ಮುದ್ದೇಬಿಹಾಳ : ಕಳೆದ ತಿಂಗಳು ತಾಲ್ಲೂಕಿನ ಶಿರೋಳ ಗ್ರಾಮದ ಹತ್ತಿರ ಇರುವ ಕಾಲುವೆಗೆ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಜೀವ ಕಳೆದುಕೊಂಡಿದ್ದ ಯುವತಿ ಹಾಗೂ ಅವಳನ್ನು ಬದುಕಿಸಲು ಹೋಗಿ ಮೃತಪಟ್ಟ ಒಂದೇ ಕುಟುಂಬದ ಮೂವರ ಕುಟುಂಬಕ್ಕೆ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ವಾಗ್ದಾನ ಮಾಡಿದಂತೆ ಒಂದು ಲಕ್ಷ ರೂ.ಗಳನ್ನು ಅವರ ಪುತ್ರ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ ಸಂತ್ರಸ್ಥ ಕುಟುಂಬದವರಿಗೆ ಹಸ್ತಾಂತರಿಸಿದರು.
ನಡಹಳ್ಳಿ ಕುಟುಂಬ ಸದಾ ನೊಂದವರು,ಸAಕಷ್ಟದಲ್ಲಿರುವವರ ಜೊತೆಗೆ ಸದಾ ಇರಲಿದೆ ಎಂದು ಹೇಳಿದರು.ಸಂತ್ರಸ್ಥ ಕುಟುಂಬದ ಚೆನ್ನಪ್ಪ ಕೊಣ್ಣೂರ,ಹನಮಂತ ಕೊಣ್ಣೂರ , ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ್ ಪಂಪಣ್ಣವರ,ಪ್ರಧಾನ ಕಾರ್ಯದರ್ಶಿ ಸಂಜು ಬಾಗೇವಾಡಿ,ಮುತ್ತು ಹುಣಶ್ಯಾಳ,ಶ್ರೀಶೈಲ ದೊಡಮನಿ,ರಾಜಶೇಖರ ಹೊಳಿ , ಭೀಮಣ್ಣ ದಾಸರ ಸೇರಿದಂತೆ ಹಲವರು ಇದ್ದರು.



