ಮುದ್ದೇಬಿಹಾಳ : ಪಟ್ಟಣದ ಹುಡ್ಕೋಗೆ ತೆರಳುವ ದ್ವಾರದಲ್ಲಿ ಸ್ಥಾಪಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತದ ಆಸುಪಾಸು 200 ಮೀಟರ್ ಸುತ್ತಮುತ್ತ ಅನ್ಯ ಮಹಾತ್ಮರ, ನಾಯಕರ ವೃತ್ತ, ಪ್ರತಿಮೆಗಳನ್ನು ಪ್ರತಿಷ್ಠಾಪಿಸದಂತೆ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರು ಗುರುವಾರ ತಹಶೀಲ್ದಾರಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಮನವಿ ಪತ್ರವನ್ನು ಶಿರಸ್ತೇದಾರ ಎಂ. ಎಸ್. ಬಾಗೇವಾಡಿ ಅವರಿಗೆ ಸಲ್ಲಿಸಿದ ಸಮಾಜದ ಮುಖಂಡರು, 2009ರಲ್ಲಿ ಪುರಸಭೆಯಿಂದ ಅನುಮತಿ ಪಡೆದು ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಕೊಡುಗೆ ನೀಡಿರುವ ಚೆನ್ನಮ್ಮನವರ ವೃತ್ತದ ಆಸುಪಾಸು ಅನ್ಯ ಸಮಾಜದವರ ಮಹಾತ್ಮರ ವೃತ್ತ, ಪ್ರತಿಮೆ ಸ್ಥಾಪನೆ ಮಾಡಬಾರದು. ಮಾಡಿದರೆ ಕೋಮುಗಲಭೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸಲ್ಲಿಕೆ ಸಮಯದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಮುಖಂಡರಾದ ಮುರಿಗೆಪ್ಪ ಹಡಲಗೇರಿ,ರಾಜಶೇಖರ ಹೊಳಿ, ಶರಣು ಸಾಲವಾಡಗಿ, ರಾಜಶೇಖರ ಮ್ಯಾಗೇರಿ, ಹಣಮಂತ ಕಲ್ಯಾಣಿ, ವೀರೇಶ ಢವಳಗಿ, ದಾನಪ್ಪ ಅಂಗಡಿ ಮೊದಲಾದವರು ಇದ್ದರು.