Popular MLA Dr. Vijayananda Kashapanavara

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ನೇರ ನುಡಿಯ ಜನಪ್ರೀಯ ಶಾಸಕ ಡಾ. ವಿಜಯಾನಂದ ಕಾಶಪ್ಪನವರ

ಹುನಗುಂದ : ಕಾಶಪ್ಪನವರ ಮನೆತನದ ಹೆಸರು ಹುನಗುಂದ ವಿಧಾನ ಸಭಾ ಮತಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗದೇ ಇಂದು ಜಿಲ್ಲೆ, ರಾಜ್ಯ, ದೇಶ ವಿದೇಶಗಳಲ್ಲಿ ಗುರುತಿಸುವಂತೆ ಬೆಳೆದು ನಿಂತಿರುವ ಮಾಜಿ ಸಚಿವ ದಿ. ಎಸ್. ಆರ್. ಕಾಶಪ್ಪನವರ ಮಾಡಿದ ಸಾರ್ವಜನಿಕ, ರೈತ ಪರವಾದ ಯೋಜನೆಯಾದ ಮರೋಳ ಏತ ನೀರಾವರಿ, ಹನಿ ನೀರಾವರಿ, ಏಷ್ಯಾ ಖಂಡದಲ್ಲಿಯೇ ಇಂದು ಈ ಯೋಜನೆ ಮಹತ್ವದಿಂದ ಹುನಗುಂದ ಕ್ಷೇತ್ರ ಗುರುತಿಸುವಂತಾಗಲೂ ಕಾಶಪ್ಪನವರ ದೂರದ ದೃಷ್ಟಿಯಿಂದ ಸಾಧ್ಯವಾಗಿದೆ. 

ತಂದೆ ಮಾಜಿ ಸಚಿವ ಎಸ್. ಆರ್. ಕಾಶಪ್ಪನವರ ಗುಡಿ ಕಟ್ಟಿದರೆ ತಂದೆಗೆ ತಕ್ಕ ಮಗ ಶಾಸಕ ವಿಜಯಾನಂದ ಕಾಶಪ್ಪನವರ ಕಳಸ ಇಡುವಲ್ಲಿ ಯಶಸ್ವಿಯಾಗಿ ಇಂದು ನೇರ ನುಡಿಯ ಜನ ನಾಯಕರಾಗಿದ್ದಾರೆ.
೧೯೭೨ ಜುಲೈ ೧ ರಂದು ಡಾ. ವಿಜಯಾನಂದ ಕಾಶಪ್ಪನವರ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ಮಾಜಿ ಸಚಿವ ಶಿವಶಂಕ್ರಪ್ಪ ಮತ್ತು ಗೌರಮ್ಮ ಶರಣ ದಂಪತಿಗಳ ಉದರಲ್ಲಿ ಜನಿಸಿದರು. ಇಲಕಲ್ಲನ ಎಸಿಓ ಶಾಲೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಎಸ್.ವಿ.ಎಂ. ಕಾಲೇಜು ಇಲಕಲ್ಲನಲ್ಲಿ ಪಿಯು ಶಿಕ್ಷಣ, ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ಪದವಿ ಪಡೆದು ನಂತರ ಬೆಂಗಳೂರಿನ ಪ್ರತಿಷ್ಠಿತ ಎಂ. ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದರು. ತಂದೆ ಹಾದಿಯಲ್ಲಿಯೇ ಬೆಳೆದು ೧೯೮೯ ರಲ್ಲಿ ಹುನಗುಂದ ತಾಲೂಕಿನ ವಿದ್ಯಾರ್ಥಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಹಾಗೂ ಮುಂದೆ ೧೯೯೦ರಲ್ಲಿ ವಿದ್ಯಾರ್ಥಿ ಕಾಂಗ್ರೆಸನ ಪ್ರಧಾನ ಕಾರ್ಯದರ್ಶಿಯಾಗಿ ೧೯೯೨ ರಲ್ಲಿ ಜಿಲ್ಲಾ ಯುವ ಘಟಕದ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ೨೦೦೭ ಮತ್ತು ೨೦೧೧ ವರೆಗೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಾಜಕೀಯ ತಂತ್ರಗಾರಿಕೆಯಲ್ಲಿ ನಿಸ್ಸಿಮರಾಗಿ ಜನ ಸಮಾನ್ಯರ ಮಧ್ಯದಲ್ಲಿ ಯುವ ನಾಯಕರಾಗಿ ಹೊರಹೊಮ್ಮಿದರು.

೨೦೦೩ರಲ್ಲಿ ಜೂನ್ ೨೭ ರಂದು ಎಸ್. ಆರ್. ಕಾಶಪ್ಪನವರ ಆಕಸ್ಮಿಕ ರಸ್ತೆ ಅಪಘಾತದಲ್ಲಿ ನಿಧನರಾದ ಸಮಯಲ್ಲಿ ಕಾಶಪ್ಪನವರ ಕುಟುಂಬ ಉಪ ಚುನಾವಣೆ ಎದುರಿಸುವ ಹೊಣೆಗಾರಿಕೆಯಿಂದ ತಾಯಿ ಗೌರಮ್ಮ ಕಾಶಪ್ಪನವರ ಅವರನ್ನು ಹತ್ತು ಸಾವಿರ ಅಧಿಕ ಮತಗಳಿಂದ ಆಯ್ಕೆಯಾಗುವಲ್ಲಿ ಶ್ರಮಿಸಿದ ಛಲದಂಕ ಮಲ್ಲ ವಿಜಯಾನಂದ ಕಾಶಪ್ಪನವರ.
೨೦೧೩ ರ ವಿಧಾನ ಸಭೆ ಚುನಾವಣೆಯಲ್ಲಿ ಪ್ರತಿ ಸ್ಪರ್ಧಿ ದೊಡ್ಡನಗೌಡ ಪಾಟೀಲ ಅವರನ್ನು ಪರಾಭವಗೊಳಿಸಿ ೧೫೭೯೭ ಅಧಿಕ ಮತಗಳಿಂದ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನ ಸಭೆಗೆ ಪ್ರವೇಶ ಮಾಡಿದರು. ಜನ ಸಾಮಾನ್ಯರ ಹುನಗುಂದ ಮತಕ್ಷೇತ್ರದ ರೈತ, ನೇಕಾರ, ದಲಿತ, ಅಲ್ಪಸಂಖ್ಯಾತ, ಬಡ ವಿದ್ಯಾರ್ಥಿಗಳ ಶಿಕ್ಷಣ ಆರೋಗ್ಯ ಸೇವೆ ಒದಗಿಸುವಲ್ಲಿ, ಮೂಲಭೂತ ಸೌಕರ್ಯ, ಪ್ರವಾಸೋಧ್ಯಮ ಮರೋಳ ಏತ ನೀರಾವರಿ ಯೋಜನೆಯ ಎರಡನೇ ಹಂತದ ಹನಿ ನೀರಾವರಿ ವಿವಿಧ ಅಭಿವೃದ್ದಿಗಾಗಿ ಒಟ್ಟು ೩ ಸಾವಿರ ೫೦೦ ಕೋಟಿ ಅನುದಾನವನ್ನು ಪಡೆಯುವದರ ಮೂಲಕ ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಿದರು. ಅಭಿವೃದ್ದಿ ಹರಿಕಾರಾಗಿ ಮತ್ತೆ ಪ್ರಸ್ತುತ ೨೦೨೩ರ ವಿಧಾನ ಸಭೆ ಚುನಾವಣೆಯಲ್ಲಿ ಪ್ರತಿ ಸ್ಪರ್ದೆ ದೊಡ್ಡನಗೌಡ ಪಾಟೀಲ ಅವರುನ್ನು ಪರಾಗವಗೊಳಿಸಿ ೩೦೭೦೦ ಮತಗಳಿಂದ ಆಯ್ಕೆಯಾಗಿ ೨ನೇ ಬಾರಿಗೆ ಜನಪ್ರೀಯ ಶಾಸಕರಾಗಿ ಆಯ್ಕೆಯಾಗಿದ್ದು ಅವರ ಜನಸಾಮಾನ್ಯರ ಮಧ್ಯ ಬೆರೆತು ಸಮಸ್ಯೆಗಳಿಗೆ ಸ್ಪಂದಿಸುವ ಗುಣವೇ ಕಾರಣ.

 ೨೦೧೩ ರಿಂದ ೨೦೧೮ ವರೆಗೆ ಕಾಶಪ್ಪನವರ ಅಭಿವೃದ್ದಿಯ  ಪಕ್ಷ ನೋಟ - ಮರೋಳ ಏತ ನೀರಾವರಿ ಯೋಜನೆ, ೨ ನೇ ಹಂತದ ಹನಿ ನೀರಾವರಿ ಅನುಷ್ಠಾನಕ್ಕಾಗಿ ೭೮೬ ಕೋಟಿ, ಕೊಪ್ಪಳ ಏತ ನೀರಾವರಿ ಯೋಜನೆಗಾಗಿ ೨೨೦ ಕೆವಿ ಸ್ಟೇಷನ್,  ಕೂಡಲ ಸಂಗಮ ಯಾತ್ರಿ ಭವನಕ್ಕೆ ೧.೫೩ ಕೋಟಿ, ನಂದವಾಡಗಿ ಏತ ನೀರಾವರಿ ಮೊದಲ ಹಂತದ ಕಾಮಗಾರಿಗೆ ೨೦೭ ಕೋಟಿ ಅನುದಾನ, ಇಲಕಲ್ಲ ತಾಲೂಕಿನ ರಚನೆಗೆ  ಮೂಲಭೂತ ಸೌಕರ್ಯಗಳಿಗಾಗಿ ಅನುದಾನ ಬಿಡುಗಡೆ, ಕೂಡಲ ಸಂಗಮ ಅಡಿವಿಹಾಳ ಸೇತುವೆ ೫೮ ಕೋಟಿ, ಕೂಡಲ ಸಂಗಮದಲ್ಲಿ ದೆಹಲಿ ಮಾದರಿ ಅಕ್ಷಧಾಮ ಅಭಿವೃದ್ದಿಗಾಗಿ ೧೨೫ ಕೋಟಿ ಅನುದಾನ, ಜಿಟಿಡಿಸಿ ಕಾಲೇಜು ಮಹಿಳಾ ವಸತಿಗೃಹಕ್ಕೆ ೧.೨೮ ಕೋಟಿ ಅನುದಾನ, ಎಡಿಬಿ ಯೋಜನೆ ಅಡಿಯಲ್ಲಿ ಇಲಕಲ್ಲ ನಗರಕ್ಕೆ ೪೩ ಕೋಟಿಅಬಿವೃದ್ದಿ ಕಾಮಗಾರಿ, ನಗರೋತ್ತಾನ ಅನುದಾನ ದಲ್ಲಿ ೫೦ ಕೋಟಿ ರೂ ಅಭಿವೃದ್ದಿ ಕಾಮಗಾರಿಗಳು. ಹುನಗುಂದ ನಗರದ ಬಸ್ ಡಿಪೋ ೩.೫೦ ಕೋಟಿ ಪಿಎಂಜಿಎಸ್‌ವೈ ೨ನೇ ಹತಕ್ಕೆ ೧೧೮೨.೩೪ ಲಕ್ಷ ಮೂರನೇ ಹಂತಕ್ಕೆ ೮೨೩.೨೭ ಲಕ್ಷ ನಾಲ್ಕನೇ ಹಂಕ್ಕೆ ೭೦೧ ಲಕ್ಷಗಳ ರಸ್ತೆ ನಿರ್ಮಾಣ, ಹುನಗುಂದ ನಗರದಲ್ಲಿ ಪ್ರೌಢಶಾಲೆ, ಆದರ್ಶ ವಿದ್ಯಾಲಯ, ವಸತಿ ನಿಲಯಗಳ ನಿರ್ಮಾಣಕ್ಕಾಗಿ ನಿರ್ಮಿಸಿದ ೧೫.೭೫ ಕೋಟಿ ಇಲಕಲ್ಲ ಗ್ರಾಮೀಣ ಪೋಲಿಸ್ ಠಾಣಿ ಮತ್ತು ವಸತಿ ನಿಲಯ ಗೃಹ ನಿರ್ಮಾಣ, ಹುನಗುಂದ ನಗರಕ್ಕೆ ಕೆಪಿಟಿಸಿಎಲ್ ವಿಭಾಗೀಯ ಕಚೇರಿ ಮಂಜುರಾತಿ, ಕಂದಗಲ್ಲ ಗ್ರಾಮದಲ್ಲಿ ೧೧೦ ಕೆವಿ ಸ್ಟೇಷನ್ ನಿರ್ಮಾಣ, ಇಲಕಲ್ಲ ನಲ್ಲಿ ಎಂ.ಸಿ.ಎಚ್ ಆಸ್ಪತ್ರೆ ನಿರ್ಮಾಣ  ೩.೫೦ ಕೋಟಿಯಲ್ಲಿ ನಿರ್ಮಾಣ ಸಂಚಾರಿ ನ್ಯಾಯಲಯ ಮಂಜುರಾತಿ, ಸೂಳೆಭಾವಿ ಗ್ರಾಮದಲ್ಲಿ ರಾಣಿ ಚನ್ನಮ್ಮ ವಸತಿ ನಿಲಯ, ವಿವಿಧ ಇಲಾಖೆಗಳಿಗೆ ಸ್ವಂತ ಕಟ್ಟಡ, ವಿದ್ಯಾರ್ಥಿಗಳಿಗೆ ವಸತಿ ನಿಲಯ, ರೈತರಿಗಾಗಿ ಉಗ್ರಾಣ ನಿರ್ಮಾಣ ಹಾಗೂ ೫ ಸಾವಿರ ಕೃಷಿ ಹೊಂಡಗಳನ್ನು ನಿರ್ಮಿಸಿದ ರೈತರ ನೆಚ್ಚಿನ ನಾಯಕ ವಿಜಯಾನಂದ ಕಾಶಪ್ಪನವರ.
ಇತ್ತಿಚೆಗೆ ಪ್ರಪಂಚವನ್ನೆ ತಲ್ಲಣಗೊಳಿಸಿದ ಕೋವಿಂಡ-೧೯ ವೈರಸ್ ತಡೆಗಟ್ಟಲು ಹುನಗುಂದ-ಇಲಕಲ್ಲ ಅವಳಿ ತಾಲೂಕಿನ ಆರೋಗ್ಯ ಇಲಾಖೆಗೆ ೨ ಅಂಬುಲೈನ್ ಮತ್ತು ಪೌರಕಾರ್ಮಿಕರಿಗೆ, ನಾಗರೀಕರಿಗೆ ಔಷಧಿಗಳ ಕಿಟ್ ಮತ್ತು ಆಹಾರ ಪೊಟ್ಟಣ ವಿತರಣೆ ಮಾಡಿ ಸದಾ ಕ್ಷೇತ್ರದ ಜನರ ಆರೋಗ್ಯ ಕಾಪಾಡಲು ಶ್ರಮಿಸಿದ ಆಪತ್ ಬಾಂಧವ. 

ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಡಾ. ವಿಜಯಾನಂದ ಕಾಶಪ್ಪನವರ ಅವರ ೫೩ನೇ ಜನ್ಮ ಜನ್ಮ ದಿನವನ್ನು ೧ ಜುಲೈ. ೨೦೨೫ರಂದು ನೋಟ್ ಬುಕ್ ವಿತರಣೆ, ಸಸಿ ನೆಡುವ ಕಾರ್ಯಕ್ರಮ, ಇನ್ನಿತರ ಕಾರ್ಯಕ್ರಮಗಳನ್ನು ಕ್ಷೇತ್ರದ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸುತ್ತಿರುವುದು ಜನಮಾನಸದಲ್ಲಿ ಅಚ್ಚಳಿಯದಂತಾಗುವುದು.

ಅಮರೇಶ ನಾಗೂರ

Latest News

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಮಹಿಳೆ ಗರ್ಭಕೋಶದಿಂದ 17 ಕೆ.ಜಿ. ಗೆಡ್ಡೆ ತೆಗೆದ ಇಎಸ್‌ಐಸಿ ಆಸ್ಪತ್ರೆ ವೈದ್ಯರು

ಬೆಂಗಳೂರು: ಮಹಿಳೆಯ ಗರ್ಭಕೋಶದಿಂದ ಮಹತ್ವದ ಶಸ್ತ್ರ ಚಿಕಿತ್ಸೆ ನಡೆಸಿದ ರಾಜಾಜಿನಗರದ ಇಎಸ್‌ಐಸಿ, ಎಂಸಿ ಪಿಜಿಐಎಂಎಸ್‌ಆರ್

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರ: ಕಲ್ಲಪ್ಪ ಜಂಜಿಗಡ್ಡಿ

ನಾರಾಯಣಪುರ : ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ಕೊಡೇಕಲ್ ಉಪತಶೀಲ್ದಾರ ಕಲ್ಲಪ್ಪ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಸರಕಾರದ ನಿರ್ಲಕ್ಷಕ್ಕೊಳಗಾದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆ

ಕೊಡೇಕಲ್ : ‘ಬರೀ ಭ್ರಷ್ಟಾಚಾರ ಮರಾಯ, ನಾನು ಬ್ರಿಟಿಷ್ ಕಾಲದಲ್ಲಿ ಇಂತಹ ಅವ್ಯವಸ್ಥೆ ದುರಾಡಳಿತ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ತ್ರಿವೇಣಿ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

​ ಮುಧೋಳ : ದೇಶಾಭಿಮಾನ ಪ್ರತಿಯೊಬ್ಬರಲ್ಲಿ ಸ್ವಪ್ರೇರಣೆಯಿಂದ ಮೂಡಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಜನಪರ ಆಡಳಿತವನ್ನು ಜನಸಾಮಾನ್ಯರಿಗೆ ತಲುಪಿಸುವುದೇ ನಮ್ಮ ಸರ್ಕಾರದ ಮೂಲ ಉದ್ದೇಶ: ಸಚಿವ ಲಾಡ್

ಧಾರವಾಡ, ಆ.15: ಸ್ವಾತಂತ್ರ್ಯ ದಿನವು ಕೇವಲ ರಜಾ ದಿನವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಧನ್ಯವಾದ ಹೇಳಲು ಮತ್ತು ಅವರ ಮೌಲ್ಯಗಳನ್ನು ನೆನಪಿಸಿಕೊಳ್ಳಲು ಒಂದು ಅವಕಾಶ. ನಮ್ಮ ಧ್ವಜವನ್ನು ಹಾರಿಸುವುದು, ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವುದು ಮತ್ತು ಏಕತೆಯ ಮನೋಭಾವವನ್ನು ರೂಢಿಸಿಕೊಳ್ಳುವ ದಿನವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ್ ಅವರು ಹೇಳಿದರು. ಧಾರವಾಡ ಜಿಲ್ಲಾಡಳಿತವು ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಬೆಳೆ ಸಮೀಕ್ಷೆದಾರರಿಗೆ ಕಿಟ್ ವಿತರಣೆ

ಮುದ್ದೇಬಿಹಾಳ : ರೈತರ ಬೆಳೆದ ಬೆಳೆ ವಿವರಗಳನ್ನು ದಾಖಲಿಸುವಲ್ಲಿ ಬೆಳೆಯ ಸಮೀಕ್ಷೆದಾರರ ಪಾತ್ರವು ಅತಿ ಮುಖ್ಯವಾಗಿದ್ದು ಅವರ ಬೇಡಿಕೆಯಂತೆ ಐಡಿ ಕಾರ್ಡ್ ಹಾಗೂ ಕಿಟ್ ವಿತರಿಸಲಾಗಿದೆ ಎಂದು ತಹಸೀಲ್ದಾರ್ ಕೀರ್ತಿ ಚಾಲಕ್ ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರ ಹಾಗೂ ಸರ್ಕಾರದ ಪ್ರತಿನಿಧಿಯಾಗಿ ಈ ಬೆಳೆ ಸಮೀಕ್ಷೆದಾರರು ಕಾರ್ಯನಿರ್ವಹಿಸಲಿದ್ದಾರೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಎಸ್. ಡಿ. ಭಾವಿಕಟ್ಟಿ, ಕೃಷಿ ಅಧಿಕಾರಿಗಳಾದ ಗೋವಿಂದರೆಡ್ಡಿ