಸ್ವಿಗೆ ಸಮೀತಿ ರಚನೆ ಮಾಡಲಾಯಿತು.
ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿಯ ಜಿಲ್ಲಾ ಪ್ರಚಾರಕ ಬಾಲರಾಜ ಮಾತನಾಡಿ, ಹಿಂದೂ ಸಮ್ಮೇಳನದ ಬಗ್ಗೆ ಮಾಹಿತಿಯನ್ನು ಒದಗಿಸಿದರು.
ಸರ್ವರ ಒಪ್ಪಿಗೆಯ ಮೇರೆಗೆ ಸಮೀತಿಯ ಅಧ್ಯಕ್ಷರಾಗಿ ಬಸವರಾಜ ಆರ್. ನಾವದಗಿ, ಉಪಾಧಕ್ಷರಾಗಿ ಅಶೋಕ ಮಣಿ,ವೆಂಕನಗೌಡ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು.ಮುದ್ದೇಬಿಹಾಳದ ಸರ್ವ ಸಮಾಜದ ಪ್ರಮುಖರನ್ನು ಈ ಸಮ್ಮೇಳನದ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.ಸಮ್ಮೇಳನದ ಯಶಸ್ವಿಗೆ ಸರ್ವ ಸಮಾಜದವರು ಕೈ ಜೋಡಿಸಬೇಕು ಎಂದು ಮುಖಂಡ ಪ್ರಭು ಕಡಿ ಮನವಿ ಮಾಡಿದರು.ವಿ.ಎಚ್.ಪಿ ಅಧ್ಯಕ್ಷ ಶಿವಯೋಗೆಪ್ಪ ರಾಂಪೂರ,ವಿವಿಧ ಸಮಾಜದ ಅಧ್ಯಕ್ಷರು,ಮಹಿಳಾ ಸಂಘಟನೆಯ ಸದಸ್ಯರು,ಹಿಂದೂಪರ ಸಂಘಟನೆ ಮುಖಂಡರು,ಪುರಸಭೆ ಸದಸ್ಯರು ಇದ್ದರು.







