ಮುದ್ದೇಬಿಹಾಳ : ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾಗಿ ಅಯ್ಯಪ್ಪಗೌಡ ರೆಡ್ಡಿ ಶುಕ್ರವಾರ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅವರನ್ನು ಗುತ್ತಿಗೆದಾರರ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶಗೌಡ ಪಾಟೀಲ ಇಂಗಳಗೇರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸಚಿನಗೌಡ ಪಾಟೀಲ, ಗುತ್ತಿಗೆದಾರ ಶ್ರೀಕಾಂತಗೌಡ ಪಾಟೀಲ, ಮುಖಂಡ ರುದ್ರಗೌಡ ಅಂಗಡಗೇರಿ ಸನ್ಮಾನಿಸಿದರು.
ಅಯ್ಯಪ್ಪಗೌಡ ರೆಡ್ಡಿ ಅವರು ಈ ಮುಂಚೆ ಶಿರಸಿ ಸಿದ್ದಾಪುರ,ಮುದ್ದೇಬಿಹಾಳ,ಆಲಮಟ್ಟಿ,ತಾಳಿಕೋಟಿ ಭಾಗದಲ್ಲಿ ವಿವಿಧ ಇಲಾಖೆಗಳಲ್ಲಿ ಸಹಾಯಕ ಅಭಿಯಂತರರಾಗಿ ಸೇವೆ ಸಲ್ಲಿಸಿದ್ದು ಅವರಿಗೆ ಸರ್ಕಾರ ಈ ತಿಂಗಳು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹುದ್ದೆಗೆ ಬಡ್ತಿ ನೀಡಿ ಪದೋನ್ನತಿಗೊಳಿಸಿತ್ತು.



