Muddebihal: ಚಿರತೆ ಹೆಜ್ಜೆ ಹೋಲುವ ಕಾಡುಪ್ರಾಣಿ ಹೆಜ್ಜೆ ಗುರುತು ಪತ್ತೆ? ಕಂದಗನೂರಿನಲ್ಲಿ ಆತಂಕ!

Muddebihal: ಚಿರತೆ ಹೆಜ್ಜೆ ಹೋಲುವ ಕಾಡುಪ್ರಾಣಿ ಹೆಜ್ಜೆ ಗುರುತು ಪತ್ತೆ? ಕಂದಗನೂರಿನಲ್ಲಿ ಆತಂಕ!

ಮುದ್ದೇಬಿಹಾಳ : ತಾಲ್ಲೂಕಿನ ಕಂದಗನೂರಿನ ಕಬ್ಬಿನ ಜಮೀನೊಂದರಲ್ಲಿ ಚಿರತೆಯಂತಹ ಕಾಡುಪ್ರಾಣಿಯದ್ದು ಎನ್ನಲಾದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಈ ಭಾಗದ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜು.29 ರಂದು ಕಂದಗನೂರ ಗ್ರಾಮದ ಬೀಯಪ್ಪ ಬೋಳಿ ಅವರ ಹೊಲದಲ್ಲಿ ಆಕಳು ಹಾಗೂ ಕರುವಿನ ಕಳೆಬರ ಪತ್ತೆಯಾಗಿದೆ. ಇದು ಕಾಡು ಪ್ರಾಣಿ ದಾಳಿಯಿಂದ ಎರಡು ಜಾನುವಾರುಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಏತನ್ಮಧ್ಯೆ, ಕಂದಗನೂರು ಭಾಗದಲ್ಲಿ ಚಿರತೆ ಬಂದಿದೆ ಎಂಬ ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅವು ಈ ಭಾಗದ್ದಲ್ಲ ಎಂಬುದನ್ನು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

ಕಾಡುಪ್ರಾಣಿ ಸೆರೆಗೆ ಬಿ.ಎಸ್.ಬೋಳಿ ಅವರ ಹೊಲದಲ್ಲಿ ಬೋನು ಇರಿಸಲಾಗಿದೆ. ಆದರೆ ಜು.30 ರಂದು ಮೃತಪಟ್ಟ ಆಕಳ ಮಾಂಸ ತಿನ್ನುವುದಕ್ಕೆ ಕಾಡುಪ್ರಾಣಿ ಬಂದು ಹೋಗಿದೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ ತಿಳಿಸಿದ್ದಾರೆ.

ಹೊಲದಲ್ಲಿ ಮಂಗಳವಾರ ಅವಲೋಕಿಸಿದಾಗ ಕಾಡುಪ್ರಾಣಿಯ ಹೆಜ್ಜೆಗಳು ಚಿರತೆಯದ್ದೆಂಬಂತೆ ಕಾಣುತ್ತಿವೆ.ಆದರೆ ಖಚಿತವಾಗಿ ಹೇಳಲು ಆಗದು.ಕತ್ತೆ ಕಿರುಬ ಕೂಡಾ ಜಾನುವಾರುಗಳನ್ನು ತಿಂದು ಹೋಗುತ್ತದೆ. ಮೇಲಧಿಕಾರಿಗಳ ಸೂಚನೆಯಂತೆ ಕಾಡುಪ್ರಾಣಿ ಸೆರೆ ಹಿಡಿಯಲು ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅದರಲ್ಲಿ ಸೆರೆಯಾದರೆ ಯಾವ ಪ್ರಾಣಿ ಎಂಬುದು ಖಚಿತವಾಗಿ ತಿಳಿದು ಬರಲಿದೆ ಎಂದು ಮಾಹಿತಿ ನೀಡಿದರು.

ಚಿರತೆ ಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ಫೋಟೊಗಳ ಮಾಹಿತಿಯಿಂದ ಗ್ರಾಮಸ್ಥರು ತೀವ್ರ ಆತಂಕಗೊಂಡರು. ಸಂಜೆಯವ ಹೊತ್ತಿಗೆ ಚಿರತೆ ಕಂದಗನೂರಿನಲ್ಲಿ ಕಾಣಿಸಿದ್ದಲ್ಲ ಬೇರೆ ಸ್ಥಳದ್ದು ಎಂದು ಗೊತ್ತಾದ ಬಳಿಕ ಅಲ್ಪ ನಿರಾಳರಾಗಿದ್ದಾರೆ. ಆದರೆ, ಚಿರತೆಯೇ ಬಂದಿದೆ ಎಂಬುದನ್ನು ಯಾರೊಬ್ಬರು ನೋಡಿಲ್ಲ ಎಂದು ಗ್ರಾಮಸ್ಥ ರಾಜಾಭಕ್ಷಿ ಮಕಾಶಿ ತಿಳಿಸಿದರು.

ಕೃಷಿ ಚಟುವಟಿಕೆ ಕೈಗೊಳ್ಳಲು ಗ್ರಾಮಸ್ಥರ ಹಿಂದೇಟು: ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ಭೀತಿಗೊಳಗಾಗಿರುವ ಈ ಭಾಗದ ಕಂದಗನೂರು, ಕಾಳಗಿ, ಬಳಬಟ್ಟಿ ಗ್ರಾಮದ ರೈತಾಪಿ ವರ್ಗದವರಲ್ಲಿ ಕೃಷಿ ಚಟುವಟಿಕೆ ಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿ ಕೂರುವಂತಾಗಿದೆ. ಆದಷ್ಟು ಬೇಗ ತಾಲ್ಲೂಕಾಡಳಿತದ ಅಧಿಕಾರಿಗಳು ಕಾಡುಪ್ರಾಣಿ ಪತ್ತೆ ಹಚ್ಚಿ ಸೆರೆ ಹಿಡಿದು ರೈತರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Latest News

ಅಯ್ಯನಗುಡಿ ಉತ್ಸವಕ್ಕೆ ಅದ್ದೂರಿ ಚಾಲನೆ;                     ಗಂಗಾಧರೇಶ್ವರ ಕಳಸೋತ್ಸವದ ಭವ್ಯ ಮೆರವಣಿಗೆ

ಅಯ್ಯನಗುಡಿ ಉತ್ಸವಕ್ಕೆ ಅದ್ದೂರಿ ಚಾಲನೆ; ಗಂಗಾಧರೇಶ್ವರ ಕಳಸೋತ್ಸವದ ಭವ್ಯ ಮೆರವಣಿಗೆ

ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಸಮೀಪದ ಅಯ್ಯನಗುಡಿ ಗಂಗಾಧರೇಶ್ವರ ಜಾತ್ರೆಯ ಅಂಗವಾಗಿ ಮಂಗಳವಾರ ಪಟ್ಟಣದ

ಸವಿತಾ ಮಹರ್ಷಿಗಳ ಆದರ್ಶ ಪಾಲನೆ ಮಾಡಿ-ತಹಶೀಲ್ದಾರ್ ಕೀರ್ತಿ ಚಾಲಕ್

ಸವಿತಾ ಮಹರ್ಷಿಗಳ ಆದರ್ಶ ಪಾಲನೆ ಮಾಡಿ-ತಹಶೀಲ್ದಾರ್ ಕೀರ್ತಿ ಚಾಲಕ್

ಮುದ್ದೇಬಿಹಾಳ : ಸವಿತ ಮಹರ್ಷಿಗಳ ಆದರ್ಶಗಳನ್ನು ಸಮಾಜದ ಬಾಂಧವರು ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಬರಬೇಕು

ಅಂಗಡಿಯಾತನಿಗೆ ಗನ್ ತೋರಿಸಿ ಹಾಡಹಗಲೇ ಬಂಗಾರದ ಅಂಗಡಿ ದರೋಡೆ

ಅಂಗಡಿಯಾತನಿಗೆ ಗನ್ ತೋರಿಸಿ ಹಾಡಹಗಲೇ ಬಂಗಾರದ ಅಂಗಡಿ ದರೋಡೆ

ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಭೂಮಿಕಾ ಜ್ಯುವೆಲ್ಲರಿ ಶಾಪ್‌ಗೆ ಇಬ್ಬರು

ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆ;                      ಮದರಿಯಲ್ಲಿ ಚಿರತೆ ಪ್ರತ್ಯಕ್ಷ ಫೋಟೋ ಅಸಲಿ ಅಲ್ಲ..!!

ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಷ್ಟನೆ; ಮದರಿಯಲ್ಲಿ ಚಿರತೆ ಪ್ರತ್ಯಕ್ಷ ಫೋಟೋ ಅಸಲಿ ಅಲ್ಲ..!!

ಮುದ್ದೇಬಿಹಾಳ : ಸಾಮಾಜಿಕ ಜಾಲತಾಣಗಳ ಮೂಲಕ ಮದರಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನಲಾದ ಫೋಟೋ

500-1000 ರೂ.ಗೆ ಓಟು ಮಾರಿಕೊಳ್ಳಬೇಡಿ- ತಹಶೀಲ್ದಾರ್ ಚಾಲಕ್

500-1000 ರೂ.ಗೆ ಓಟು ಮಾರಿಕೊಳ್ಳಬೇಡಿ- ತಹಶೀಲ್ದಾರ್ ಚಾಲಕ್

ಮುದ್ದೇಬಿಹಾಳ : 500-1000 ರೂ.ಗಳಿಗೆ ನಿಮ್ಮ ಓಟು ಮಾರಿಕೊಂಡರೆ ಐದು ವರ್ಷಗಳ ಕಾಲ ಅವರು ನಿಮ್ಮನ್ನು ಆಳುತ್ತಾರೆ ಎಂಬುದನ್ನು ಮರೆಯಬೇಡಿ.ಒಳ್ಳೆಯವರನ್ನು ಚುನಾಯಿಸುವ ಅಧಿಕಾರ ಸಂವಿಧಾನ ನಿಮಗೆ ನೀಡಿದ್ದು ಅದನ್ನು ಸಮರ್ಥ ವ್ಯಕ್ತಿಯ ಆಯ್ಕೆಗೆ ಬಳಸಿಕೊಳ್ಳಿ ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು. ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ಮತದಾರರ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 246 ಮತಗಟ್ಟೆಗಳಿದ್ದು ಒಟ್ಟು 2,30,196 ಲಕ್ಷ ಮತದಾರರು

ಪರೀಕ್ಷೆ ಬರೆಯಿರಿ ನಗದು ಹಣ ಗೆಲ್ಲಿ:                                      ಶಹಾಪೂರ : ಜ.25 ರಂದು ಆಕ್ಸಫರ್ಡ್ ಡೈಮಂಡ್ ಹಂಟ್ ಆವಾರ್ಡ್

ಪರೀಕ್ಷೆ ಬರೆಯಿರಿ ನಗದು ಹಣ ಗೆಲ್ಲಿ: ಶಹಾಪೂರ : ಜ.25 ರಂದು ಆಕ್ಸಫರ್ಡ್ ಡೈಮಂಡ್ ಹಂಟ್ ಆವಾರ್ಡ್

ಶಹಾಪೂರ : ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಿAದ ಜ.25ರಂದು ಶಹಾಪೂರದಲ್ಲಿ ಆಕ್ಸಫಡ ಪಾಟೀಲ್ಸ್ ಡೈಮಂಡ್ ಹಂಟ್ ಅವಾರ್ಡ್ ಸ್ಪರ್ಧೆ ಆಯೋಜಿಸಿದೆ ಎಂದು ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ತಿಳಿಸಿದ್ದಾರೆ. ಪರೀಕ್ಷೆಯನ್ನು 10ನೇ ತರಗತಿ ಪರೀಕ್ಷೆ ಬರೆದಿರುವ ರಾಜ್ಯ ಪರೀಕ್ಷಾ ಮಂಡಳಿ, ಐಸಿಎಸ್‌ಇ,ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದ್ದು ಇದನ್ನು ಪ್ರಥಮ ಪಿಯುಸಿ ಪರೀಕ್ಷೆಯ ಪ್ರವೇಶ ಪರೀಕ್ಷೆ ಎಂದು ಪರಿಗಣಿಸಲಾಗುತ್ತದೆ.ಪರೀಕ್ಷೆ ಶಹಾಪೂರದ