ಬರದೇವನಾಳ: ಹುಣಸಗಿ ತಾಲೂಕಿನ ಬರದೇವನಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ.
ಭ್ರಷ್ಟಾಚಾರ ನಡೆಸಿರುವ ಹಿನ್ನಲೆಯಲ್ಲಿ ಪಿ.ಡಿ.ಓ ಅವರು ಮೇಲಧಿಕಾರಿಗಳ ವಿಚಾರಣೆಯಲ್ಲಿ ಯಾವದೇ ಮಾಹಿತಿಯನ್ನು ಸಲ್ಲಿಸಿಲ್ಲ. ಬರದೇವನಾಳ ಗ್ರಾ.ಪಂ.ಯಲ್ಲಿ ನಡೆದ ಅವ್ಯವಹಾರದ ಕುರಿತು ಇ.ಓ . ರವರು ಖುದ್ದಾಗಿ ಗ್ರಾ.ಪಂ.ಗೆ ಭೇಟಿ ನೀಡಿ, ವಿಚಾರಣೆ ಕೈಗೊಂಡಿದ್ದಾರೆ. ವೀರಯ್ಯ ಹಿರೇಮಠರವರು ಯಾವುದೇ ದಾಖಲೆಗಳು ಸಲ್ಲಿಸಿರುವುದಿಲ್ಲ. ಆದರೆ ಜೊತೆಗೆ ಹಣಮಂತಪ್ಪ ಹೆಗ್ಗರ, ಮಲ್ಲೇಶಪ್ಪಗೌಡ, ಹೊನ್ನಪ್ಪ ಚಿಕ್ಕನಟಗಿ ಇವರು ನಗದು ಪುಸ್ತಕ, ಕ್ರಿಯಾ ಯೋಜನೆ, ಬ್ಯಾಂಕ್ ಸೈಟಿಮೆಂಟ್ ಒದಗಿಸಿದ್ದು, ಆದರೆ 15 ನೇ ಹಣಕಾಸು ಕ್ರಿಯಾ ಯೋಜನೆ ಸಲ್ಲಿಸಿರುವುದಿಲ್ಲ.
ಕೂಡಲೇ ವೀರಯ್ಯ ಹಿರೇಮಠ, ಹಣಮಂತಪ್ಪ ಹೆಗ್ಗರ, ಮಲ್ಲೇಶಪ್ಪಗೌಡ, ಹೊನ್ನಪ್ಪ ಚಿಕ್ಕನಟಿಗಿ ಇವರನ್ನು ಅಮಾನತ್ತುಗೊಳಿಸುಬೇಕು ಎಂದು ಹುಣಸಗಿ ತಾಲೂಕ ಅಧ್ಯಕ್ಷರು ಪ್ರಭು ಗೌಡ ಫೋತರೆಡ್ಡಿಯವರು ಯಾದಗಿರಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲೂಯಿಸ್ ಓಡಿಯರವರಿಗೆ ಮನವಿ ಸಲ್ಲಿಸಿದರು
ಈ ಸಂದರ್ಭದಲ್ಲಿ ಶಹಾಪುರ ತಾಲೂಕ ಅಧ್ಯಕ್ಷರು ಸೋಪಣ್ಣ ಹಳಿಸಗರ್ ಜಿಲ್ಲಾ ಸಂಚಾಲಕರು ನಾಗರಾಜ್ ಭೀಮಣ್ಣ ಶಹಾಪುರ ತಾಲೂಕು ಗೌರವ ಅಧ್ಯಕ್ಷರು ಮರಿಯಪ್ಪ ಬಿದರರಾಣಿ ಶಹಾಪುರ ತಾಲೂಕ ಉಪಾಧ್ಯಕ್ಷರು ಶ್ರೀಮಂತ್ ಉಪಸ್ಥಿತರಿದ್ದರು.
ವರದಿ : ಶಿವು ರಾಠೋಡ







