ಮುದ್ದೇಬಿಹಾಳ ತಾಲೂಕಿನ ಸಾಯಿ ಇಂಡೆನ್ ಗ್ಯಾಸ್ ಸರ್ವಿಸ್ ಎಜೆನ್ಸಿಯವರು ಗ್ಯಾಸ್ ವಿತರಣಾ ಸೇವೆಯಲ್ಲಿ ವಿಳಂಬ ಮಾಡುತ್ತಿರುವದು ಮತ್ತು ಗ್ರಾಹಕರಿಂದ ಮನೆಗೆ ಸಿಲಿಂಡರ್ ವಿತರಣೆ ಮಾಡಿದಾಗ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವದಲ್ಲದೆ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಆಕ್ರಮ ಮಾರಾಟ ಮಾಡುತಿದ್ದು ಸದರಿ ವಿತರಕರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಮಾರುತಿ ಹಿಪ್ಪರಗಿ ಆಗ್ರಹಿಸಿದ್ದಾರೆ.
ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕರಿಗೆ ದೂರು ನೀಡಿರುವ ಅವರು,ಮುದ್ದೇಬಿಹಾಳ ತಾಲೂಕಿನಲ್ಲಿ ಸರ್ಕಾರದವತಿಯಿಂದ ನೇಮಕವಾಗಿರುವ ಅಧಿಕೃತ ಸಿಲಿಂಡರ್ ವಿತರಕರಾದ ಶ್ರೀ ಸಾಯಿ ಇಂಡೆನ್ ಗ್ಯಾಸ್ ಸರ್ವಿಸ್ ಎಜೆನ್ಸಿಯವರು ಸಿಲಿಂಡರ್ ವಿತರಣೆಯಲ್ಲಿ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರಿಗೆ ತೋಂದರೆ ಕೋಡುತ್ತಿದ್ದಾರೆ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮನೆ,ಮನೆಗೆ ಗ್ಯಾಸ್ ವಿತರಿಸುವ ಸಂಧರ್ಭದಲ್ಲಿ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ. ಪ್ರತಿ ಸಿಲೆಂಡರ್‌ನಿAದ 20 ಹಾಗೂ ಕೆಲವು ಕಡೆ 50 ರೂಪಾಯಿ ಹೆಚ್ಚಿಗೆ ವಸೂಲಿ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
ಸಿಲಿಂಡರ್ ಬುಕ್ ಮಾಡಿ ಸಮಯ ಮೀರಿದರು ಸರಿಯಾದ ಸಮಯಕ್ಕೆ ಸಿಲಿಂಡರ್ ತಲುಪಿಸುವದಿಲ್ಲ ಈ ಕುರಿತು ಗ್ಯಾಸ್ ವಿತರಕರಿಗೆ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುವದಿಲ್ಲ. ಈ ಕುರಿತು ಮೌಖಿಕವಾಗಿ ಗ್ಯಾಸ್ ವಿತರಕರಿಗೆ ತಿಳಿಸಿದರು ಯಾವುದೆ ಪ್ರಯೋಜನವಾಗಿರುವದಿಲ್ಲ. ಸಿಲಿಂಡರ್‌ಗಳನ್ನು ಹೋಟೆಲ್ ಹಾಗೂ ಇನ್ನಿತರರಿಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಾರೆ. ವಾಣಿಜ್ಯ ಬಳಕೆ ಸಿಲೆಂಡರಗಳನ್ನAತು ಯಾವುದೆ ದಾಖಲೆಗಳಿಲ್ಲದೆ ಬೆಕಾ ಬಿಟ್ಟಿ ಕಾಳಸಂತೆಯಲ್ಲಿ ಮಾರಾಟ ಮತ್ತು ವಿತರಣೆ ಮಾಡುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಶ್ರೀಸಾಯಿ ಇಂಡೆನ್ ಗ್ಯಾಸ್ ಸರ್ವಿಸ್ ಎಜೆನ್ಸಿಯವರು ವಿತರಣೆ, ಬಿಲ್ಲಿಂಗ್, ಸ್ಟಾಕ್ ನಿರ್ವಹಣೆ ಗ್ರಾಹಕರಿಗೆ ಸೇವೆ ನೀಡುವಲ್ಲಿ ಮತ್ತು ಗ್ಯಾಸ್ ಸುರಕ್ಷಿತವಾಗಿ ವಿತರಣೆಯಾಗುವಲ್ಲಿ ಸುರಕ್ಷತಾ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಕಾರಣ ಈ ಕೂಡಲೆ ಈ ಕುರಿತು ತನಿಖೆ ನಡೆಸಿ ಸದರಿ ಗ್ಯಾಸ್ ಎಜೆನ್ಸಿ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು, ಒಂದು ವಾರದವಳಗೆ ಶ್ರೀಸಾಯಿ ಇಂಡೆನ್ ಗ್ಯಾಸ್ ಎಜೆನ್ಸಿ ವಿರುದ್ದ ತನಿಖೆ ಕೈಗೋಂಡು ಕ್ರಮ ಜರುಗಿಸದೆ ಇದ್ದಲ್ಲಿ ಮುದ್ದೇಬಿಹಾಳ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ತಿಳಿಸಿದ್ದಾರೆ.







