
ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟ ಗುಡ್ಡದ ಬಳಿ ಇರುವ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.99.46 ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ 1120 ವಿದ್ಯಾರ್ಥಿಗಳಲ್ಲಿ 1114 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 658 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ಪಿಸಿಎಂಬಿ ವಿಭಾಗದಲ್ಲಿ 501 ವಿದ್ಯಾರ್ಥಿಗಳು ಶೇ.90ಕ್ಕೂ ಅಧಿಕ ಅಂಕ ಪಡೆದಿದ್ದಾರೆ. ವಜ್ರಾ ಆಚಾರಿ ಶೇ.97.5 ಪ್ರಥಮ, ಸಾನಿಕಾ ಘೂಳಣ್ಣವರ ಶೇ.97.16 ದ್ವಿತೀಯ, ಸಂಪತ್ತಕುಮಾರ ಹುಗ್ಗಿ, ಸ್ನೇಹಾ ಅಮಟಿ, ಯಶೋಧಾ ಸೊರಕೊಪ್ಪ ಶೇ.96.83 ರಷ್ಟು ಅಂಕ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ, ಮುಖ್ಯಶಿಕ್ಷಕ ರೇವಣಸಿದ್ದ ಚಲವಾದಿ(ಮುರಾಳ), ನಿರ್ದೇಶಕರಾದ ದರ್ಶನಗೌಡ ಪಾಟೀಲ, ವಿಜಯಕುಮಾರ ಪಾಟೀಲ ಅಭಿನಂದಿಸಿದ್ದಾರೆ.