ಮುದ್ದೇಬಿಹಾಳ : ನ್ಯಾ ನಾಗಮೋಹನ್ ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಛಲವಾದಿ (ಹೊಲಯ ) ಸಮುದಾಯಕ್ಕೆ ಅನ್ಯಾಯ ಮಾಡಿದೆ, ಸರಿಯಾದ ದತ್ತಂಶ ಸಂಗ್ರಹಿಸದೆ ಹಿಂದಿನ ವರದಿಯನ್ನೇ ಕಾಫಿ ಪೇಸ್ಟ್ ಮಾಡಲಾಗಿದೆ ಎಂದು ಛಲವಾದಿ ಸಮಾಜದ ರಾಜ್ಯ ಸಮಿತಿ ಸದಸ್ಯ ಮಂಜುನಾಥ್ ಛಲವಾದಿ(ಬಸರಕೋಡ) ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಛಲವಾದಿ ಸಮಾಜಕ್ಕೆ ಸೇರಿದ ಅನೇಕ ಉಪಜಾತಿಗಳನ್ನು ವಿಂಗಡಿಸಿ, ಜನಸಂಖ್ಯೆ ಕಡಿಮೆ ಆಗುವಂತೆ ಮಾಡಿದೆ, ಬಲಗೈ ಸಮುದಾಯದ ಛಲವಾದಿ, ಹೊಲಯ, ಹೊಲರ್, ಪರಯ್ಯ, ಚಾಂಡಲ, ವಿವಿಧ ಉಪಜಾತಿಗಳ್ಳನ್ನು ವಿಂಗಡಿಸಿ ಸಾಮಾಜಿಕ ಅನ್ಯಾಯ ಮಾಡಲಾಗಿದೆ, ಶತಮಾನದಿಂದ ಶೋಷಣೆಗೆ ಒಳಗಾದ ಸಮಾಜವನ್ನು ರಾಜಕೀಯವಾಗಿ ಮುಗಿಸುವ ಕೆಲಸ ಇದಾಗಿದೆ, ವರದಿಯಲ್ಲಿನ ಲೋಪಗಳನ್ನು ಸರಿಪಡಿಸಿ ಜಾರಿ ಮಾಡಬೇಕು ಇಲ್ಲವಾದರೆ ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕ ಕೇಂದ್ರಗಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಆದಿ ಕರ್ನಾಟಕ, ಆದಿ ದ್ರಾವಿಡ ಉಪಜಾತಿಗಳಲ್ಲಿ ಶೇಕಡಾ 85 ಕ್ಕೂ ಹೆಚ್ಚು ಹೊಲೆಯ ಜಾತಿಗೆ ಸೇರಿದ ಜನರಿದ್ದು ಅವರನ್ನು ವಿಂಗಡಣೆ ಮಾಡಿ ಸಾಮಾಜಿಕ ನ್ಯಾಯ ದೊರಕದಂತೆ ಮಾಡಲಾಗಿದೆ, ಛಲವಾದಿ, ಹೊಲಯ ಎರಡನ್ನು ಸೇರಿಸಿದರೆ ಕರ್ನಾಟಕದಲ್ಲಿ ಬಲಗೈ ಸಮುದಾಯದ ಜನಸಂಖ್ಯೆ ಹೆಚ್ಚಾಗಲಿದೆ, ಸಾಮಾಜಿಕ ನ್ಯಾಯದ ಸಲುವಾಗಿ ಬಲಗೈ ಸಮುದಾಯದ ನಿಖರ ಸಂಖ್ಯೆ ನಮೂದಿಸಿ 7% ಒಳ ಮೀಸಲಾತಿ ಕಲ್ಪಿಸಬೇಕು ಎಂದು ಅಗ್ರಹಿಸಿದ್ದಾರೆ.