ಮುದ್ದೇಬಿಹಾಳ : ಬಸವನ ಬಾಗೇವಾಡಿ ವಿದ್ಯುತ್ ಸ್ವೀಕೃತ ಕೇಂದ್ರದಲ್ಲಿ ಐಸೋಲೇಟರ್‌ಗಳ ಮೊದಲನೆಯ ತ್ರೈಮಾಸಿಕ ನಿರ್ವಹಣಾ ಕಾರ್ಯ ಜರುಗಲಿದೆ.
ಆ ಹಿನ್ನೆಲೆಯಲ್ಲಿ ಜೂ.24 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಮುದ್ದೇಬಿಹಾಳ, ಕೋಳೂರು, ಹಿರೇಮುರಾಳ, ಹುಲ್ಲೂರ, ಢವಳಗಿ, ತಂಗಡಗಿ, ನಾಲತವಾಡ ಕೇಂದ್ರಗಳಿಂದ ಹೊರಹೋಗುವ ಎಲ್ಲಾ ಮಾರ್ಗಗಳಿಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.
ಗ್ರಾಹಕರು, ರೈತರು ಸಹಕರಿಸುವಂತೆ ಹೆಸ್ಕಾಂ ಎಇಇ ಆರ್. ಎನ್. ಹಾದಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.