ಮುದ್ದೇಬಿಹಾಳ : ತಾಲೂಕ ರಡ್ಡಿ ನೌಕರ ಸಂಘದ ವತಿಯಿಂದ ಸನ್ 2022-23 ಮತ್ತು 2023-24 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 95% ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿ ತೇರ್ಗಡೆ ಹೊಂದಿದ ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯ ರಡ್ಡಿ ಸಮಾಜದ (Reddy community) ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ 2022-23ನೇ ಸಾಲಿನಿಂದ ಆ.31 ರವರೆಗೆ ನಿವೃತ್ತಿ ಹೊಂದುವ ರೆಡ್ಡಿ ಸಮಾಜದ ಸರಕಾರಿ ನೌಕರರರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ.
Joim Our Telegram: https://t.me/dcgkannada
ಆ.22 ರೊಳಗೆ ಅರ್ಹರು ಸೂಕ್ತ ದಾಖಲಾತಿಗಳೊಂದಿಗೆ 9379594080, 7259270504 ಸಂಪರ್ಕಿಸುವಂತೆ ತಿಳಿಸಲಾಗಿದೆ.
ಇದನ್ನೂ ಓದಿ: LKG – UKG: ಸಚಿವೆ ಲಕ್ಷ್ಮೀ ಹೆಬ್ಬಾಳಕರಿಂದ GOOD NEWS!
ಸೆ.1 ರಂದು ಮುದ್ದೇಬಿಹಾಳದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ನಿವೃತ್ತ ನೌಕರರನ್ನು ಸನ್ಮಾನಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.