‘ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಅಪ್ಪಂದಿರ,ಅಜ್ಜoದಿರ ಫೋಟೋ ಬೇಡ’

‘ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಅಪ್ಪಂದಿರ,ಅಜ್ಜoದಿರ ಫೋಟೋ ಬೇಡ’

ಮುದ್ದೇಬಿಹಾಳ : ಸೈನ್ಯಕ್ಕೆ ಸೇರುವವರು ಬಡವರ ಮಕ್ಕಳು ಎಂದು ಕೆಲವು ರಾಜಕಾರಣಿಗಳು ಕೆಲವೆಡೆ ಹೇಳಿಕೆ ಕೊಟ್ಟಿದ್ದರು.ಆದರೆ ನಿಜವಾಗಿಯೂ ಈ ದೇಶವನ್ನು ಕಾಯುವವರು ರೈತರ ಮಕ್ಕಳೇ ಹೊರತು ಸಿರಿವಂತರ ಮಕ್ಕಳಲ್ಲ.ದೇಶದಲ್ಲಿ ಬದಲಾವಣೆ ಆಗಿರುವುದು ಬಡವರ ಮಕ್ಕಳಿಂದ ಆಗಿದೆಯೇ ಹೊರತು ಸಿರಿವಂತರು,ದೊಡ್ಡವರ ಮಕ್ಕಳಿಂದಲ್ಲ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ಸೈನಿಕ ಮೈದಾನದಲ್ಲಿ ಗುರುವಾರ ಸಂಜೆ ನೌಕಾಸೇನೆಯ ನಿವೃತ್ತ ಯೋಧ ಸತೀಶ ನಾಯಕ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವವರು ಸೈನಿಕರು ಮಾತ್ರ.ಅವರು ತೊಟ್ಟಿರುವ ಸಮವಸ್ತç ಶೌರ್ಯ,ತ್ಯಾಗದ ಗುರುತು ಆಗಿದೆ. ಸರ್ಕಾರಿ ಕಚೇರಿಗಳಲ್ಲಿ ರಾಜಕಾರಣಿಗಳ ಅಪ್ಪಂದಿರ,ಅಜ್ಜoದಿರ ಫೋಟೋಗಳನ್ನು ಹಾಕುವ ಬದಲಾಗಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರಸೈನಿಕರ ಫೋಟೋಗಳನ್ನು ಶಾಲೆಗಳಲ್ಲಿ,ಕಚೇರಿಗಳಲ್ಲಿ ಹಾಕುವ ಪದ್ದತಿ ರೂಢಿಯಲ್ಲಿ ಬರಬೇಕು.ಸರ್ಕಾರ ಅಂತಹ ನಿಯಮ ಜಾರಿಗೆ ತರಬೇಕು.ಮುದ್ದೇಬಿಹಾಳದ ಅಂಬೇಡ್ಕರ್ ವೃತ್ತದಲ್ಲಿ 200 ಅಡಿ ಎತ್ತರದ ರಾಷ್ಟçಧ್ವಜದ ಸ್ತಂಭವನ್ನು ಸ್ಥಾಪಿಸಲು ಉದ್ಧೇಶವಿದ್ದು ಅಲ್ಲಿ ರಾಷ್ಟçಧ್ವಜ ನಿತ್ಯವೂ ಹಾರಾಡುವಂತೆ ನಾವೆಲ್ಲ ಕೈಜೋಡಿಸಬೇಕು.ಇದಕ್ಕೆ ಜನಪ್ರತಿನಿಧಿಗಳ ಸಹಕಾರವೂ ಅವಶ್ಯವಿದೆ ಎಂದು ಹೇಳಿದರು.

ಎಸ್.ಎಸ್.ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ರವಿ ನಾಯಕ ಮಾತನಾಡಿ, ದೇಶದಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಕಾರಣ ಈ ದೇಶದ ಯೋಧರು ಜೀವ ಒತ್ತೆ ಇಟ್ಟು ಕಾಯುತ್ತಿರುವ ಕಾರಣ ದೇಶದಲ್ಲಿ ಸುರಕ್ಷತೆಯಿಂದ ಇದ್ದೇವೆ.ಸೈನ್ಯದಲ್ಲಿ ಜಾತಿ,ಸಮುದಾಯ ಎಂಬುದಿಲ್ಲ. ನಿವೃತ್ತಿಗೊಂಡು ತವರಿಗೆ ಮರಳುವ ಸೈನಿಕರನ್ನು ಸಮಾಜದಲ್ಲಿ ಎಲ್ಲರೂ ಒಗ್ಗೂಡಿ ಸಾರ್ವತ್ರಿಕವಾಗಿ ಗೌರವಿಸುವ ಕಾರ್ಯ ಆಗಬೇಕು ಎಂದರು.

ನೌಕಾಸೇನಾ ನಿವೃತ್ತ ಯೋಧ ಸತೀಶ ನಾಯಕ ಮಾತನಾಡಿ, ಸೈನಿಕ ದೇಶ ಸೇವೆ ಒಬ್ಬನೇ ಮಾಡುವುದಿಲ್ಲ.ಆತನ ಹಿಂದೆ ಊರು,ಕುಟುಂಬ, ಸಮಾಜವಿರುತ್ತದೆ.ನಿಮ್ಮ ಬೆಂಬಲ ಇಲ್ಲದೇ ಸೇನೆಯಲ್ಲಿ ಸೇವೆ ಸಲ್ಲಿಸಲು ಆಗುತ್ತಿರಲಿಲ್ಲ.ನೌಕಾಸೇನೆಯಲ್ಲಿ ಸೇವೆ ಸಲ್ಲಿಸುವವರು ಎಂದರೆ ಕೇವಲ ಯೂನಿಫಾರಂ ಧರಿಸುವುದಲ್ಲ.ಪ್ರಮಾಣಿಕ,ಶಿಸ್ತು,ದಕ್ಷತೆಯಿಂದ ಸೇವೆ ಸಲ್ಲಿಸಬೇಕು.ದೇಶಕ್ಕೆ ಸೇವೆ ಸಲ್ಲಿಸುವುದು ಜೀವನವನ್ನು ರೂಪಿಸುವ ಪವಿತ್ರ ಮಾರ್ಗವಾಗಿದೆ.ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಬಂದರೆ ಅದನ್ನು ಖುಷಿಯಿಂದ ಸ್ವೀಕರಿಸಿ ಎಂದು ಹೇಳಿದರು.

ತಹಶೀಲ್ದಾರ್ ಕೀರ್ತಿ ಚಾಲಕ್, ಜಿಪಂ ಮಾಜಿ ಸದಸ್ಯ ಗಂಗಾಧರರಾವ ನಾಡಗೌಡ,ಬಿಎಸ್‌ಎಫ್‌ಗೆ ಆಯ್ಕೆಯಾದ ಹುಲ್ಲೂರಿನ ಕಾಶೀಬಾಯಿ ಚಲವಾದಿ ಮಾತನಾಡಿದರು.

ಮುದ್ದೇಬಿಹಾಳ-ಹುನಗುಂದ ಹೊಸಮಠ-ಗಚ್ಚಿನಮಠದ ಅಮರೇಶ್ವರ ದೇವರು ಸಾನಿಧ್ಯ ವಹಿಸಿದ್ದರು.ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಪರಶುರಾಮ ವಡ್ಡರ ಅಧ್ಯಕ್ಷತೆ ವಹಿಸಿದ್ದರು.ಕಾರ್ಗಿಲ್ ವೀರಯೋಧರ ಸ್ಮಾರಕ ನಿರ್ಮಾಣ ಸಮಿತಿ ಅಧ್ಯಕ್ಷ ಶ್ರೀಕಾಂತ ಹಿರೇಮಠ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾನಪ್ಪ ನಾಯಕ,ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಆಯ್.ಹಿರೇಮಠ,,ಪಿಎಸ್‌ಐ ಸಂಜಯ ತಿಪರೆಡ್ಡಿ,ಇಲಕಲ್‌ನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಜಯ ದಳವಾಯಿ, ಈರಪ್ಪ ನರಗುಂದ, ಬಿಜೆಪಿ ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ,ಮುಖoಡ ಸೋಮನಗೌಡ ಪಾಟೀಲ ನಡಹಳ್ಳಿ, ಮಾಜಿ ಸೈನಿಕ ರೇವಣೆಪ್ಪ ಹರಿಜನ,ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ, ಬಿಜೆಪಿ ನಾಯಕಿ ಗೌರಮ್ಮ ಹುನಗುಂದ ಮೊದಲಾದವರು ಇದ್ದರು.ಟಿ.ಡಿ.ಲಮಾಣಿ ಹಾಗೂ ಜಿ.ಎಚ್.ಚವ್ಹಾಣ ಕಾರ್ಯಕ್ರಮ ನಿರೂಪಿಸಿದರು.ತಾಲ್ಲೂಕು ಆಡಳಿತದಿಂದ ತಹಶೀಲ್ದಾರ್ ಕೀರ್ತಿ ಚಾಲಕ , ಗ್ರಾಮ ಆಡಳಿತ ಅಧಿಕಾರಿ ಮನೋಜ ರಾಠೋಡ ನಿವೃತ್ತ ಯೋಧ ಸತೀಶ ನಾಯಕ ಅವರಿಗೆ ಸನ್ಮಾನಿಸಿದರು.ಬಿಎಸ್‌ಎಫ್‌ಗೆ ಆಯ್ಕೆಗೊಂಡ ತಾಲ್ಲೂಕಿನ ಸಿದ್ದಾಪೂರ ಪಿ.ಟಿ ಗ್ರಾಮದ ಆಯೇಷಾ ವಾಲೀಕಾರ ಹಾಗೂ ಹುಲ್ಲೂರಿನ ಕಾಶೀಬಾಯಿ ಚಲವಾದಿ ಅವರನ್ನು ಸನ್ಮಾನಿಸಲಾಯಿತು.

Latest News

ಫೆ.22 ರಂದು ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅವಾರ್ಡ್ ಎಕ್ಸಾಂ

ಫೆ.22 ರಂದು ಆಕ್ಸಫರ್ಡ್ ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅವಾರ್ಡ್ ಎಕ್ಸಾಂ

ಮುದ್ದೇಬಿಹಾಳ : ಪಟ್ಟಣದ ಬಿದರಕುಂದಿ ರಸ್ತೆಯಲ್ಲಿರುವ ಗುರಡ್ಡಿ ಪೆಟ್ರೋಲ್ ಪಂಪ್ ಹತ್ತಿರದಲ್ಲಿರುವ ಆಕ್ಸಫರ್ಡ್ಸ್ ಪಾಟೀಲ್ಸ್

ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ:                                ತವರಿಗೆ ಮರಳಿದ ಸತೀಶ ನಾಯ್ಕಗೆ ಅದ್ದೂರಿ ಸ್ವಾಗತ

ನೌಕಾಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ: ತವರಿಗೆ ಮರಳಿದ ಸತೀಶ ನಾಯ್ಕಗೆ ಅದ್ದೂರಿ ಸ್ವಾಗತ

ಮುದ್ದೇಬಿಹಾಳ : ಭಾರತೀಯ ನೌಕಾಸೇನೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡು ಗುರುವಾರ

50 ಲಕ್ಷ ರೂ.ಸ್ಕಾಲರ್‌ಶಿಪ್ ಗೆಲ್ಲುವ ಅವಕಾಶ:                       ಫೆ.22 ರಂದು ಬಿಎಎಸ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ

50 ಲಕ್ಷ ರೂ.ಸ್ಕಾಲರ್‌ಶಿಪ್ ಗೆಲ್ಲುವ ಅವಕಾಶ: ಫೆ.22 ರಂದು ಬಿಎಎಸ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ

ಮುದ್ದೇಬಿಹಾಳ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಫೆ.22 ರಂದು ಬಿಎಎಸ್

ಜೆಇಇ-1 ಪರೀಕ್ಷೆ ಫಲಿತಾಂಶ :                                  ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಜಿಲ್ಲೆಯ ಟಾಪ್-3 ಸ್ಥಾನ

ಜೆಇಇ-1 ಪರೀಕ್ಷೆ ಫಲಿತಾಂಶ : ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ ಜಿಲ್ಲೆಯ ಟಾಪ್-3 ಸ್ಥಾನ

ಮುದ್ದೇಬಿಹಾಳ : ಜೆಇಇ ಸೆಷನ್-1 ರ ಪರೀಕ್ಷೆಯಲ್ಲಿ ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು

‘ರಾಷ್ಟ್ರದ್ವಜ ಹಿಡಿದು ಶತ್ರು ಸಂಹಾರ ಮಾಡ್ತೀನಿ,ಇಲ್ಲಂದ್ರೆ ಮೈಮೇಲೆ ಅದೇ ಧ್ವಜ ಹೊತ್ತು ಬರ‍್ತೀನಿ’

‘ರಾಷ್ಟ್ರದ್ವಜ ಹಿಡಿದು ಶತ್ರು ಸಂಹಾರ ಮಾಡ್ತೀನಿ,ಇಲ್ಲಂದ್ರೆ ಮೈಮೇಲೆ ಅದೇ ಧ್ವಜ ಹೊತ್ತು ಬರ‍್ತೀನಿ’

ಮುದ್ದೇಬಿಹಾಳ : ನಾನು ಸೈನ್ಯಕ್ಕೆ ಸೇರುತ್ತಿದ್ದಂತೆ ನನ್ನ ತಾಯಿ ‘ನೀ ಹೆಣ್ಣು ಮಗಳಾಗಿ ಗಡಿ ಕಾಯೂದ ಹೆಂಗ ಮಾಡ್ತಿ ?’ ಅಂದಾಗ ನಾನು “ಅವ್ವಾ ನೀ ತಲಿಕೆಡಿಸ್ಕೋ ಬ್ಯಾಡ ಬೇ, ನಾ ಅಲ್ಲಿ ಹೋಗಿ ನಮ್ಮ ದೇಶಕ್ಕೆ ಕಂಟಕರಾದವ್ರನ್ನ ಸಂಹಾರ ಮಾಡ್ತೀನಿ ಇಲ್ಲ ಇಲ್ಲಾಂದ್ರ ಅದೇ ಧ್ವಜ ಮೈಮ್ಯಾಲೆ ಹೊತ್ಕೊಂಡು ಬರ್ತಿನಿ” ಎಂದು ಬಿ.ಎಸ್.ಎಫ್‌ಗೆ ಆಯ್ಕೆಯಾಗಿರುವ ತಾಲ್ಲೂಕಿನ ಕಾಶೀಬಾಯಿ ಚಲವಾದಿ ಹೇಳಿದರು. ಪಟ್ಟಣದ ಕಾರ್ಗಿಲ್ ವೀರಯೋಧರ ಸ್ಮಾರಕ ಸಮಿತಿಯಿಂದ ಈಚೇಗೆ

ರೈತರ ಮಕ್ಕಳು ವೈದ್ಯರಾಗಬೇಕು-ಇದು ನನ್ನ ಕನಸು-ಎಂ.ಎಸ್.ಪಾಟೀಲ

ರೈತರ ಮಕ್ಕಳು ವೈದ್ಯರಾಗಬೇಕು-ಇದು ನನ್ನ ಕನಸು-ಎಂ.ಎಸ್.ಪಾಟೀಲ

ಮುದ್ದೇಬಿಹಾಳ : ನನ್ನ ಕನಸು ಸೈನ್ಸ್ ಕಾಲೇಜು ಆರಂಭಿಸಬೇಕು ಎಂಬುದಿತ್ತು.ದುಡ್ಡು ಮಾಡುವುದಕ್ಕಾಗಿ ಸೈನ್ಸ್ ಕಾಲೇಜು ಮಾಡಿಲ್ಲ.ರಾಯಚೂರು,ವಿಜಯಪುರ,ಬಾಗಲಕೋಟೆ,ಕೊಪ್ಪಳ ಜಿಲ್ಲೆಗಳಂತಹ ಹಿಂದುಳಿದ ಜಿಲ್ಲೆಗಳ ರೈತಾಪಿ ವರ್ಗದ ಮಕ್ಕಳನ್ನು ಮೇಲೆ ತರಬೇಕು ಎಂಬ ಉದ್ದೇಶದಿಂದ ಸೈನ್ಸ್ ಕಾಲೇಜು ಆರಂಭಿಸಿದ್ದೇವೆ ಎಂದು ನಾಗರಬೆಟ್ಟ ಆಕ್ಸಫರ್ಡ್ ಸಮೂಹ ಶಿಕ್ಷಣ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ ಹೇಳಿದರು. ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಆಕ್ಸಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಆಕ್ಸಫರ್ಡ್ ಕಲಾಸಂಭ್ರಮ-2026 ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು