ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.100ರಷ್ಟಾಗಿದೆ.
ಪರೀಕ್ಷೆಗೆ ಕೂತಿದ್ದ 400 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಸುಮಂತ ಕುಪ್ಪಸ್ತ ಹಾಗೂ ಅಂಕಿತಾ ಬಡಿಗೇರ 600ಕ್ಕೆ 586 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿಜಯ ರಾಠೋಡ 585 ಅಂಕಗಳನ್ನು ಪಡೆದು ದ್ವಿತೀಯ ಮತ್ತು ಅಪ್ಸಾನಾ ನದಾಫ್ ಹಾಗೂ ಕುಮಾರಿ ಸೃಷ್ಟಿ ನಾಡಗೌಡರ 583 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಭೌತಶಾಸ್ತ್ರದಲ್ಲಿ 17 , ಗಣಿತದಲ್ಲಿ 67, ಜೀವಶಾಸ್ತ್ರದಲ್ಲಿ 24 ವಿದ್ಯಾರ್ಥಿಗಳು ಶೇ.100ರಷ್ಟು ಅಂಕ ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ,ಆಡಳಿತಾಧಿಕಾರಿ ಪ್ರಜ್ವಲ್ ಮಠ,ಪ್ರಾಚಾರ್ಯ ಇರ್ಫಾನ್ ಬಾಗವಾನ,ಮಾರ್ಗದರ್ಶಕ ಎಲ್.ಎಚ್.ನದಾಫ ಹಾಗೂ ಸಮಸ್ತ ಉಪನ್ಯಾಸಕವೃಂದ,ಸಿಬ್ಬAದಿ ಅಭಿನಂದಿಸಿದ್ದಾರೆ.







