ಮುದ್ದೇಬಿಹಾಳ : ಅಮೆರಿಕನ್ ವೀಸಡಂ ಫೀಸ್ ಯೂನಿವರ್ಸಿಟಿ ವತಿಯಿಂದ ಶನಿವಾರ ಹೊಸೂರಿನಲ್ಲಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ತಾಲೂಕಿನ ಆರ್‌ಡಿಪಿಆರ್ ಇಲಾಖೆಯ ಉದ್ಯೋಗಿ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟು ಎಂ.ಕೆ. ಗುಡಿಮನಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಯಿತು.
ಢವಳಗಿ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಂ.ಕೆ. ಗುಡಿಮನಿ ಅವರು ರಾಷ್ಟ್ರಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಸಾಧಿಸಿರುವ ಗಣನೀಯ ಸಾಧನೆಗಳನ್ನು ಗುರುತಿಸಿ, ಕ್ರೀಡಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಮೆಚ್ಚಿ ಈ ಗೌರವ ಡಾಕ್ಟರೇಟ್ ನ್ನು ನೀಡಲಾಗಿದೆ. ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಎಂ.ಕೆ. ಗುಡಿಮನಿ ಅವರು, ಈ ಗೌರವ ತಮ್ಮ ಕ್ರೀಡಾ ಜೀವನಕ್ಕೆ ಮತ್ತಷ್ಟು ಪ್ರೇರಣೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತಮಿಳುನಾಡಿನ ಮಾಜಿ ಶಾಸಕ ಕೆ.ಎ.ಮನೋಕರಣ್,ಕೃಷ್ಣಮೂರ್ತಿ ಸ್ವಾಮೀಜಿ,ಹೈಕೋರ್ಟ್ ಹಿರಿಯ ವಕೀಲ ಆರ್.ಬಿ.ಪಾಟೀಲ,ಸಾಮಾಜಿಕ ಕಾರ್ಯಕರ್ತ ಎ.ಶ್ರೀಧರ,ರಾಷ್ಟçಸೇವಾ ಫೌಂಡೇಶನ್ ಅಧ್ಯಕ್ಷ ವೈಭವ ಗುಣಶೇಖರ ಮೊದಲಾದವರು ಇದ್ದರು.







