Pramod mutalik: Bigger danger than halal is china stuff

Pramod mutalik: ಹಲಾಲ್ ಕ್ಕಿಂತ ದೊಡ್ಡ ಡೆಂಜರ್ ಚೀನಾ ವಸ್ತುಗಳು: ಪ್ರಮೋದ್ ಮುತಾಲಿಕ್ ಆಕ್ರೋಶ

Pramod mutalik: ಹಲಾಲ್ ಕ್ಕಿಂತ ದೊಡ್ಡ ಡೆಂಜರ್ ಚೀನಾ ವಸ್ತುಗಳು: ಪ್ರಮೋದ್ ಮುತಾಲಿಕ್ ಆಕ್ರೋಶ

ಬೆಳಗಾವಿ: ಹಲಾಲ್ ಕ್ಕಿಂತ ದೊಡ್ಡ ಡೆಂಜರ್ ಚೀನಾ ವಸ್ತುಗಳು, ಅವುಗಳನ್ನು ಜನರು ಬ್ಯಾನ್ ಮಾಡಬೇಕು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಹೇಳಿದರು.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada

ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಲಾಲ್ ಮುಕ್ತ ಗಣೇಶೋತ್ಸವ ಆಚರಣೆ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದೇವೆ. ಗಣೇಶ ಹಬ್ಬದಲ್ಲಿ ಹಲಾಲ್ ಸಂಬಂಧಿಸಿದ ಹೂವು, ಹಣ್ಣು, ಕಾಯಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಲಾಲ್ ಕಟ್ ಮಾಡುವವರ ಕಡೆಯಿಂದ ಖರೀದಿಸಬಾರದು ಎಂದರು.

ಗೋ ಹಂತಕರು, ಗೋ ಭಕ್ಷಕರಿಂದಲೂ ಮಾರಾಟ ಮಾಡುವ ವಸ್ತು ಅಪವಿತ್ರವಾಗಿರುತ್ತದೆ. ದೇವಸ್ಥಾನದ ಸುತ್ತಮುತ್ತಲಿನ ಕಡೆ ಮುಸ್ಲಿಮರು ವ್ಯಾಪಾರ ನಡೆಸಿ ದೇವಸ್ಥಾನವನ್ನು ಧ್ವಂಸ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಹೈದರಾಬಾದ್ ನಲ್ಲಿ 16 ದೇವಸ್ಥಾನದಗಳನ್ನು ಧ್ವಂಸ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಇಲ್ಲಿಯವರೆಗೂ ಹಿಂದುಗಳ ಮೇಲೆ ದೌರ್ಜನ್ಯ ಮಾಡುವುದನ್ನು ನಿಲ್ಲಿಸಿಲ್ಲ. 40 ಹಿಂದು ಶಿಕ್ಷಕರಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆದು ಶಾಲಾ, ಕಾಲೇಜಿಗೆ ನುಗ್ಗಿ ಹಲ್ಲೆ ನಡೆಸುತ್ತಿದ್ದಾರೆ. ಹಿಂದು ಸಮಾಜವನ್ನು ಕೆಣಕುತ್ತಿರುವ ಪುಟಗೋಸಿ ಬಾಂಗ್ಲಾದೇಶ ಗೆ ತಕ್ಕ ಉತ್ತರ ಕೊಡಬೇಕಿದ್ದ ಕೇಂದ್ರ ಸರಕಾರ ಯಾಕೆ ಬಾಂಗ್ಲಾದೇಶದ ಹಿಂದುಗಳಿಗೆ ರಕ್ಷಣೆ ಕೊಡುತ್ತಿಲ್ಲ. ಯಾಕೆ ಪ್ರಧಾನಿ ನರೇಂದ್ರ ‌ಮೋದಿ ಮೌನವಹಿಸಿದ್ದಾರೆ ಏಕೆ ಎಂದು ಪ್ರಶ್ನಿಸಿದರು.

ಬಾಂಗ್ಲಾದೇಶದ ಪ್ರಧಾನಿ ಫಸೀನಾಗೆ ರಕ್ಷಣೆ ಕೊಡುವ ಕೇಂದ್ರ ಸರಕಾರ ಬಾಂಗ್ಲಾದೇಶದ ಹಿಂದುಗಳ ರಕ್ಷಣೆ ‌ಮಾಡುತ್ತಿಲ್ಲ. ಇಂದಿರಾಗಾಂಧಿಯವರು 1971ರಲ್ಲಿ ನಡೆಸಿದ ಯುದ್ಧದ ಮಾದರಿಯಲ್ಲಿ ಬಾಂಗ್ಲಾದೇಶದ ಮೇಲೆ ಕೇಂದ್ರ ಸರಕಾರ ನಡೆಸಬೇಕು. ಕೇಂದ್ರ ಸರಕಾರದ ಮಾಹಿತಿ ಪ್ರಕಾರ 5 ಕೋಟಿ ಬಾಂಗ್ಲಾ ನುಸುಳುಕೋರರು ಇದ್ದಾರೆ. ಕರ್ನಾಟಕದಲ್ಲಿ 12 ಲಕ್ಷ ಜನರು ಬಾಂಗ್ಲಾದೇಶದ ನುಸುಳಿಕೋರರು ಇದ್ದಾರೆ ಅವರನ್ನು ಒದ್ದು ಹೋರಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ದೇಶದ್ರೋಹಿ ಕ್ಯಾನ್ಸರ್ ಇದ್ದ ಹಾಗೆ. ಇವರನ್ನು ಈಗಲೇ ಹೊಸುಕಿ ಹಾಕಿ ಎಂದರು.

ಮಹಾರಾಷ್ಟ್ರದ ಜಳಗಾವದಲ್ಲಿ ರಾಮಗೀರಿ ಮಹಾರಾಜರು ತಮ್ಮ ಪ್ರವಚನದಲ್ಲಿ‌ ಮೊಹಮ್ಮದ್ ಪೈಗಂಬರ್ ಬಗ್ಗೆ ಪ್ರಸ್ತಾಪಿಸಿದರು. ಆದರೆ ಅವರ ವಿರುದ್ದ ಸರತನ್ ಸೇ ಜುದಾ ಅಂತಾರೆ. ಇದೇನು ಪಾಕಿಸ್ತಾನವಾ ಎಂದು ಪ್ರಶ್ನಿಸಿದ ಅವರು, ರಾಮಗೀರಿ ಮಹಾರಾಜರ ಪರವಾಗಿ ಶ್ರೀರಾಮ ಸೇನೆ ನಿಲ್ಲುತ್ತದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿರುವುದನ್ನು ಹಿಂಪಡೆಯಬೇಕಿತ್ತು. ಆದರೆ ಇವರಿಗೆ ಚುನಾವಣೆಯಲ್ಲಿ ಮಾತ್ರ ಹಿಂದುಗಳು ನೆನಪಾಗುತ್ತಾರೆ‌. ಬಿಜೆಪಿ ಹುಟ್ಟಿದ್ದೇ ಜನಸಂಗ ಹಿಂದು ಸಂಘಟನೆಯಿಂದ ಇದನ್ನು ನೆನೆಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಇದನ್ನೂ ಓದಿ: Gruhalakshmi reels: ಗೃಹಲಕ್ಷ್ಮಿ ತಂದ ಬದಲಾವಣೆ.. ರೀಲ್ಸ್ ಮಾಡಿ ಆಕರ್ಷಕ ಬಹುಮಾನ ಗೆಲ್ಲಿ.. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ (ವಿಡಿಯೋ ನೋಡಿ)

ಶ್ರೀರಾಮ ಸೇನಾ ಮುಖಂಡರಾದ ರವಿ ಕೋಕಿತ್ಕರ್, ವಿನಯ ಅಂಗ್ರೋಳಿ, ವಿಠ್ಠಲ ಗಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Latest News

Free Slots Enjoy 32,178+ Slot Demonstrations Galera Bet app No Install

BlogsWhat are the secret differences when considering totally free ports and

Troll casino Eucasino 50 free spins Seekers Position ️ Play On line Free

ContentCasino Eucasino 50 free spins | Blood Moonlight WildsHigh-Investing SignsFederal CasinoDon’t

ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ:ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ

ಬಿದ್ದಾಗ ಕೈ ಹಿಡಿದು ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ-ಅಕ್ಷಯಾ ಗೋಖಲೆ

ಬಿದ್ದಾಗ ಕೈ ಹಿಡಿದು ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ-ಅಕ್ಷಯಾ ಗೋಖಲೆ

ತಾಳಿಕೋಟಿ : ತಂದೆ ತಾಯಿ ಹುಟ್ಟಿನಿಂದ ನೀಡುವ ಸಂಸ್ಕಾರವು ಮಗುವಿನ ಭವಿಷ್ಯ ನಿರ್ಧರಿಸುತ್ತದೆ. ಈ ಮಣ್ಣಿನ ಸಂಸ್ಕೃತಿಯನ್ನು ಅಳವಡಿಸುವಂತಹ ಕಾರ್ಯ ಮಾಡಿದರೆ ಪ್ರತಿ ಮನೆಯಲ್ಲಿಯೂ ರಾಜ ಮಹಾರಾಜರನ್ನು ಕಾಣಲು ಸಾಧ್ಯವಾಗಲಿದೆ.ಬಿದ್ದಾಗ ಕೈ ಹಿಡಿದೆತ್ತಿಕೊಂಡು ಜೋಪಾನ ಮಾಡುವ ಸಂಸ್ಕಾರವನ್ನು ಮಕ್ಕಳಲ್ಲಿ ಪಾಲಕರು ಬಿತ್ತಬೇಕು ಎಂದು ಕಾರ್ಕಳದ ಖ್ಯಾತ ವಾಗ್ಮಿ ಅಕ್ಷಯಾ ಗೋಖಲೆ ಹೇಳಿದರು. ತಾಳಿಕೋಟಿ ತಾಲ್ಲೂಕಿನ ಮೈಲೇಶ್ವರದಲ್ಲಿ ಶನಿವಾರ ಬ್ರಿಲಿಯಂಟ್ ಕಲಾ ವೈಭವ-2026 ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ವಿಶೇಷ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ ಬಡವನ ಸ್ನೇಹ ಮಾಡಿದರೆ ಆತ ಬದುಕಿನ ಅನುಭವದ ಪಾಠ ಹೇಳುತ್ತಾನೆ ಎಂದು ಹಿರಿಯ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು. ಪಟ್ಟಣದ ಗಣೇಶ ನಗರದಲ್ಲಿ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಅವರ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದಾಶಿವ ಮಠ ಹಾಗೂ ಮೊಹ್ಮದ ರಫೀಕ ಶಿರೋಳ ಅವರ ತಂದೆಯವರು ನನಗೆ ಆಪ್ತರು.ಅವರ