ಮುದ್ದೇಬಿಹಾಳ : ಸ್ಥಳೀಯ ಕ್ಷತ್ರೀಯ ಮರಾಠಾ ಸಮಾಜದ ನೂತನ ಪದಾಧಿಕಾರಿಗಳನ್ನು ಭಾನುವಾರ ಆಯ್ಕೆ ಮಾಡಲಾಯಿತು.
ಪಟ್ಟಣದ ಬಸವ ನಗರದ ಅಂಬಾಭವಾನಿ ಮಂದಿರದಲ್ಲಿ ಜರುಗಿದ ಸಭೆಯಲ್ಲಿ ಸಮಾಜದ ಗೌರವಾಧ್ಯಕ್ಷರನ್ನಾಗಿ ರಾಜೇಂದ್ರ ಭೋಸಲೆ, ನೂತನ ಅಧ್ಯಕ್ಷರಾಗಿ ನೇತಾಜಿ ನಲವಡೆ, ಉಪಾಧ್ಯಕ್ಷರನ್ನಾಗಿ ಅಣ್ಣಾಜಿ ಪವಾರ, ರಾಘವೇಂದ್ರ ಘಾಟಗೆ, ಪ್ರದಾನ ಕಾರ್ಯದರ್ಶಿಯಾಗಿ ಡಾ. ಕೃಷ್ಣಾಜಿ ಪವಾರ, ಸಹ ಕಾರ್ಯದರ್ಶಿಯನ್ನಾಗಿ ಹಣಮಂತ ನಲವಡೆ ಹಾಗೂ ಖಜಾಂಚಿಯನ್ನಾಗಿ ರಮೇಶ ಥೋರಾತ, ಸಹ ಖಜಾಂಚಿಯನ್ನಾಗಿ ಅನೀಲ ಪವಾರ,ಸಂಘಟನಾ ಕಾರ್ಯದರ್ಶಿಯನ್ನಾಗಿ ಸಂತೋಷ ಚವ್ಹಾಣ ಹಾಗೂ ಶಂಕರ ಪವಾರ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಸಮಾಜದ ಹಿರಿಯರು,ಯುವಕರು ಪಾಲ್ಗೊಂಡಿದ್ದರು.







