ಟಗರಿನ ಕಾಳಗ ಪ್ರಮುಖ ಆಕರ್ಷಣೆ: ಮುದ್ದೇಬಿಹಾಳ : ಮಾ.18 ರಂದು ಪಿಲೇಕೆಮ್ಮ ದೇವಿ ಜಾತ್ರಾ ಮಹೋತ್ಸವ

ಟಗರಿನ ಕಾಳಗ ಪ್ರಮುಖ ಆಕರ್ಷಣೆ: ಮುದ್ದೇಬಿಹಾಳ : ಮಾ.18 ರಂದು ಪಿಲೇಕೆಮ್ಮ ದೇವಿ ಜಾತ್ರಾ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದ ಪಿಲೇಕೆಮ್ಮ ನಗರದಲ್ಲಿರುವ ಪಿಲೇಕೆಮ್ಮ ದೇವಿ ಜಾತ್ರಾಮಹೋತ್ಸವ ಮಾ.18 ಹಾಗೂ 19ರಂದು ನಡೆಯಲಿದ್ದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮಾ.18 ರಂದು ಬೆಳಗ್ಗೆ 5ಗಂಟೆಗೆ ಪಲ್ಲಕ್ಕಿ ಗಂಗಸ್ಥಳಕ್ಕೆ ಹೋಗಿ ಬರುವುದು.8ಕ್ಕೆ ಬೀರಲಿಂಗೇಶ್ವರ ಡೊಳ್ಳಿನ ಕುಣಿತದೊಂದಿಗೆ ಹಾಗೂ ತೆಲಗಿ ಕರಡಿ ಮಜಲಿನೊಂದಿಗೆ ದೇವಿಯ ಪಲ್ಲಕ್ಕಿಯನ್ನು ಬರಮಾಡಿಕೊಳ್ಳಲಾಗುವುದು.ನಂತರ ದೇವಿಗೆ ಮಹಾಭಿಷೇಕ ಜರುಗಲಿದೆ.

ಸಾಯಂಕಾಲ 4ಕ್ಕೆ ಟಗರಿನ ಕಾಳಗ ಸ್ಪರ್ಧೆಯಲ್ಲಿ ನಾಲ್ಕು ಹಲ್ಲಿನ,ಆರು ಹಲ್ಲಿನ ಹಾಗೂ ಓಪನ್ ಟಗರಿನ ಕಾಳಗ ಸ್ಪರ್ಧೆ ನಡೆಯಲಿದೆ.ಅಂದೇ ರಾತ್ರಿ 10ಕ್ಕೆ ದೈವ ದಾರಿ ಬಿಡಿಸಿತೇ ನಾಟಕ ಪ್ರದರ್ಶನ ಜರುಗಲಿದೆ.

ಮಾ.19 ರಂದು ಬೆಳಗ್ಗೆ 9ಕ್ಕೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ,ಮದ್ಯಾಹ್ನ 3ಕ್ಕೆ ಮಹಿಳೆಯರಿಗೆ ಮ್ಯೂಜಿಕಲ್ ಚೇರ್ ಸ್ಪರ್ಧೆ ನಡೆಯಲಿದೆ.ಸಂಜೆ 6ಕ್ಕೆ ಕಳಸವು ಶಿಖರಕ್ಕೇರುವುದು.ಎರಡು ದಿನಗಳ ಕಾಲ ಅನ್ನ ಸಂತರ್ಪಣೆ ಜರುಗಲಿದೆ.

ಅಂದೇ ರಾತ್ರಿ 10ಕ್ಕೆ ಅದ್ವಿಕಾ ಸಾಂಸ್ಕೃತಿಕ ಕಲಾ ತಂಡದಿoದ ಹಾಸ್ಯ ಸಂಗೀತ ರಸಮಂಜರಿ ಕಾರ್ಯಕ್ರಮ ಜರುಗಲಿದೆ.ಹೆಚ್ಚಿನ ಮಾಹಿತಿಗೆ ಮೊ.7026809686,9740491943 ಸಂಪರ್ಕಿಸಬಹುದಾಗಿದೆ ಎಂದು ಪಿಲೇಕೆಮ್ಮ ದೇವಸ್ಥಾನ ಟ್ರಸ್ಟ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ವಿದ್ಯುತ್ ಸ್ಪರ್ಶಿಸಿ ಪಿಗ್ಮಿ ಏಜೆಂಟ್ ಸಾವು

ವಿದ್ಯುತ್ ಸ್ಪರ್ಶಿಸಿ ಪಿಗ್ಮಿ ಏಜೆಂಟ್ ಸಾವು

ಮುದ್ದೇಬಿಹಾಳ : ಮನೆ ಕಟ್ಟಡಕ್ಕೆ ನೀರು ಹೊಡೆಯುವ ಸಂದರ್ಭದಲ್ಲಿ ಮೋಟರ್‌ಗೆ ಪೈಪ್ ಜೋಡಿಸುವ ವೇಳೆ

ಪತ್ರಕರ್ತರಾದ ದಫೇದಾರ,ಉಕ್ಕಲಿ,ಹೋರಾಟಗಾರ ನಾಟೀಕಾರ ಸೇರಿ 30 ಜನ ಆಯ್ಕೆ

ಪತ್ರಕರ್ತರಾದ ದಫೇದಾರ,ಉಕ್ಕಲಿ,ಹೋರಾಟಗಾರ ನಾಟೀಕಾರ ಸೇರಿ 30 ಜನ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಹುಲ್ಲೂರು ಗ್ರಾಮದ ಚೆನ್ನಬಸವ ಶ್ರೀ ಏಜ್ಯೂಕೇಷನ ರೂರಲ್ ಕಲ್ಚರಲ್ ಸೊಸೈಟಿಯಿಂದ

ಒಲೆಯ ಮೇಲೆ ರೊಟ್ಟಿ ಬೇಯಿಸಿ ಪ್ರತಿಭಟನೆ:                     ಪ್ರಧಾನಿ ಮೋದಿ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ

ಒಲೆಯ ಮೇಲೆ ರೊಟ್ಟಿ ಬೇಯಿಸಿ ಪ್ರತಿಭಟನೆ: ಪ್ರಧಾನಿ ಮೋದಿ ರಾಜೀನಾಮೆ ಕೊಟ್ಟು ಮನೆಗೆ ತೊಲಗಲಿ

ಮುದ್ದೇಬಿಹಾಳ : ದೇಶವನ್ನು ಆಳುತ್ತಿರುವ ಪ್ರಧಾನ ನರೇಂದ್ರ ಮೋದಿ ಅವರಿಗೆ ಬಡವರು,ಮಧ್ಯಮ ವರ್ಗದವರದ್ದು ಆಲೋಚನೆ

ಜನ್ಮದಿನದ ಆಚರಣೆಗಳ ನೆಪದಲ್ಲಿ ದುಂದುವೆಚ್ಚ ಬೇಡ-ಕಾಶೀಬಾಯಿ ರಾಂಪೂರ

ಜನ್ಮದಿನದ ಆಚರಣೆಗಳ ನೆಪದಲ್ಲಿ ದುಂದುವೆಚ್ಚ ಬೇಡ-ಕಾಶೀಬಾಯಿ ರಾಂಪೂರ

ಮುದ್ದೇಬಿಹಾಳ : ಜನ್ಮದಿನ,ಮದುವೆ ವಾರ್ಷಿಕೋತ್ಸವ ಹಾಗೂ ಇನ್ನೀತರ ವಯಕ್ತಿಕ ಶುಭ ಸಂದರ್ಭಗಳಲ್ಲಿ ದುಂದುವೆಚ್ಚ ಮಾಡದೇ

ಡಿ.ಕೆ.ಶಿವಕುಮಾರ ಆಕ್ಸಿಜನ್ ಮ್ಯಾನ್-ಸದ್ದಾಂ ಕುಂಟೋಜಿ

ಡಿ.ಕೆ.ಶಿವಕುಮಾರ ಆಕ್ಸಿಜನ್ ಮ್ಯಾನ್-ಸದ್ದಾಂ ಕುಂಟೋಜಿ

ಮುದ್ದೇಬಿಹಾಳ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಡಿಸಿಎಂ ಡಿ.ಕೆ.ಶಿವಕುಮಾರ ಅವರದ್ದು ಪ್ರಧಾನ ಪಾತ್ರವಾಗಿದೆ.ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನರ ಜೀವ ಉಳಿಸಲು ಶ್ರಮಿಸಿದ ಅವರನ್ನು ಆಕ್ಸಿಜನ್ ಮ್ಯಾನ್ ಎಂದೇ ಗುರುತಿಸಲಾಗಿದೆ ಎಂದು ಎನ್.ಎಸ್.ಯೂ.ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಂ ಕುಂಟೋಜಿ ಹೇಳಿದರು. ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಎನ್.ಎಸ್.ಯೂ.ಐ ಹಾಗೂ ಯುವ ಕಾಂಗ್ರೆಸ್ ಸಂಘಟನೆ ವತಿಯಿಂದ ಮಂಗಳವಾರ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಅಧಿಕಾರ ಪೂರೈಸಿದ

ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ:                   ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣ-ಹಾಲಗಂಗಾಧರಮಠ

ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ: ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣ-ಹಾಲಗಂಗಾಧರಮಠ

ಮುದ್ದೇಬಿಹಾಳ : ಮಕ್ಕಳಿಗೆ ಬಾಲ್ಯದಲ್ಲಿ ಗುರುಕುಲ ಮಾದರಿ ಶಿಕ್ಷಣದಿಂದ ಸಂಸ್ಕಾರ,ಸAಸ್ಕೃತಿಯ ಅರಿವು ದೊರೆಯುತ್ತದೆ ಎಂದು ನೆರಬೆಂಚಿ ಗ್ರಾಮದ ವೇ.ಸಂಗಯ್ಯ ಹಾಲಗಂಗಾಧರಮಠ ಹೇಳಿದರು. ಪಟ್ಟಣದ ಮಹಾಂತೇಶ ನಗರದಲ್ಲಿರುವ ವಿಶ್ವಭಾರತಿ ಪಬ್ಲಿಕ್ ಸ್ಕೂಲ್‌ನಲ್ಲಿ ಎಂಟನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರ ಇಂದು ವ್ಯಾಪಾರೀಕರಣಗೊಂಡಿದೆ.ಎಲ್.ಕೆ.ಜಿ.ಯುಕೆಜಿ ಮಕ್ಕಳಿಗೆ 50-60 ಸಾವಿರ ರೂ.ಶುಲ್ಕ ವಸೂಲಿ ಮಾಡುವ ಮೂಲಕ ಶಿಕ್ಷಣ ದುಬಾರಿಯೆನ್ನುವ ಭಾವನೆಯನ್ನು ಉಳ್ಳವರು ಪ್ರದರ್ಶನ ಮಾಡುತ್ತಿದ್ದಾರೆ.ಬಡ.ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ಕೈಗೆಟುಕಬೇಕಾದರೆ