My name is gold.. I can't get you.. Huge rise in the price of gold!

ನನ್ನ ಹೆಸರು ಚಿನ್ನ.. ನಾನು ನಿನಗೆ ಸಿಗಲಾರೆ.. ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ!

ನನ್ನ ಹೆಸರು ಚಿನ್ನ.. ನಾನು ನಿನಗೆ ಸಿಗಲಾರೆ.. ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ!

ನವದೆಹಲಿ: ಮದುವೆ ಸೀಸನ್ ಹಿನ್ನೆಲೆಯಲ್ಲಿ ಆಭರಣ ತಯಾರಕರಿಂದ ಖರೀದಿ ಹೆಚ್ಚಾದ ಪರಿಣಾಮ ಬುಧವಾರವೂ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 700 ರೂಪಾಯಿ ಏರಿಕೆಯಾಗಿದೆ.

ಮಂಗಳವಾರ 10 ಗ್ರಾಂಗೆ 91,250 ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಬುಧವಾರ 91,950 ರೂಪಾಯಿ ಮಟ್ಟ ತಲುಪಿದೆ.
ಶೇ. 99.5ರಷ್ಟು ಶುದ್ಧತೆಯ ಚಿನ್ನ ಕೂಡ 700 ರೂ. ಏರಿಕೆಯಾಗಿ 10 ಗ್ರಾಂಗೆ 91,500 ರೂ.ಗಳ ದಾಖಲೆಯ ಮಟ್ಟ ತಲುಪಿತು.

ಬೆಳ್ಳಿಯ ದರ ಕೂಡ ಬುಧವಾರ 1000 ರೂ.ನಷ್ಟು ಏರಿಕೆಯಾಗಿದೆ. ಮಂಗಳವಾರ ಕೆಜಿಗೆ 1,02,500 ರೂ. ಇದ್ದದ್ದು ಬುಧವಾರ 1,03,500 ರೂ. ಆಗಿದೆ.

ಮಧ್ಯಪ್ರಾಚ್ಯದಲ್ಲಿ ಹೆಚ್ಚಾದ ಯುದ್ಧ ಭೀತಿ, ಅಮೆರಿಕದ ಆರ್ಥಿಕ ಹಿಂಜರಿತದ ಭಯವೇ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ದೂರ ಸರಿದು ಸುರಕ್ಷಿತವಾದ ಚಿನ್ನದಲ್ಲಿ ಹಣ ಹೂಡುವಂತೆ ಮಾಡಿದೆ. ಹಬ್ಬ ಮತ್ತು ಮದುವೆ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಿದ್ದರಿಂದ ಸ್ಥಳೀಯ ಆಭರಣ ತಯಾರಕರು ಕೂಡ ಚಿನ್ನದ ಖರೀದಿಗೆ ಮುಗಿಬಿದ್ದಿದ್ದಾರೆ.

ಸಾಗರೋತ್ತರ ಮಾರುಕಟ್ಟೆಯಲ್ಲಿನ ದೃಢ ಪ್ರವೃತ್ತಿ ಕೂಡ ಚಿನ್ನದ ಬೆಲೆ ಈ ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಲು ಕಾರಣವಾಗಿದೆ.

Latest News

ಡಿ.22 ರಂದು ದಿನದರ್ಶಿಕೆ ಲೋಕಾರ್ಪಣೆ

ಡಿ.22 ರಂದು ದಿನದರ್ಶಿಕೆ ಲೋಕಾರ್ಪಣೆ

ಮುದ್ದೇಬಿಹಾಳ : ಪ್ರಜಾನಾಡು ಡಿಜಿಟಲ್ ಸುದ್ದಿವಾಹಿನಿಯ ದಿನದರ್ಶಿಕೆ ಲೋಕಾರ್ಪಣೆ ಕಾರ್ಯಕ್ರಮ ಡಿ.22 ರಂದು ಸಂಜೆ

ಅಂಗವೈಕಲ್ಯ ತಡೆಗೆ ಪೊಲೀಯೋ ಲಸಿಕೆ ಹಾಕಿಸಿ

ಅಂಗವೈಕಲ್ಯ ತಡೆಗೆ ಪೊಲೀಯೋ ಲಸಿಕೆ ಹಾಕಿಸಿ

ಮುದ್ದೇಬಿಹಾಳ : ಮಕ್ಕಳು ಹುಟ್ಟಿನಿಂದಲೇ ಅಂಗವೈಕಲ್ಯತೆ ಹೊಂದುವುದನ್ನು ತಪ್ಪಿಸಲು ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ

T20 World Cup 2026 ಏಳು ಆಟಗಾರರು ಔಟ್!

T20 World Cup 2026 ಏಳು ಆಟಗಾರರು ಔಟ್!

T20 World Cup 2026: ಟಿ20 ವಿಶ್ವಕಪ್​​ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ

Good News: Gruha Lakshmi ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವೆ Lakshmi Hebbalkar ​​

Good News: Gruha Lakshmi ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವೆ Lakshmi Hebbalkar ​​

ಬೆಳಗಾವಿ: ಗೃಹಲಕ್ಷ್ಮೀ ಯೋಜನೆಯ (Gruha Lakshmi) ಹಣ ಬಿಡುಗಡೆ ವಿಚಾರವಾಗಿ ಇತ್ತೀಚೆಗೆ ಅಧಿವೇಶನದಲ್ಲಿ ಚರ್ಚೆಗೆ

Shocking News: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಪುಟಾಣಿ ದುರ್ಮರಣ

Shocking News: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಪುಟಾಣಿ ದುರ್ಮರಣ

ಮೈಸೂರು: ರಾಜ್ಯದಲ್ಲಿ ಘೋರ ದುರಂತ ಎನ್ನುವಂತೆ ಬಿಸಿನೀರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಧಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ಮೈಸೂರಲ್ಲಿ ಸಂಭವಿಸಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಜಯಗಿರಿ ಹಾಡಿಯಲ್ಲಿ ಈ ದುರಂತ ಸಂಭವಿಸಿದೆ. ರಮ್ಯಾ ಮತ್ತು ಬಸಪ್ಪ ಎಂಬುವರ ದಂಪತಿಗಳ ಪುತ್ರಿ ವೇದಾ(2) ಬಿಸಿ ನೀರಿನ ಪಾತ್ರೆಗೆ ಬಿದ್ದು ಸಾವನ್ನಪ್ಪಿದ್ದಾಳೆ. ತಾಯಿ ಸ್ನಾನ ಮಾಡಿಸೋದಕ್ಕೆ ಬಿಸಿ ನೀರು ತೋಡಿ, ತಣ್ಣೀರು ಬೆರೆಸೋದಕ್ಕೆ ತರಲು ಹೋಗಿದ್ದಾರೆ. ಈ ವೇಳೆ ವೇದಾ

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಮುದ್ದೇಬಿಹಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗರಸಂಗಿ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಂಗವಾಗಿ ಶನಿವಾರ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಲಾಯಿತು. ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, "ಪೋಲಿಯೋ ಮಾರಕ ರೋಗವಾಗಿದ್ದು, ಐದು ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಲಸಿಕೆಯಿಂದ ವಂಚಿತರಾಗದAತೆ ನೋಡಿಕೊಳ್ಳಬೇಕು ಎಂದರು. ಆರೋಗ್ಯ ಇಲಾಖೆ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಹಾಗೂ