ಮುದ್ದೇಬಿಹಾಳ : ವಿದ್ಯುತ್ ತಗುಲಿ ಕಂಬದಲ್ಲೇ ವ್ಯಕ್ತಿ ದುರ್ಮರಣ

ಮುದ್ದೇಬಿಹಾಳ : ವಿದ್ಯುತ್ ತಗುಲಿ ಕಂಬದಲ್ಲೇ ವ್ಯಕ್ತಿ ದುರ್ಮರಣ

ಮುದ್ದೇಬಿಹಾಳ : ಆಕಸ್ಮಿಕವಾಗಿ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ವಿದ್ಯುತ್ ಕಂಬದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹುಲ್ಲೂರ ಗ್ರಾಮದ ಕಾಲುವೆ ಪಕ್ಕದಲ್ಲಿರುವ ಬಸವೇಶ್ವರ ಗುಡಿಯ ಹತ್ತಿರ ಇರುವ ವಿದ್ಯುತ್ ಕಂಬದಲ್ಲಿ ಗುರುವಾರದಂದು ಸಂಜೆ ನಡೆದಿದೆ.

ಈ ಕುರಿತು ಮೃತನ ಪತ್ನಿ ರೇಣುಕಾ ಚಲವಾದಿ ಪೊಲೀಸರಿಗೆ ದೂರು (ಕಲಂ: 194 BNSS) ನೀಡಿದ್ದು ‘ನಮ್ಮೂರಲ್ಲಿ ಸಣ್ಣ ಪುಟ್ಟ ಎಲೆಕ್ಟಿಕಲ್ ಕೆಲಸಗಳನ್ನು ಮಾಡಿಕೊಂಡಿದ್ದ ನನ್ನ ಪತಿ ಗಣಪತಿ ಚಲವಾದಿ ಡಿ.18 ರಂದು ಸಾಯಂಕಾಲ 06-15 ಗಂಟೆ ಸುಮಾರಿಗೆ ನಮ್ಮೂರ ಕೆನಾಲ್ ಬಾಜು ಬಸವೇಶ್ವರ ಗುಡಿಯ ಹತ್ತಿರ ಇರುವ ಕರೆಂಟ್ ಕಂಬದ ಮೇಲೆ ಏನೋ ಕೆಲಸ ಮಾಡಲು ಹತ್ತಿದಾಗ ಆಕಸ್ಮಿಕವಾಗಿ ಕರಂಟ್ ತಗುಲಿ ಕರೆಂಟ್ ಶಾಕ ಹೊಡೆದು ತೀರಿಕೊಂಡಿರುತ್ತಾನೆ. ಹೊರತು ನನ್ನ ಗಂಡನ ಮರಣದಲ್ಲಿ ನನ್ನದಾಗಲಿ, ನಮ್ಮ ಮನೆಯವರದಾಗಲಿ ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವುದಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಮೊಹ್ಮದ ಫಸಿವುದ್ದೀನ,ಪಿಎಸ್‌ಐ ಸಂಜಯ ತಿಪರೆಡ್ಡಿ, ಹೆಸ್ಕಾಂ ಎಇಇ ಆರ್.ಎನ್.ಹಾದಿಮನಿ,ದಲಿತಪರ ಸಂಘಟನೆ ಮುಖಂಡರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

Latest News

ನನ್ನ ಹಕ್ಕುಬಿಟ್ಟುಕೊಡಲು ಸಿದ್ದನಿದ್ದೇನೆ, ಆರೋಪದ ಚರ್ಚೆಗೆ ಸಿದ್ಧ: ಕೃಷ್ಣ ಬೈರೇಗೌಡರ ಸವಾಲ್..!

ಬೆಳಗಾವಿ ಡಿಸೆಂಬರ್ 18: ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ

ಬಾಲಾಜಿ ಸಕ್ಕರೆ ಕಾರ್ಖಾನೆಗೆ ಡಿಸಿ ಭೇಟಿ:                           ಕಬ್ಬಿನ ತೂಕದಲ್ಲಿ ಪಾರದರ್ಶಕತೆ, ಕಾಲಮಿತಿಯಲ್ಲಿ ಬಿಲ್ ಪಾವತಿ

ಬಾಲಾಜಿ ಸಕ್ಕರೆ ಕಾರ್ಖಾನೆಗೆ ಡಿಸಿ ಭೇಟಿ: ಕಬ್ಬಿನ ತೂಕದಲ್ಲಿ ಪಾರದರ್ಶಕತೆ, ಕಾಲಮಿತಿಯಲ್ಲಿ ಬಿಲ್ ಪಾವತಿ

ಮುದ್ದೇಬಿಹಾಳ : ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಬುಧವಾರ

ಪತ್ರಕರ್ತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧ-ಸಚಿವ ಮುನಿಯಪ್ಪ ಭರವಸೆ

ಪತ್ರಕರ್ತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧ-ಸಚಿವ ಮುನಿಯಪ್ಪ ಭರವಸೆ

ಬೆಳಗಾವಿ(ಸುವರ್ಣ ವಿಧಾನಸೌಧ ): ಕಾರ್ಯನಿರತ ಪತ್ರಕರ್ತರ ಸಂಘಟನೆಯವರು ಮುಂದಿರಿಸಿರುವ ಬೇಡಿಕೆಗಳನ್ನು ಸಿಎಂ ಗಮನಕ್ಕೆ ತಂದು

TP, ZP Election: ತಾಪಂ, ಜಿಪಂ ಚುನಾವಣೆಗೆ ಮೂಹುರ್ತ ನಿಗದಿ

TP, ZP Election: ತಾಪಂ, ಜಿಪಂ ಚುನಾವಣೆಗೆ ಮೂಹುರ್ತ ನಿಗದಿ

ಬೆಂಗಳೂರು: ​ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆಗೆ ಪ್ರಸ್ತಾವನೆ-ಶಾಸಕ ನಾಡಗೌಡ

ಮುದ್ದೇಬಿಹಾಳ : ಪಟ್ಟಣದ ವ್ಯಾಪ್ತಿಯಲ್ಲಿ ಕಾರ್ಮಿಕ ಇಲಾಖೆಯಿಂದಲೂ ವಸತಿ ಶಾಲೆ ಆರಂಭಿಸಲು ಪ್ರಸ್ತಾವನೆ ಕಳಿಸಲಾಗಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ತಾಲ್ಲೂಕಿನ ಬಿದರಕುಂದಿ ಗ್ರಾಮದ ಆರ್.ಎಂ.ಎಸ್.ಎ ಶಾಲೆಯ ಹತ್ತಿರ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ನಂ-೨ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಕ್ಷೇತ್ರದಲ್ಲಿ ಆರ್.ಎಂ.ಎಸ್.ಎ ಶಾಲೆ, ಮಹಿಳಾ ಹಾಸ್ಟೆಲ್,ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗಳು ನಿರ್ಮಾಣವಾಗಿದ್ದು ಇದೊಂದು ವಿದ್ಯಾಗಿರಿ ಎಂದು ನಾಮಕರಣ ಮಾಡುವಂತೆ ಗ್ರಾಪಂ ಅಧ್ಯಕ್ಷರಿಗೆ

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಪ್ರಸ್ತುತ ಕರ್ನಾಟಕ ರಾಜಕೀಯ ಚಿತ್ರಣ: ಸವಾಲು ಮತ್ತು ಗ್ಯಾರಂಟಿಗಳು

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಪ್ರಸ್ತುತ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರವು ಕಾರ್ಯನಿರ್ವಹಿಸುತ್ತಿದ್ದು, ಅದರ ಚುನಾವಣಾ ಭರವಸೆಯಾದ 'ಐದು ಗ್ಯಾರಂಟಿ' ಯೋಜನೆಗಳ ಅನುಷ್ಠಾನವು ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ​ಆಡಳಿತದ ಪ್ರಮುಖ ಕೇಂದ್ರ: ಐದು ಗ್ಯಾರಂಟಿಗಳು ​'ಶಕ್ತಿ' (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ), 'ಗೃಹ ಲಕ್ಷ್ಮಿ' (ಮಹಿಳಾ ಮುಖ್ಯಸ್ಥರಿಗೆ ಮಾಸಿಕ