ಮುದ್ದೇಬಿಹಾಳ : ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿಯ ಅಧಿಕಾರ ವಹಿಸಿಕೊಂಡ ಅವಧಿಯಿಂದ ಮುಕ್ತಾಯದ ಅವಧಿಯವರೆಗೆ ನಾವು ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದೇವೆ ಹೊರತು ಒಂದು ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡಿಲ್ಲ.ಅAಜುಮನ್ ಸಂಸ್ಥೆಯ ಹಿತಚಿಂತಕರು ಈಚೇಗೆ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳು ನಿರಾಧಾರ ಎಂದು ಅಂಜುಮನ್ ಇಸ್ಲಾಂ ಕಮೀಟಿ ಮಾಜಿ ಅಧ್ಯಕ್ಷ ಅಲ್ಲಾಭಕ್ಷö್ಯ ನಾಯ್ಕೋಡಿ ಹೇಳಿದರು.
ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯಲ್ಲಿ ನಡೆದಿರುವ ವ್ಯವಹಾರಗಳ ಲೆಕ್ಕಪತ್ರಗಳನ್ನು ಬಿಚ್ಚಿಟ್ಟರು.
ನಮ್ಮ ಅವಧಿ ಆರಂಭವಾಗಿದ್ದೇ 2018-21ರಲ್ಲಿ.ಆಗ ಕೋವಿಡ್ ಸೋಂಕಿನಿAದ ಸಂಸ್ಥೆಯ ಅಭಿವೃದ್ಧಿಗೆ ಸಾಕಷ್ಟು ಹಿನ್ನಡೆಯಾಯಿತು. ಶಾಲೆಯು ಹಳೆ ಕಟ್ಟದಲ್ಲಿದ್ದು ಅದರ ನವೀಕರಣ ನಮ್ಮ ಸಮಾಜದವರಿಗೆ ಗುತ್ತಿಗೆ ಕೊಟ್ಟು ಮಾಡಿಸಿದ್ದೇವೆ.ಅದರಲ್ಲೂ ಹಿಂದೂ ಸಮಾಜದ ಸುಭಾಷ ಪತ್ತಾರ ಅವರು ತಮ್ಮ ಮನೆ ಕಟ್ಟುವಾಗ ಶೌಚಾಲಯಕ್ಕೆ ಹೋಗು ಮಕ್ಕಳಿಗೆ ಗೌರವ ಬರುವಂತೆ ಶೌಚಾಲಯ ನಿಮ್ಮಿಂದ ಆಗದಿದ್ದರೆ ನಾನು ನಿರ್ಮಿಸಿಕೊಡುವೆ ಎಂದು ಹೇಳಿದ್ದು ಸ್ಮರಿಸಿಕೊಳ್ಳುತ್ತೇವೆ.ಅವತ್ತೇ ಅಂಜುಮನ್ ಸಂಸ್ಥೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಹತ್ತು ಲಕ್ಷ ರೂ.ಖರ್ಚು ಆಗಿದೆ ಮಾಡಲಾಯಿತು.
1975 ರಲ್ಲಿ ಹೈಸ್ಕೂಲ್ ಇತ್ತು.ಶಿಥಿಲ ಇದ್ದ ಕಟ್ಟಡಗಳನ್ನು ದುರಸ್ತಿ ಮಾಡಿಸಿದ್ದೇವು. ಗಣಪತಿ ಗುಡಿ ಹತ್ತಿರ ಸಂಸ್ಥೆಯ ಕಾಂಪ್ಲೆಕ್ಸ್ ಪೂರ್ಣಗೊಳಿಸಿದ್ದೇವೆ.25 ಸದಸ್ಯರು ಇದಕ್ಕೆ ಸರ್ವಸಮ್ಮತವಾದ ಸಹಕಾರ ನೀಡಿದ್ದಾರೆ.ಸಂಸ್ಥೆಯ ಕಚೇರಿ ಹಳೆಯದಾಗಿತ್ತು ಅದನ್ನು ನವೀಕರಿಸಿದ್ದೇವೆ.ಅದಕ್ಕೆ 19 ಲಕ್ಷ ರೂ.ಖರ್ಚು ಆಗಿದೆ. ಸಂಸ್ಥೆಯಡಿ 1.50 ಕೋಟಿ ರೂ. ವೆಚ್ಚದಲ್ಲಿ ಮೂರು ಮಹಡಿಗಳ ಆಸ್ಪತ್ರೆ ಕಟ್ಟಲು ಯೋಜಿಸಿದ್ದೇವು.ಆದರೆ ಕೋವಿಡ್ ಕಾರಣ ಅದನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು ಎಂದು ಹೇಳಿದರು.
ನಾವು ನಮ್ಮ ಅವಧಿಯಲ್ಲಿ ಅಭಿವೃದ್ಧಿ ತೋರಿಕೆಗೆಂದು ಮಾಡಿಲ್ಲ.ಸಂಸ್ಥೆಯ ಏಳ್ಗೆಗೆ ನಮ್ಮಿಂದ ಆಗಿರುವ ಪ್ರಾಮಾಣಿಕ ಕೆಲಸ ಮಾಡಿದ್ದೇವೆ.ನಾವು ಅಧಿಕಾರ ವಹಿಸಿಕೊಂಡ ಮೂರು ವರ್ಷದ ಅವಧಿಯಲ್ಲಿ ಆರಂಭ ಶಿಲ್ಕು 1.59,07,547 ಇದ್ದು 1,58,17,640 ಖರ್ಚು ಆಗಿದೆ ಎಂದು ವಿವರ ನೀಡಿದರು.
ಜಾಗೆ ಮಾರಾಟದ ಆರೋಪ :
180/2 ಬಿದರಕುಂದಿ ಸರ್ವೆಯಲ್ಲಿ ಜಮೀನು ಅಂಜುಮನ್ ಕಮೀಟಿಗೆ ಆಸ್ತಿಯನ್ನು ದೇಣಿಗೆ ಪೀರಸಾಬ ಸಗರ ಅವರಿಂದ ಬಂದಿದೆ.ಅಲ್ಲಿ ಅರೇಬಿಕ್ ಸ್ಕೂಲ್ ಮಾಡಲು 1980 ರ ಅವಧಿಯಲ್ಲಿ ನೀಡಲು ದಾನ ಮಾಡಿದ್ದರು.ಆದರೆ ತುಂಡು ಭೂಮಿ ಪ್ರತಿಬಂಧಕ ಕಾಯ್ಸೆ ಅನ್ವಯ ಭೂಮಿ ಪೋಡಿ ಮಾಡಲು ಬರುತ್ತಿರಲಿಲ್ಲ.ಹಾಗಾಗಿ 1.12 ಗುಂಟೆ ಎನ್.ಎ ಮಾಡಿ ಕೊಡಬೇಕು ಎಂದು ಮಾತುಕತೆ ಆಗಿತ್ತು. ಅಲ್ಲದೇ ಸಗರ ಅವರು ತಮ್ಮ ಗೋರಿ ಅಲ್ಲೆ ಮಾಡಬೇಕು.ಮಸೀದಿ ಕಟ್ಟಬೇಕು.ಅರೇಬಿಕ್ ಸ್ಕೂಲ್ ಮಾಡಬೇಕು ಎಂದು ಷರತ್ತು ವಿಧಿಸಿ ಕೊಟ್ಟಿದ್ದರು.7-9-1980 ರಂದು ಠರಾವು ಪಾಸು ಮಾಡಿದ್ದು ಖರೀದಿ ಮಾಡಿಕೊಂಡು ಬಳಿಕ ಸಂಸ್ಥೆಗೆ ಅಗತ್ಯವಿದ್ದಷ್ಟು ಜಾಗೆ ಉಳಿಸಿಕೊಂಡು 1.12 ಎಕರೆ ಜಾಗೆ ಅವರಿಗೆ ಬಿಟ್ಟು ಕೊಡಬೇಕು ಎಂದು ಠರಾವು ಪಾಸು ಮಾಡಿದರು.2010 ರವರೆಗೂ ದಾವಾ ನಡೆಯಿತು.ಭಾಷಾಸಾಬ ಅವಟಿ ಅವಧಿಯಲ್ಲಿ ಠರಾವು ಪಾಸು ಮಾಡಲಾಗಿತ್ತು. ಬಳಿಕ ಆಸ್ತಿ ವಕ್ಭ್ ಎಂದು ಘೋಷಣೆ ಆಯಿತು.ಆದರೆ ಈ ಜಾಗೆ ವಕ್ಭ್ ಆಸ್ತಿಯಲ್ಲ ಎಂದು ಹೇಳಿದರಲ್ಲದೇ ಅದರ ಮಾರಾಟಕ್ಕೆ ನಾವೆಲ್ಲ ಮುಂದಾಗಿದ್ದೇವೆ ಎನ್ನುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಹೇಳಿದರು.
ಸಂಸ್ಥೆಗೆ ಜಿಎಸ್ಟಿ ದುಡ್ಡು ಸಂಸ್ಥೆಗೆ ಹೊರೆಯಾಗಿದೆ ಎಂದು ಆರೋಪಿಸಿರುವುದಲ್ಲಿ ಯಾವುದೇ ಹುರುಳಿಲ್ಲ.ಜಿಲ್ಲೆಯಲ್ಲಿ ವಕ್ಭ್ ಕಚೇರಿಯಲ್ಲಿ ಅಡಿಟರ್ ಇರುತ್ತಾರೆ.ಜಿಲ್ಲೆಯಲ್ಲಿ 2012 ರಿಂದ ಇಲ್ಲಿಯವರೆಗೂ ಅಡಿಟ್ ಮಾಡಿಲ್ಲ.2024ರಲ್ಲಿ ಜಿಎಸ್ಟಿ ನೋಟಿಸ್ ಬಂದಿದೆ. ಅದಕ್ಕೆ ಉತ್ತರ ಸಂಸ್ಥೆಯ ಆಡಳಿತಾಧಿಕಾರಿ ಕೊಡಬೇಕು.ಅದು ನಮ್ಮ ಕಾಲಾವಧಿಯಲ್ಲಿ ಆಗಿದ್ದಲ್ಲ ಎಂದು ಉತ್ತರಿಸಿದರು,
ಶಾದಿ ಮಹಲ್ ಹಣ 25 ಲಕ್ಷ ಹಣ ಒಮ್ಮೆಗೆ ತೆಗೆದುಕೊಳ್ಳಲು ಬರುವುದಿಲ್ಲ.ಜಿಎಸ್ಟಿ ಕಡಿತಗೊಳಿಸಿ 23 ಲಕ್ಷ ಅಮೌಂಟ್ ಸಂಸ್ಥೆಯ ಖಾತೆಗೆ ಜಮಾ ಆಗಿದೆ.ಅದನ್ನು ಅಂಜುಮನ್ ಇಸ್ಲಾಂ ಕಟ್ಟಡ ನಿರ್ಮಾಣ ಸಮೀತಿ ಹೆಸರಿನಲ್ಲಿ ಖಾತೆ ಮಾಡಿಸಿದ್ದೇನೆ.ನನ್ನ ವಯಕ್ತಿಕ ಖಾತೆಯಲ್ಲಿ ಒಂದು ರೂಪಾಯಿ ಕೂಡಾ ಇಟ್ಟುಕೊಂಡಿಲ್ಲ.ಅವ್ಯವಹಾರ ಆಗಿದೆ ಎಂದರೆ ತನಿಖೆ ನಡೆಸಿ ದೂರು ದಾಖಲಿಸಲಿ ಎಂದು ಹೇಳಿದರು.ಶಾದಿ ಮಹಲ್ ಕಟ್ಟಡ ನಿರ್ಮಾಣ ರಾಜು ದಡ್ಡಿ ಎನ್ನುವರು ಕೋರ್ಟನಲ್ಲಿ ದಾವೆ ಹೂಡಿದ ಕಾರಣ ಸ್ಥಗಿತ ಆಯಿತು.ಖಾತೆಯಲ್ಲಿ 4.81 ಲಕ್ಷ ಜಮಾ ಇದೆ ಎಂದರು.ಕಟ್ಟಡದ ಬಳಕೆ ಪ್ರಮಾಣಪತ್ರ ಕೊಡಬೇಕಿರುವುದು ಆಡಳಿತಾಧಿಕಾರಿಯೇ ಹೊರತು ನಾವಲ್ಲ ಎಂದು ಸ್ಪಷ್ಟಪಡಿಸಿದರು.
ಖಬರಸ್ತಾನ ದುಡ್ಡಿನ ಮಾಹಿತಿ ಕೇಳಿದ್ದಾರೆ.ಅಂಜುಮನ್ ಸಂಸ್ಥೆಯ ವ್ಯವಹಾರಗಳು ಎಂದಿಗೂ ಬಹಿರಂಗ ವೇದಿಕೆಯಲ್ಲಿ ಚರ್ಚೆ ಆಗಿರಲಿಲ್ಲ.ನಾವು ಸಂಸ್ಥೆಯಲ್ಲಿ ಒಂದುಕಪ್ ಚಹಾ ಕೂಡಾ ಕುಡಿದಿಲ್ಲ. ಖಬರಸ್ಥಾನ ಜಾಗೆ ಖರೀದಿಗೆಂದು ಅಂದಾಜು 19 ಲಕ್ಷ ಜಮಾ ಆಗಿದೆ.ಆ ಲೆಕ್ಕ ಪತ್ರ ಯಾರ ಕಡೆ ಇದೆ ಅವರನ್ನು ಕೇಳಬೇಕು.ಈ ವಿಷಯವಾಗಿ 1-9-2021 ರಲ್ಲಿ ಮಸೀದಿಗಳಲ್ಲಿ ಖಬರಸ್ಥಾನದ ಹಣದ ಲೆಕ್ಕಪತ್ರ ನೀಡಲು ಮೂರು ಬಾರಿ ಸಂದೇಶ ನೀಡಲಾಗಿದೆ ಎಂದು ತಿಳಿಸಿದರು.
10-10-2021 ರಲ್ಲಿ ಮಕ್ಕಾ ಮಸೀದಿಯಲ್ಲಿ ಸಭೆ ಸೇರಲಾಯಿತು.ಖಬರಸ್ಥಾನದ ಜಾಗೆಯನ್ನು ತಗೆದುಕೊಳ್ಳಬೇಕು ಎಂದು. ಖಬರಸ್ಥಾನ ಅಭಿವೃದ್ಧಿ ಸಮೀತಿ ಅಂತ ರಚಿಸಿದ್ದೇವೆ.ದಾಖಲೆಗಳನ್ನು ಒದಗಿಸಲು ನಾನು ಸಿದ್ಧನಿದ್ದೇನೆ.ಸರ್ಟಿಫೈಡ್ ದಾಖಲೆ ಕೊಡಲು ಸಂಬAಧಿಸಿದ ಅಧಿಕಾರಿಗಳು ಇದ್ದಾರೆ.ಚುನಾವಣೆ ವಿಷಯಕ್ಕೆ ಸಂಬAಧಿಸಿದAತೆ ನಮ್ಮ ಅವಧಿ ಮುಗಿದ ಕೂಡಲೇ ಜಿಲ್ಲಾ ವಕ್ಭ್ ಅಧಿಕಾರಿಗೆ ಪತ್ರ ಬರೆದು ಚುನಾವಣೆ ನಡೆಸಲು ವಿನಂತಿಸಿದ್ದೇವೆ.ಈಗ ಮತದಾರರ ನೋಂದಣಿ ಕಾರ್ಯ ಆಗಿದ್ದು ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ.ಸಂಬAಧಿಸಿದ್ದಲ್ಲದ ವ್ಯಕ್ತಿಗಳನ್ನು ತಗೆಯಲು ಸಂಬAಧಿಸಿದ ಇಲಾಖೆ,ಅಧಿಕಾರಿ ಇದ್ದಾರೆ.ಇದಕ್ಕೂ ನಮಗೇ ಯಾವುದೇ ಸಂಬAಧವಿಲ್ಲ ಎಂದು ಹೇಳಿದರು.ಅಂಜುಮನ್ ಹಿತರಕ್ಷಣಾ ಸಮೀತಿಯವರು ಆಧಾರ ರಹಿತವಾದ ಮಾಹಿತಿ ಕೊಡಬಾರದು.ಲೋಕಾಯುಕ್ತ ಕಚೇರಿಗೂ ದೂರು ಕೊಟ್ಟಿದ್ದು ತನಿಖೆ ಆಗಲಿ.ನಮ್ಮದು ಸಹಮತ ಇದೆ ಎಂದು ಆರೋಪಗಳಿಗೆ ಉತ್ತರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಾಧ್ಯಕ್ಷ ಅಬ್ದುಲಜಬ್ಬಾರ ಗೋಲಂದಾಜ, ಮಾಜಿ ಸದಸ್ಯರಾದ ಅಲ್ಲಾಭಕ್ಷö್ಯ ದೇಸಾಯಿ,ರಹಿಮಾನ ಹಳ್ಳೂರ, ಇಸ್ಮಾಯಿಲ್ ಗೋಲಂದಾಜ,ಸುಲೇಮಾನ ಮಮದಾಪೂರ, ಬುಡ್ಡಾ ನಾಯ್ಕೋಡಿ,ಅತಾವುಲ್ಲಾ ಭಂಡಾರಿ,ರಫೀಕ ಮಕಾನದಾರ,ಅಬ್ದುಲವಾಜೀದ ಮಕಾನದಾರ,ಬಸೀರಹ್ಮದ ಅತ್ತಾರ,ಫಾರೂಕ ಚೌದ್ರಿ, ಮಹೆಬೂಬ ಅತ್ತಾರ ಇದ್ದರು.
ಅಂಜುಮನ್ ಆಡಳಿತಾಧಿಕಾರಿ ವಿರುದ್ಧ ಆರೋಪ: ಅಂಜುಮನ್ ಇಸ್ಲಾಂ ಕಮೀಟಿಯ ಚುನಾಯಿತ ಆಡಳಿತ ಮಂಡಳಿ ಅವಧಿ ಪೂರ್ಣಗೊಂಡ ಬಳಿಕ ಸರ್ಕಾರ ಆಡಳಿತಾಧಿಕಾರಿಯನ್ನಾಗಿ ತಬಸ್ಸುಮ್ ಮಹೆಷವಾಡಗಿ ಅವರನ್ನು ನೇಮಿಸಿದ್ದು ಅಂಜುಮನ್ ಸಂಸ್ಥೆಯ ಲೆಕ್ಕಪತ್ರಗಳು,ಆಡಳಿತ ನಿರ್ವಹಣೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ.ಅವರನ್ನು ಬದಲಾಯಿಸುವಂತೆ ತಹಶೀಲ್ದಾರ್ ಕಚೇರಿ ಹತ್ತಿರ ಮೂರು ದಿನಗಳ ಕಾಲ ಪ್ರತಿಭಟನೆ ಮಾಡಿದ್ದೇವೆ.ಶಾಸಕರು ಬಂದು ಆಶ್ವಾಸನೆ ಕೊಟ್ಟಿದ್ದರು.ಆದರೆ ಈವರೆಗೂ ಅವರೇ ಮುಂದುವರೆದಿದ್ದಾರೆ ಎಂದು ಅಂಜುಮನ್ ಕಮೀಟಿ ಮಾಜಿ ಸದಸ್ಯರು ಹೇಳಿದರು.





