ಮುದ್ದೇಬಿಹಾಳ : ಗೋವಾ ರಾಜ್ಯದಲ್ಲಿ ನಡೆಯುತ್ತಿರುವ ಯೂಥ್ ಗೇಮ್ಸ್ ಇಂಡಿಯಾದಿoದ ರಾಷ್ಟ್ರಮಟ್ಟದ 10 ವರ್ಷದೊಳಗಿನ ಬಾಲಕರಿಗಾಗಿ ಹಮ್ಮಿಕೊಂಡಿದ್ದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ತಾಲ್ಲೂಕಿನ ಕುಂಟೋಜಿ ರಸ್ತೆಯಲ್ಲಿರುವ ಬಸವ ಇಂಟರ್‌ನ್ಯಾಶನಲ್ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿ ಮೊಹ್ಮದ್‌ಜಿಶಾನ್ ರಿಸಾಲ್ದಾರ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಮೊಹ್ಮದ್‌ಜಿಶಾನ್ 15 ಸೆಕೆಂಡ್ ನಲ್ಲಿ ನಿಗದಿ 100 ಮೀಟರ್ ಓಟವನ್ನು ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆದಿಕೊಂಡು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.ಏಪ್ರೀಲ್ ಮೇ ತಿಂಗಳಲ್ಲಿ ನೇಪಾಳದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಜೀಶಾನ್ ಪ್ರತಿನಿಧಿಸಲಿದ್ದಾರೆ ಎಂದು ಶಾಲೆಯ ಪ್ರಾಚಾರ್ಯೆ ಪ್ರಭಾ ಚಿನಿವಾರ ತಿಳಿಸಿದ್ದಾರೆ. ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದಿರುವ ಮೊಹ್ಮದ್‌ಜೀಶಾನ್ ಪತ್ರಕರ್ತ ಸೂರಜ್ ರಿಸಾಲ್ದಾರ್ ಅವರ ಪುತ್ರ.
ಅಭಿನಂದನೆ : ಯೂಥ್ ಗೇಮ್ಸ್ ಕೌನ್ಸಿಲ್ ಇಂಡಿಯಾ ಆಯೋಜಿಸಿರುವ ಈ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿರುವ ಮೊಹ್ಮದಜಿಶಾನ್ ಸಾಧನೆಗೆ ಕರ್ನಾಟಕ ಮುಸ್ಲಿಂ ಕೌನ್ಸಿಲ್, ಬಸವ ಇಂಟರ್‌ನ್ಯಾಶನಲ್ ಶಾಲೆಯ ಚೇರಮನ್ ಶಿವಕುಮಾರ ಹರ್ಲಾಪುರ ಹಾಗೂ ಮುದ್ದೇಬಿಹಾಳದ ಜನತೆ,ರಿಸಾಲ್ದಾರ್ ಕುಟುಂಬದವರು ಅಭಿನಂದಿಸಿದ್ದಾರೆ.







