ಅಭ್ಯುದಯ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ; ದ್ವಿತೀಯ ಪಿಯುಸಿ ಫಲಿತಾಂಶ : ಮುದ್ದೇಬಿಹಾಳಕ್ಕೆ ಆಸೀಫಾ ಪ್ರಥಮ

ಅಭ್ಯುದಯ ಪಿಯು ಸೈನ್ಸ್ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ; ದ್ವಿತೀಯ ಪಿಯುಸಿ ಫಲಿತಾಂಶ : ಮುದ್ದೇಬಿಹಾಳಕ್ಕೆ ಆಸೀಫಾ ಪ್ರಥಮ

ಮುದ್ದೇಬಿಹಾಳ : ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.100ರಷ್ಟಾಗಿದೆ.
ಪರೀಕ್ಷೆಗೆ ಕೂತಿದ್ದ 229 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅದರಲ್ಲಿ ಆಸೀಫಾ ಕಾಶೀಮ್ ಖತೀಬ ಶೇ.98ರಷ್ಟು ಅಂಕ ಪಡೆದು ಮುದ್ದೇಬಿಹಾಳ ನಗರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.ಇನ್ನುಳಿದAತೆ ಶೇ.97.83 ಅಂಕ ಪಡೆದ ಲಕ್ಷಿö್ಮÃ ಉಂಡಿ ದ್ವಿತೀಯ,ಶೇ.97.33 ಅಂಕ ಪಡೆದ ಸುಷ್ಮಿತಾ ದನ್ನೂರ ತೃತೀಯ ಸ್ಥಾನ ಪಡೆದುಕೊಂಡಿದ್ದಾಳೆ.ಉತ್ತೀರ್ಣರಾದ 229ರಲ್ಲಿ ಅದರಲ್ಲಿ 142 ಡಿಸ್ಟಿಂಕ್ಷನ್,76 ಪ್ರಥಮ,11 ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಗಣಿತದಲ್ಲಿ 54,ಬಯೋಲಜಿ 48,ಫಿಸಿಕ್ಸ್ 32,ಕೆಮಿಸ್ಟಿç 6,ಕನ್ನಡದಲ್ಲಿ 8 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದುಕೊಂಡಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ,ಆಡಳಿತಾಧಿಕಾರಿ ಕಿರಣ ಮದರಿ,ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರ,ಪ್ರಾಚಾರ್ಯ ಎಂ.ಎA.ಧನ್ನೂರ,ಮಾರ್ಗದರ್ಶಕರಾದ ರವಿ ಜಗಲಿ,ಬಸವರಾಜ ಗೂಡಲಮನಿ ಹಾಗೂ ಉಪನ್ಯಾಸಕರು,ಸಿಬ್ಬಂದಿ ಮೊದಲಾದವರು ಅಭಿನಂದಿಸಿದ್ದಾರೆ.


ಫಲಿತಾಂಶ ಖುಷಿ ತಂದಿದೆ :
ಪ್ರತಿಭಾವಂತರು ಶಿಕ್ಷಣದಿಂದ ವಂಚಿತರಾಗಬಾರದು-ಎಂ.ಎನ್.ಮದರಿ

ಮುದ್ದೇಬಿಹಾಳ : ಗ್ರಾಮೀಣ ಭಾಗದಲ್ಲಿರುವ ಬಡ ಪ್ರತಿಭಾವಂತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಾಲ್ಲೂಕಿನ ಮೂರು ಕಡೆ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿದ್ದೇವೆ.ಇಂದು ಮಕ್ಕಳು ಉತ್ತಮ ಫಲಿತಾಂಶ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.

ಪಟ್ಟಣದ ಅಭ್ಯುದಯ ಪಿಯು ಸೈನ್ಸ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಿಯು ಟಾಪರ್‌ಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.2016ರಲ್ಲಿ ಕಾಲೇಜಿಗೆ ಅನುಮತಿ ಪಡೆದುಕೊಂಡಿದ್ದೇವು.2017ರಲ್ಲಿ ಶೇ.60 ರಷ್ಟು ಮಾತ್ರ ಫಲಿತಾಂಶ ಕಾಲೇಜು ದಾಖಲಿಸಿತ್ತು.ಆದರೆ ಮುಂದಿನ ವರ್ಷಗಳಲ್ಲಿ ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದು ಜನರ ಪ್ರೀತಿಗೆ ಪಾತ್ರವಾಗಿದೆ.ಶೇ.98 ರಷ್ಟು ಅಂಕ ಪಡೆದು ಆಸೀಫಾ ಖತೀಬ್ ಮುದ್ದೇಬಿಹಾಳ ನಗರಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.ಅವರ ಪಾಲಕರು ಕೂಲಿಕಾರ್ಮಿಕರಿದ್ದು ಅವರ ಸಾಧನೆ ಹೆಮ್ಮೆ ತರಿಸಿದೆ ಎಂದು ಹೇಳಿದರು.

ಪಿಯುಸಿ ಟಾಪರ್ ಆಸೀಫಾ ಖಾತೀಬ್ ಮಾತನಾಡಿ, ಬೆಳಗಿನ ಜಾವವೇ ನಾನು ಓದುತ್ತಿದ್ದೆ.ತಂದೆ ತಾಯಿ ಬೆಂಬಲದಿAದ ಹಾಗೂ ಸಂಸ್ಥೆಯ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.

ಇನ್ನೋರ್ವ ವಿದ್ಯಾರ್ಥಿನಿ ಸುಷ್ಮಿತಾ ದನ್ನೂರ ಮಾತನಾಡಿ, ಹಾಸ್ಟೆಲ್‌ನಲ್ಲಿದ್ದು ಓದಿ ಶೇ.97.33ರಷ್ಟು ಅಂಕ ಪಡೆದುಕೊಂಡಿದ್ದೇನೆ.ಇದಕ್ಕೆ ನನ್ನ ಬಡತನ ಎಂದಿಗೂ ಅಡ್ಡಿಯಾಗಲಿಲ್ಲ.ಓದಬೇಕು ಎಂಬ ಛಲ ಈ ಸಾಧನೆ ಮಾಡಲು ಕಾರಣವಾಗಿದೆ ಎಂದು ತಿಳಿಸಿದರು.

ಆಡಳಿತಾಧಿಕಾರಿ ಕಿರಣ್ ಮದರಿ, ಕಾಲೇಜಿನ ಪ್ರಾಚಾರ್ಯ ಎಂ.ಎಂ.ಧನ್ನೂರ,ಪಾಲಕ ಪ್ರತಿನಿಧಿ ಕಾಶೀಮ ಖತೀಬ್ ಮಾತನಾಡಿದರು. ಮಾರ್ಗದರ್ಶಕ ರವಿ ಜಗಲಿ,ಬಸವರಾಜ ಗೂಡ್ಲಮನಿ, ಲೆಕ್ಕಾಧಿಕಾರಿ ಬಸವರಾಜ ಬಿಜ್ಜೂರು,ಮುಖ್ಯಗುರು ವಿರೇಶ ಹುಲಿಕೇರಿ, ಪ್ರೊ.ಗುರು,ಪ್ರಶಾಂತ ಬಿರಾದಾರ, ನಾಗರಾಜ,ನವೀನ,ರಂಗಸ್ವಾಮಿ ಇದ್ದರು.ವಿದ್ಯಾರ್ಥಿಗಳಿಗೆ ಇದೇ ವೇಳೆಸಂಸ್ಥೆಯಿoದ ಸನ್ಮಾನಿಸಿ ಸಿಹಿ ನೀಡಿ ಗೌರವಿಸಲಾಯಿತು.

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,