ಸವಿತಾ ಮಹರ್ಷಿಗಳ ಆದರ್ಶ ಪಾಲನೆ ಮಾಡಿ-ತಹಶೀಲ್ದಾರ್ ಕೀರ್ತಿ ಚಾಲಕ್

ಸವಿತಾ ಮಹರ್ಷಿಗಳ ಆದರ್ಶ ಪಾಲನೆ ಮಾಡಿ-ತಹಶೀಲ್ದಾರ್ ಕೀರ್ತಿ ಚಾಲಕ್

ಮುದ್ದೇಬಿಹಾಳ : ಸವಿತ ಮಹರ್ಷಿಗಳ ಆದರ್ಶಗಳನ್ನು ಸಮಾಜದ ಬಾಂಧವರು ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಬರಬೇಕು ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಿಕ್ಸೂಚಿ ಭಾಷಣ ಮಾಡಿದ ಸಂಶೋಧಕ ಮಹೇಶ ತೇಲಂಗಿ , “ಇಡೀ ಜಗತ್ತಿಗೆ ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ದಾರಿ ತೋರಿಸಿದ ಉಪನಯನ ಸಂಸ್ಕಾರದ ಜನಕರು ಶ್ರೀ ಸವಿತ ಮಹರ್ಷಿಗಳು. ಸವಿತ ಸಮಾಜವು ಕೇವಲ ಒಂದು ಸಮುದಾಯವಲ್ಲ, ಅದು ವಿಶ್ವದ ಪ್ರಥಮ ವೈದ್ಯಕೀಯ ಪರಂಪರೆಯ ತಾಯಿಬೇರು.”ಸಾಮವೇದವನ್ನು ಗಾಯನ ರೂಪದಲ್ಲಿ ನೀಡಿದ ಕೀರ್ತಿ ಈ ಮಹರ್ಷಿಗಳಿಗೆ ಸಲ್ಲುತ್ತದೆ. ಋಗ್ವೇದ ಪಠಣ ಪುರೋಹಿತರಿಗೆ ಸೀಮಿತವಾದರೆ, ನಾದಸ್ವರದ ಮೂಲಕ ಸಾಮವೇದ ಮೊಳಗಿಸುವ ಸವಿತ ಸಮಾಜದ ಕಲೆ ಸರ್ವರಿಗೂ ತಲುಪಿದೆ. ನಂದವAಶದ ಸ್ಥಾಪಕ ಮಹಾಪದ್ಮನಂದರು, ಪ್ಲಾಸ್ಟಿಕ್ ಸರ್ಜರಿ ಪರಿಚಯಿಸಿದ ಆದಿ ವೈದ್ಯರು ಇದೇ ಸಮಾಜದವರು ಎಂಬುದು ಹೆಮ್ಮೆಯ ಸಂಗತಿ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎA. ಬೆಳಗಲ್ ಮಾತನಾಡಿ, ಶಿವನ ಬಲಗಣ್ಣಿನಿಂದ ಉದ್ಭವಿಸಿದ ಸವಿತ ಮಹರ್ಷಿಗಳು 1875 ಶ್ಲೋಕಗಳ ಮೂಲಕ ಜ್ಞಾನದೀಪ್ತಿ ಬೆಳಗಿದ್ದಾರೆ ಎಂದರು.
ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಸವಿತಾ ಸಮಾಜವು ನಾಟಿ ವೈದ್ಯಪದ್ಧತಿಯ ಮೂಲಕ ಜನಸಾಮಾನ್ಯರ ಜೊತೆ ಬೆರೆತ ‘ಸ್ನೇಹ ಸಮಾಜ’ ಎಂದು ಶ್ಲಾಘಿಸಿದರು.

ಶಿರಸ್ತೇದಾರ ಎಂ.ಎ.ಬಾಗೇವಾಡಿ, ಮುಖ್ಯ ಪಶುವೈದ್ಯಾಧಿಕಾರಿ ಶಿವಾನಂದ ಮೇಟಿ, ಎಎಸೈ ಅಮರಪ್ಪ ಸಾಲಿ, ಕಂದಾಯ ನಿರೀಕ್ಷಕ ಪವನ ತಳವಾರ, ಸಮಾಜದ ಅಧ್ಯಕ್ಷ ರವಿ ತೇಲಂಗಿ ಹಾಗೂ ಗೌರವ ಅಧ್ಯಕ್ಷ ಮಲ್ಲಣ್ಣ ತೇಲಂಗಿ,ಸಮಾಜದ ಪ್ರಮುಖರಾದ ದೇವೇಂದ್ರ ಶಹಾಪೂರ, ಈರಣ್ಣ ಇಡ್ಲೂರ, ಅಪ್ಪು ಶಹಾಪೂರ, ಶರಣಪ್ಪ ಮಸಾಲಜಿ, ಶ್ರೀನಿವಾಸ ಶಹಾಪೂರ, ಪ್ರವೀಣ ಮಸಾಲಜಿ, ಶ್ರೀಕಾಂತ ತೇಲಂಗಿ, ಕುಮಾರ್ ತೇಲಂಗಿ, ಸುರೇಶ್ ಮಸಾಲಜಿ, ಶಂಕ್ರಪ್ಪ ಹಡಪದ, ಭೀಮಣ್ಣ ಬಳವಾಟ, ಶಂಕರಪ್ಪ ಅಮರಗೋಳ, ತಿಪ್ಪಣ್ಣ ಶಹಾಪೂರ, ರಾಘವ್ ತೇಲಂಗಿ, ಗೌತಮ್ ಚಿಗನೂರ ಮತ್ತು ಕಾರ್ಮಿಕ ಇಲಾಖೆಯ ಸಿದ್ದು ನಾವಿ ಸೇರಿದಂತೆ ಸವಿತ ಹಾಗೂ ಹಡಪದ ಸಮಾಜದ ಬಂಧುಗಳು ಭಾಗವಹಿಸಿದ್ದರು.

ಶಿಕ್ಷಕ ಎಂ.ಬಿ. ಗುಡಗುಂಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಸವಿತ ಮಹರ್ಷಿ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

Latest News

16.17 ಲಕ್ಷ ರೂ.ಲಾಭ :                                                     ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

16.17 ಲಕ್ಷ ರೂ.ಲಾಭ : ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ:                                        ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಪಿಲೇಕೆಮ್ಮ ನಗರದ ನಿವಾಸಿಗಳ ಮನವಿ: ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ,ಉತಾರೆ ಪೂರೈಸಲು ಆಗ್ರಹ

ಮುದ್ದೇಬಿಹಾಳ : ಸುಮಾರು 30-40 ವರ್ಷದಿಂದ ಪಟ್ಟಣದ ಪಿಲೆಕೆಮ್ಮ ನಗರದಲ್ಲಿ ವಾಸವಿರುವ ನಿವಾಸಿಗಳಿಗೆ ಸರ್ಕಾರದಿಂದ

ನಾಗರಬೆಟ್ಟ ಏತ ನೀರಾವರಿ ಯೋಜನೆ:                                ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ನಾಗರಬೆಟ್ಟ ಏತ ನೀರಾವರಿ ಯೋಜನೆ: ಅ.5ರೊಳಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ 2018ರಲ್ಲಿಯೇ ಟೆಂಡರ್ ಆಗಿದ್ದು ಕಳೆದ ಎಂಟು

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಸೆ.20 ರಂದು ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಮುದ್ದೇಬಿಹಾಳ : ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ:                              ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ: ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಮುದ್ದೇಬಿಹಾಳ : ಪ್ರಕೃತಿ ವಿಕೋಪ ಹಾಗೂ ತೀವ್ರ ಬರಪೀಡಿತ ಸಂದರ್ಭದಲ್ಲಿ ರೈತರಿಗೆ ನೆರವು ಒದಗಿಸುವ ಕಾರ್ಯಗಳನ್ನು ಸರ್ಕಾರ ಕೈಗೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ಆಗ್ರಹಿಸಿದರು. ಪಟ್ಟಣದ ಮುದ್ದೇಬಿಹಾಳ ತಾಲೂಕಾ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ(ಪಿಕಾರ್ಡ್)ದ ಬ್ಯಾಂಕ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ 62ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಕಳೆದ 3 ವರ್ಷಗಳಿಂದ ನಮ್ಮ ಬ್ಯಾಂಕ್ ಸಾಲ ವಸೂಲಾತಿಯಲ್ಲಿ ಸತತ ಮೂರುಬಾರಿ ಜಿಲ್ಲೆಗೆ ಪ್ರಥಮ

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ:                     ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಕೆಬಿಜೆಎನ್‌ಎಲ್ ಅಧಿಕಾರಿ ವಿರುದ್ಧ ಆರೋಪ: ‘ಸರ್ಕಾರ ಹಣ ಕೊಡುತ್ತಿಲ್ಲ,ನೀವೆ ಪಟ್ಟಿ ಹಾಕಿಕೊಂಡು ಕಾಲುವೆ ದುರಸ್ತಿ ಮಾಡಿಕೊಳ್ಳಿ’

ಮುದ್ದೇಬಿಹಾಳ : ಸರ್ಕಾರ ಕಾಲುವೆಗಳ ದುರಸ್ತಿಗೆ ಹಣ ಕೊಡುತ್ತಿಲ್ಲ.ನೀವೇ ಪಟ್ಟಿ ಹಾಕಿಕೊಂಡು ಕಾಲುವೆ ರಿಪೇರಿ ಮಾಡಿಕೊಳ್ಳಬೇಕು ಎಂದು ಕೆಬಿಜೆಎನ್‌ಎಲ್ ಎಎಲ್‌ಬಿಸಿ ಉಪವಿಭಾಗ ನಂ.2ದ ಅಧಿಕಾರಿ ನಮ್ಮ ರೈತರಿಗೆ ಪುಕ್ಕಟೆ ಸಲಹೆ ಕೊಡುತ್ತಿದ್ದಾರೆ ಎಂದು ನಾಲತವಾಡದ ಯುವ ರೈತ ಮುಖಂಡ ಸಂಗಮೇಶ ಮೇಟಿ ಆರೋಪಿಸಿದರು. ತಾಲ್ಲೂಕಿನ ನಾಲತವಾಡ ಪಟ್ಟಣ ವ್ಯಾಪ್ತಿಯಲ್ಲಿ ಹಾಯ್ದು ಹೋಗಿರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಲ್ಯಾಟರಲ್ ನಂ.10ರ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಪಟ್ಟಣದ ಹುಡ್ಕೋದಲ್ಲಿರುವ ಸಂಬAಧಿಸಿದ