ಮುದ್ದೇಬಿಹಾಳ : ತಾಲ್ಲೂಕಿನ ಮದರಿ ಗ್ರಾಮದಿಂದ ಘಾಳಪೂಜಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಆಂಧ್ರಪ್ರದೇಶದಿAದ ಬಂದಿರುವ ಕೆಲವರು ಅನಧಿಕೃತವಾಗಿ ರಾತ್ರಿ ಸಮಯದಲ್ಲಿ ನದಿಗೆ ಇಳಿದು ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿದ್ದು ಕಳೆದ ಭಾನುವಾರ ದಿಢೀರ್ ದಾಳಿ ನಡೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶರಣಗೌಡ ಬಿರಾದಾರ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಇಲಾಖೆಯ ಪ್ರಗತಿ ವರದಿ ನೀಡುವ ಸಮಯದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.ಆAಧ್ರದ ಮೀನುಗಾರರು ಸಣ್ಣ ಮೀನುಗಳನ್ನು ಬಲೆ ಬೀಸಿ ಹಿಡಿದುಕೊಂಡು ಹೋಗುತ್ತಿದ್ದಾರೆ.ಇದರಿಂದ ಈ ಭಾಗದಲ್ಲಿ ಮೀನುಗಳ ಸಂತತಿ ಗಣನೀಯವಾಗಿ ಕುಸಿತವಾಗುವ ಭೀತಿ ಎದುರಾಗಿತ್ತು.ವಿಷಯ ತಿಳಿದು ಮೀನುಗಾರಿಕೆ ಇಲಾಖೆಯ ಬೆಳಗಾವಿಯ ಜಂಟಿ ನಿರ್ದೇಶಕರ ಜೊತೆಗೂಡಿ ಅಕ್ರಮ ಅಡ್ಡೆಗಳ ಮೇಲೆ ದಾಳಿ ಮಾಡಲಾಗಿದೆ.ಈ ಸಮಯದಲ್ಲಿ ಹಲವರ ಮೇಲೆ ದೂರು ದಾಖಲಿಸಲಾಗಿದೆ ಎಂದು ಹೇಳಿದರು.
ಅಕ್ರಮವಾಗಿ ನದಿ ತೀರದಲ್ಲಿ ಶೆಡ್, ಟೆಂಟ್ ಹಾಕುವುದಕ್ಕೆ ಕಡಿವಾಣ ಹಾಕಲು ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಮೇಲಧಿಕಾರಿಗಳು ಸೂಚನೆ ನೀಡಬೇಕು ಎಂದು ವಿನಂತಿಸಿದರು.ಇದಕ್ಕೆ ಉತ್ತರಿಸಿದ ತಾಪಂ ಇಒ ವೆಂಕಟೇಶ ವಂದಾಲ , ಸಂಬAಧಿಸಿದ ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ತಕ್ಷಣ ಈ ಕುರಿತು ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಮೇಲಿನ ಚರ್ಚೆಗೆ ಸಂಬAಧಿಸಿದAತೆ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಪಾಟೀಲ ಬಿಇಒಗೆ ಸೂಚನೆ ನೀಡಿದರು. ಖಾಸಗಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಇರುವುದಿಲ್ಲ.ಆದರೂ ಅಲ್ಲಿ ಫಲಿತಾಂಶ ಗುಣಮಟ್ಟದಿಂದ ಕೂಡಿರುತ್ತದೆ.ಆದರೆ ಸರ್ಕಾರಿ ಶಾಲೆಗಳಿಗೆ ನೇಮಕವಾಗುವ ಶಿಕ್ಷಕರ ವಿದ್ಯಾರ್ಹತೆ ಗುಣಮಟ್ಟದಿಂದ ಕೂಡಿದ್ದರೂ ವಿದ್ಯಾರ್ಥಿಗಳ ಫಲಿತಾಂಶ ಮಾತ್ರ ಕಳಪೆಯಾಗುವುದಕ್ಕೆ ಏತಕ್ಕೆ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಬಿಇಒ ಬಿ.ಎಸ್.ಸಾವಳಗಿ , ಜಿಲ್ಲೆಯ ಫಲಿತಾಂಶದಲ್ಲಿ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ.ಫಲಿತಾಂಶದ ಸುಧಾರಣೆಗಾಗಿ ಹಲವು ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ.ಫೋನ್ ಇನ್, ಪಾಸಿಂಗ್ ಪ್ಯಾಕೇಜ್, ಮನೆ ಸಂದರ್ಶನ ಸೇರಿದಂತೆ ಹಲವು ಕ್ರಮಗಳನ್ನು ಅನುಸರಿಸಲಾಗುತ್ತದೆ ಎಂದು ಹೇಳಿದರು.
ಎಸ್.ಎಸ್.ಎಲ್.ಸಿಯಲ್ಲಿ ಇಂಟರ್ನಲ್ ಅಂಕಗಳನ್ನು ಪಡೆದುಕೊಳ್ಳಬೇಕಾದರೆ ವಿದ್ಯಾರ್ಥಿಗಳಿಂದ ವಿದ್ಯಾಭ್ಯಾಸ ಮಾಡಿಸಿ ಅಂಕಗಳನ್ನು ಕಡಿತಗೊಳಿಸದೇ ಪೂರ್ಣರೂಪದಲ್ಲಿ ನೀಡಲು ತಿಳಿಸಲಾಗಿದ್ದು ಥಿಯರಿ ಅಂಕಗಳಲ್ಲಿ 80ಕ್ಕೆ 13 ಅಂಕ ಪಡೆದರೆ ಆ ವಿದ್ಯಾರ್ಥಿ ಉತ್ತೀರ್ಣರಾಗುವ ಅವಕಾಶಗಳಿವೆ.ವಿದ್ಯಾರ್ಥಿಯೊಬ್ಬರು 33 ಅಂಕಗಳನ್ನು ಉತ್ತೀರ್ಣತೆಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.ಅನುದಾನಿತ ಶಾಲೆಗಳಲ್ಲಿ ಫಲಿತಾಂಶ ಇಳಿಮುಖವಾಗಿದ್ದು ಶಿಕ್ಷಕರ ಭರ್ತಿ ಇಲ್ಲದ್ದಕ್ಕೆ ಶಿಕ್ಷಣ ಕುಂಠಿತಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ದೇಶಪಾಂಡೆ ಮಾತನಾಡಿ, ದ್ರಾಕ್ಷಿ,ನಿಂಬೆ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ಮಾಡಲಾಗಿದೆ.ಮೆಣಸಿಣಕಾಯಿ ದರ ಏರಿಕೆಯಾಗಿದ್ದು ಬಿತ್ತನೆ ಕ್ಷೇತ್ರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಗಿದೆ.ಕ್ವಿಂಟಾಲ್‌ಗೆ 50-60 ಸಾವಿರ ರೂ.ದರ ಮೆಣಸಿಣಕಾಯಿ ಮಾರಾಟವಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಭಾಗದ ರೈತರು 250 ಹೆಕ್ಟೇರ್ ಪ್ರದೇಶದಲ್ಲಿ ಅಜವಾನ ಬೆಳೆ ಬಿತ್ತನೆ ಮಾಡಿದ್ದು ಅದಕ್ಕೆ ಮಾರುಕಟ್ಟೆ ದೊರೆಯದ ಕಾರಣ ಆಸಕ್ತಿ ತೋರಿಸುತ್ತಿಲ್ಲ.ಕರ್ನೂಲ್‌ಗೆ ಅಜವಾನ ಮಾರಾಟಕ್ಕೆ ರೈತರೇ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ,ತಾಪಂ ಆಡಳಿತಾಧಿಕಾರಿಯೂ ಆಗಿರುವ ಶಿವನಗೌಡ ಪಾಟೀಲ ಮಾತನಾಡಿ, ಕೆಡಿಪಿ ಸಭೆಯಲ್ಲಿ ಅಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸಬೇಕು.ಭೌತಿಕ ಪ್ರಗತಿಯನ್ನು ಇಲಾಖಾವಾರು ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಲೀಲಾ ಕೊಣ್ಣೂರ ಅವರಿಗೆ ಅಧಿಕಾರಿಗಳು ಸೂಚಿಸಿದರು.ಕೃಷಿ,ಆರೋಗ್ಯ,ಶಿಶು ಅಭಿವೃದ್ಧಿ,ಪಿಆರ್‌ಇಡಿ,ಸಹಕಾರ,ಸಮಾಜ ಕಲ್ಯಾಣ,ಅಬಕಾರಿ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಇಲಾಖೆಯ ಪ್ರಗತಿ ಮಾಹಿತಿ ಸಭೆಗೆ ಒದಗಿಸಿದರು.ಇಒ ವೆಂಕಟೇಶ ವಂದಾಲ ವಂದಿಸಿದರು.
ಸಭೆಯಲ್ಲಿ ತಾಳಿಕೋಟಿ ತಾಪಂ ಇಒ ಅನಸೂಯಾ ಚಲವಾದಿ, ಯೋಜನಾಧಿಕಾರಿ ಪಿ.ಎಸ್.ಕಸನಕ್ಕಿ, ವೀರೇಶ ಹೂಗಾರ , ವಿವಿಧ ಇಲಾಖೆಯ ಅಧಿಕಾರಿಗಳಾದ ವಿ.ಎಸ್.ಉತ್ನಾಳ, ಬಸಂತಿ ಮಠ, ಎಸ್.ಡಿ.ಭಾವಿಕಟ್ಟಿ, ಉಮೇಶ ಕೆಲೂರ,ಡಾ.ಸತೀಶ ತಿವಾರಿ ಮೊದಲಾದವರು ಇದ್ದರು.
ಪ್ರತಿನಿಧಿಗಳನ್ನು ಕಳಿಸಬೇಡಿ:
ತಾಪಂ ಸಾಮಾನ್ಯ ಸಭೆಗೆ ಇಲಾಖೆಯ ಅಧಿಕಾರಿಗಳು ಪ್ರತಿನಿಧಿಗಳನ್ನು ಕಳುಹಿಸದೇ ಅಧಿಕಾರಿಗಳೇ ಹಾಜರಾಗಬೇಕು.ಕಡ್ಡಾಯವಾಗಿ ಮಾಹಿತಿಯನ್ನು ಮುಂಚಿತವಾಗಿ ತಾಪಂಗೆ ಒದಗಿಸಬೇಕು.ಮುಂದಿನ ಸಭೆಗಳಲ್ಲಿ ಇಲಾಖೆಯ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ತಾಪಂ ಇಒ ವೆಂಕಟೇಶ ವಂದಾಲ ತಿಳಿಸಿದರು.





