ಮುದ್ದೇಬಿಹಾಳ : ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮಕ್ಕೆ ಕುಡಿವ ನೀರು ಪೂರೈಸುವ ವಾಲ್ವ್ವೊಂದರ ಚೇಂಬರ್‌ನಲ್ಲಿ ಸತ್ತ ನಾಯಿ ಕಳೆಬರ ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಗುರುವಾರ ಸಂಜೆ ಹಾಗೂ ಶುಕ್ರವಾರ ದೌಡಾಯಿಸಿದ್ದಾರೆ.
ಆರೋಗ್ಯ ಇಲಾಖೆಯಿಂದ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಒಪಿಡಿ ಸೇವೆ ಆರಂಭಿಸಲಾಗಿದ್ದು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಸತೀಶ ತಿವಾರಿ, ಜಮ್ಮಲದಿನ್ನಿ ಗ್ರಾಮಕ್ಕೆ ನೀರು ಪೂರೈಕೆ ವಾಲ್ವ್ದ ಚೇಂಬರ್‌ನಲ್ಲಿ ನಾಯಿ ಸತ್ತು ಬಿದ್ದಿರುವುದರಿಂದ ನೀರು ವಿಷಮಯವಾಗಿರುತ್ತದೆ.ಅದನ್ನು ಸೇವನೆ ಮಾಡಿದರೆ ತೀವ್ರ ಗಂಭೀರ ಪರಿಣಾಮಗಳು ಉಂಟಾಗುತ್ತವೆ.ಸದ್ಯಕ್ಕೆ ಗ್ರಾಮದಲ್ಲಿ ಸಂಚರಿಸಿ ಮನೆ ಮನೆಗೆ ಸಮೀಕ್ಷೆ ನಡೆಸಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಲ್ಲದೇ ಈ ವಾಲ್ವ್ನಿಂದ ಪೂರೈಕೆಯಾಗಿರುವ ನೀರನ್ನು ಪರೀಕ್ಷೆಗೆಂದು ಲ್ಯಾಬ್‌ಗೆ ಕಳಿಸಿಕೊಡಲಾಗುವುದು. ನೀರು ಪೂರೈಕೆ ಮಾಡಬೇಕಾದರೆ ಪಂಚಾಯಿತಿಯವರು ಪೈಪ್‌ಲೈನ್ ಶುಚಿತ್ವಗೊಳಿಸಿ ಪೂರೈಕೆಗೆ ಕ್ರಮ ಜರುಗಿಸಿ ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ತಾಪಂ ಇಒ,ಆರ್‌ಡಬ್ಲೂö್ಯಎಸ್ ಎಇಇ ಭೇಟಿ: ವಾಲ್ವ್ನಲ್ಲಿ ನಾಯಿ ಸತ್ತು ಬಿದ್ದಿರುವ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ತಾಪಂ ಇಒ ನಿಂಗಪ್ಪ ಮಸಳಿ, ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ ಎಇಇ ಆರ್.ಎಸ್.ಹಿರೇಗೌಡ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಅಲ್ಲದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮಸ್ಥರ ತರಾಟೆ:
ಕುಡಿವ ನೀರು ಪೂರೈಕೆಯಲ್ಲಿ ದಿವ್ಯ ನಿರ್ಲಕ್ಷö್ಯ ವಹಿಸಿರುವ ಇಂಗಳಗೇರಿ ಪಂಚಾಯಿತಿ ಪಿಡಿಒ ವಿಜಯಮಹಾಂತೇಶ ಕೋರಿ, ಕಾರ್ಯದರ್ಶಿ ಬಸನಗೌಡ ಬಿರಾದಾರ ಅವರನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು.ವಾಲ್ವ್ದಲ್ಲಿ ಸತ್ತ ನಾಯಿ ಬಿದ್ದಿರುವುದನ್ನು ಗಮನಿಸದಂತೆ ನಿಮ್ಮ ಪಂಚಾಯಿತಿ ವಾಲ್ವ್ಮನಗಳು ಕೆಲಸ ಮಾಡುತ್ತಾರೆ ಎಂದರೆ ಕಲುಷಿತ ನೀರು ಕುಡಿದ ಗ್ರಾಮಸ್ಥರ ಆರೋಗ್ಯದಲ್ಲಿ ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಯಾರು ಹೊಣೆಗಾರರು ಎಂದು ಪ್ರಶ್ನಿಸಿದರು.
ಇಂಗಳಗೇರಿ ಗ್ರಾಪಂನಿAದ ಸತ್ತು ಬಿದ್ದಿದ್ದ ನಾಯಿಯ ಕಳೆಬರವನ್ನು ವಿಲೇವಾರಿ ಮಾಡಿ ಅಲ್ಲಿ ರೋಗ ನಿರೋಧಕ ಪೌಡರ್‌ನ್ನು ಸಿಂಪಡಣೆ ಮಾಡಲಾಗಿದೆ.