NREGA commits to health of laborers: P. S. Kasanakki

ಕೂಲಿಕಾರರ ಅರೋಗ್ಯವೃದ್ಧಿಗೆ ನರೇಗಾ ಬದ್ಧ: ಪಿ. ಎಸ್. ಕಸನಕ್ಕಿ

ಕೂಲಿಕಾರರ ಅರೋಗ್ಯವೃದ್ಧಿಗೆ ನರೇಗಾ ಬದ್ಧ: ಪಿ. ಎಸ್. ಕಸನಕ್ಕಿ

ಮುದ್ದೇಬಿಹಾಳ : ಕೂಲಿಕಾರರ ಅರೋಗ್ಯ ವೃದ್ಧಿಗೆ ನರೇಗಾ ಯೋಜನೆ ಬದ್ಧವಾಗಿದ್ದು, ಇದಕ್ಕಾಗಿ ಕಾಮಗಾರಿ ಸ್ಥಳದಲ್ಲೆ ಅರೋಗ್ಯ ಉಚಿತ ತಪಾಸಣಾ ಶಿಬಿರ ಅಯೋಜಿಸಲಾಗಿದೆ ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೆಶಕ (ಗ್ರಾ.ಉ.) ಪಿ. ಎಸ್. ಕಸನಕ್ಕಿ ಹೇಳಿದರು.

ತಾಲ್ಲೂಕಿನ ಕವಡಿಮಟ್ಟಿ ಗ್ರಾಮದ ಗೋಮಾಳ ಜಾಗದಲ್ಲಿ ಕಂದಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಕವಡಿಮಟ್ಟಿ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತ ಮಾಹಿತಿ, ಶಿಕ್ಷಣ ಹಾಗೂ ಸಂಹವನ ಕಾರ್ಯಕ್ರಮ ಹಾಗೂ ಅರೋಗ್ಯ ಇಲಾಖೆ ಸಹಯೋಗದಲ್ಲಿ ನರೇಗಾ ಕೂಲಿಕಾರರಿಗೆ ಶುಕ್ರವಾರ ಅರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.

ದಿನ ನಿತ್ಯ ಬಿಸಿಲಿನಲ್ಲಿ ದುಡಿಯುವ ಕೂಲಿಕಾರರಿಗೆ ಮಧುಮೇಹ, ರಕ್ತದೊತ್ತಡ, ಮಲೇರಿಯಯಂತ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುತ್ತದೆ. ಅದ್ದರಿಂದ ಗ್ರಾಮ ಪಂಚಾಯತಿಯಿಂದ ಕೆಲಸ ನಿರ್ವಹಿಸುವ ಕಾಮಗಾರಿ ಸ್ಥಳದಲ್ಲೆ ಅರೋಗ್ಯ ಉಚಿತ ತಪಾಸಣೆ ಆಯೋಜಿಸಿ ಅವರ ಅರೋಗ್ಯ ಕಾಯ್ದುಕೊಳ್ಳಲು ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಕುಂತಲಾ ಚ. ಹಂಡ್ರಗಲ್ ಅವರು ಸ್ವತಃ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಅರೋಗ್ಯ ಉಚಿತ ಶಿಬಿರಕ್ಕೆ ಚಾಲನೆ ನೀಡಿದರು.

ಅರೋಗ್ಯ ಇಲಾಖೆಯ ಅಧಿಕಾರಿಗಳು ಕೂಲಿಕಾರರ ಅರೋಗ್ಯ ತಪಾಸಣೆ ಮಾಡಿ ಮಧುಮೇಹ, ರಕ್ತದೊತ್ತಡ, ಮಲೇರಿಯಾ ಹಾಗೂ ಕಫ ಪರೀಕ್ಷೆ ಮಾಡಿ ಸಮಾಲೋಚನೆ ಮಾಡಿದರು.

ತಾಲೂಕು ಪಂಚಾಯತ ನರೇಗಾ ಐಇಸಿ ಸಂಯೋಜಕ ಪರಮೇಶ ಹೊಸಮನಿ, ಆರೋಗ್ಯ ನಿರೀಕ್ಷಣಾಧಿಕಾರಿ ಕಲ್ಮೇಶಕುಮಾರ ಹೂಗಾರ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಸದಾಶಿವ ಗುರುಶಾಂತನವರ್, ರಚನ ಸಬರದ್, ಗ್ರಾ.ಪಂ. ಸದಸ್ಯರಾದ ರೇವಣಸಿದ್ದಯ್ಯ ಗುರುವಿನ, ಮಲಕಯ್ಯ ಪೂಜಾರಿ, ಹನುಮಂತ ಹಂಡ್ರಗಲ್, ಕಾರ್ಯದರ್ಶಿ ಅಶೋಕ ಕೊರವರ, ಈರಯ್ಯ ಹೀರೆಮಠ, ಗ್ರಾ. ಪಂ. ಸಿಬ್ಬಂದಿ ಇದ್ದರು.

Latest News

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ :                 ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ ಬಂದ್‌ಗೆ ಉತ್ತಮ ಸ್ಪಂದನೆ : ಒಳಮೀಸಲು ಸೌಲಭ್ಯ ಕಲ್ಪಿಸಿದ ಬಳಿಕವೇ ನೇಮಕಾತಿ ಪ್ರಕ್ರಿಯೆ ಆರಂಭಿಸಿ

ಮುದ್ದೇಬಿಹಾಳ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸೌಲಭ್ಯ ಜಾರಿಗೊಳಿಸುವಂತೆ ಆಗ್ರಹಿಸಿ ಹಾಗೂ ಒಳ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಕಾಂಗ್ರೆಸ್ ಸರ್ಕಾರದ ಆದ್ಯತೆ-ನಾಡಗೌಡ

ಮುದ್ದೇಬಿಹಾಳ : ಗ್ರಾಮೀಣ ರಸ್ತೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಹಂತ ಹಂತವಾಗಿ ಆದ್ಯತೆ ನೀಡುತ್ತಿದೆ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ನಿರಂತರ ಅಧ್ಯಯನದಿಂದ ಯಶಸ್ಸು ಸಾಧ್ಯ-ಹಾಸಿಂಪೀರ ವಾಲಿಕಾರ

ಮುದ್ದೇಬಿಹಾಳ : ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮಾ.4 ರಂದು ಚಿಣ್ಣರೊಂದಿಗೆ ಬಣ್ಣದ ಓಕುಳಿ

ಮುದ್ದೇಬಿಹಾಳ : ಹೋಳಿ ಹಬ್ಬದ ಅಂಗವಾಗಿ ಇಲ್ಲಿನ ಸಮಾನ ಮನಸ್ಕರ ಯುವ ಬಳಗದ ಸಹಯೋಗದಲ್ಲಿ 4 ರಂದು ಬೆಳಗ್ಗೆ 8 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಪಟ್ಟಣದ ಹುಡ್ಕೋದಲ್ಲಿರುವ ಗವಿಸಿದ್ದೇಶ್ವರ ವೇದಿಕೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮುದ್ದೇಬಿಹಾಳದ ಎಲ್ಲಾ ಬಾಂಧವರು ತಮ್ಮ ಮಕ್ಕಳನ್ನು ಕರೆತಂದು ಈ ಕಾರ್ಯಕ್ರಮದಲ್ಲಿ ತೊಡಗಿಸಿ ಹೋಳಿ ಆಚರಣೆ ಯಶಸ್ವಿಗೊಳಿಸುವಂತೆ ಬಳಗದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಎರಡು ದಿನ ನಿರಂತರ ದುರಸ್ತಿ : ಕುಡಿವ ನೀರು ಪೂರೈಕೆ ಅಬಾಧಿತ

ಮುದ್ದೇಬಿಹಾಳ : ಪಟ್ಟಣಕ್ಕೆ ಕುಡಿವ ನೀರು ಪೂರೈಕೆ ಎರಡು ದಿನ ವಿಳಂಬವಾಗಿದ್ದು ಮಾ.3 ರಿಂದ ಯತಾಸ್ಥಿತಿಯಲ್ಲಿ ವಿವಿಧ ವಾರ್ಡಗಳಿಗೆ ಸರದಿ ಮೇಲೆ ಪೂರೈಕೆ ಆಗಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಕುಡಿವ ನೀರು ಪೂರೈಕೆ ವಿಭಾಗದ ಉಸ್ತುವಾರಿ, ಪುರಸಭೆ ಆರೋಗ್ಯ ನಿರೀಕ್ಷಕ ಜಾವೇದ ನಾಯ್ಕೋಡಿ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ದಿನಗಳಿಂದ ಇಲ್ಲಿನ ಜ್ಞಾನ ಭಾರತಿ ಶಾಲೆ ಮುಂದೆ ಮುಖ್ಯ ಕೊಳವೆ ಪೈಪ್‌ನಲ್ಲಿ ಸೋರಿಕೆ ಕಂಡು ಬಂದಿತ್ತು.ಅದನ್ನು