Program as scheduled: Preparations are complete for village deity fair on May 30

ನಿಗದಿಯಂತೆ ಕಾರ್ಯಕ್ರಮ: ಮೇ.30 ರಂದು ಗ್ರಾಮ ದೇವತೆ ಜಾತ್ರೆಗೆ ಸಿದ್ಧತೆ ಪೂರ್ಣ

ನಿಗದಿಯಂತೆ ಕಾರ್ಯಕ್ರಮ: ಮೇ.30 ರಂದು ಗ್ರಾಮ ದೇವತೆ ಜಾತ್ರೆಗೆ ಸಿದ್ಧತೆ ಪೂರ್ಣ

ಮುದ್ದೇಬಿಹಾಳ : ಮೇ.30 ರಿಂದ ಪಟ್ಟಣದಲ್ಲಿ ಗ್ರಾಮದೇವತೆ ಜಾತ್ರೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕಮೀಟಿಯ ಮುಖಂಡ ಪ್ರಭುರಾಜ ಕಲ್ಬುರ್ಗಿ ಹೇಳಿದರು.

ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿ ಬಳಿ ಇರುವ ಪೊಲೀಸ್ ಕ್ವಾರ್ಟರ್ಸ್ನಲ್ಲಿ ಮುದ್ದೇಬಿಹಾಳ ಗ್ರಾಮ ದೇವತೆ ಜಾತ್ರಾ ಕಮೀಟಿ ನೇತೃತ್ವದಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಅಂದು ಬೆಳಗ್ಗೆ 8 ರಿಂದ ಗ್ರಾಮದೇವತೆ ಹಾಗೂ ಶಾರದಾ ದೇವಿಯವರ ಮೂರ್ತಿಗಳ ಭವ್ಯ ಮೆರವಣಿಗೆ ಕಿಲ್ಲಾದ ಹೊಸಮಠದಿಂದ ಆರಂಭಗೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ ದ್ಯಾಮವ್ವನ ಕಟ್ಟೆಯಲ್ಲಿ ಪ್ರತಿಷ್ಠಾಪನೆ ಆಗಲಿದೆ ಎಂದು ತಿಳಿಸಿದರು.

ಈಗಾಗಲೇ ಮುದ್ದೇಬಿಹಾಳ ಪಟ್ಟಣದ ಎಲ್ಲ ದೇವಸ್ಥಾನ, ಮಸೀದಿಗಳಿಗೆ ದೀಪಾಲಂಕಾರ ಮಾಡಲಾಗಿದೆ. ತಂಗಡಗಿ ರಸ್ತೆಯ ಆರಂಭದಿಂದ ವಿಜಯಪುರ ರಸ್ತೆ,ಆಲಮಟ್ಟಿ ರಸ್ತೆ,ಹುಡ್ಕೋ ರೋಡ್, ಮುಖ್ಯರಸ್ತೆಯಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ,ಹಾಲಿ ನಿರ್ದೇಶಕ ಸತೀಶ ಓಸ್ವಾಲ್, ಶರಣು ಸಜ್ಜನ, ಸುರೇಶಗೌಡ ಪಾಟೀಲ ಇಂಗಳಗೇರಿ ಮಾತನಾಡಿ, ಪೊಲೀಸ್ ಕಾರ್ಟರ್ಸ್ನಲ್ಲಿ ನಿರಂತರ ಐದು ದಿನಗಳ ಕಾಲ ಅನ್ನಪ್ರಸಾದ ವ್ಯವಸ್ಥೆ ಇರಲಿದೆ. ಕುಡಿವ ನೀರು, ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು ಊಟ ಮಾಡುವವರಿಗೆ ಸಮಸ್ಯೆ ಆಗದಂತೆ ವಾಟರ್‌ಫ್ರೂಫ್ ಪೆಂಡಾಲ್ ಹಾಕಿಸಿದ್ದು ಭಕ್ತಾದಿಗಳು ನಿರಾತಂಕವಾಗಿ ಪ್ರಸಾದ ಮಾಡಬಹುದಾಗಿದೆ ಎಂದರು.

ಭಾರ ಎತ್ತುವ ಸ್ಪರ್ಧೆಯನ್ನು ಕನ್ನಡ ಗಂಡು ಮಕ್ಕಳ ಶಾಲೆಯಿಂದ ಹಳೇ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಾಡಲಾಗುವುದು ಎಂದು ಕಮೀಟಿ ಮುಖಂಡರು ತಿಳಿಸಿದರು.

ಸಾಧನಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಕಡಿ ಮಾತನಾಡಿ, ಮಹಿಳೆಯರು ಕುಂಭಮೇಳದಲ್ಲಿ ಪಾಲ್ಗೊಂಡು ದೇವಿಯ ಮೂರ್ತಿಗಳ ಮೆರವಣಿಗೆ ಯಶಸ್ವಿಗೊಳಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಮಾತನಾಡಿ, ಎಲ್ಲ ಜಾತಿ, ಧರ್ಮದವರು ಒಗ್ಗೂಡಿ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲು ಸಹಕಾರ ನೀಡಬೇಕು ಎಂದು ಹೇಳಿದರು.

ಸಮೀತಿ ಪ್ರಮುಖರಾದ ಕಾಮರಾಜ ಬಿರಾದಾರ, ವಾಯ್.ಎಚ್.ವಿಜಯಕರ್, ವೆಂಕನಗೌಡ ಪಾಟೀಲ, ಉದಯ ರಾಯಚೂರ, ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ ಮೊದಲಾದವರು ಮಾತನಾಡಿ ಸಲಹೆ ಸೂಚನೆ ನೀಡಿದರು. ಸಭೆಯಲ್ಲಿ ಜಾತ್ರಾ ಕಮೀಟಿ ಪದಾಧಿಕಾರಿಗಳು ಇದ್ದರು.

ಜಾತ್ರೆಯಲ್ಲಿ ರಂಗಭೂಮಿ ಕಲಾವಿದರಿಗೆ, ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸದೇ ಟಿವಿ ಕಲಾವಿದರಿಗಷ್ಟೇ ಮಹತ್ವ ನೀಡಿರುವುದು ರಂಗಭೂಮಿ ಪ್ರೇಮಿಗಳಿಗೆ ನಿರಾಸೆಯುನ್ನುಂಟು ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಾತ್ರಾ ಸಮೀತಿಯ ಮುಖಂಡ ಸತೀಶ ಓಸ್ವಾಲ್, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ,
ಈ ಬಾರಿ ಜಾತ್ರೆಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸದೇ ಇರುವುದು ನಮ್ಮ ಗಮನಕ್ಕಿದೆ. ನಮ್ಮಿಂದ ಈ ವಿಷಯದಲ್ಲಿ ತಪ್ಪಾಗಿದ್ದು ಮುಂದಿನ ಜಾತ್ರೆಯಲ್ಲಿ ನಾಟಕ ಪ್ರದರ್ಶನಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ದೇಣಿಗೆ ಸಂಗ್ರಹ, ಸಂಕಷ್ಟ ತೆರೆದಿದ್ದ ಮುಖಂಡ
ಶಾಸಕರೊಂದಿಗೆ ವೇದಿಕೆ ಹಂಚಿಕೊಳ್ಳುವ ಕೆಲವು ಮುಖಂಡರು , ಮುದ್ದೇಬಿಹಾಳದಲ್ಲಿ ಕೋಟಿಗಟ್ಟಲೇ ಆಸ್ತಿ ಮಾಡಿಟ್ಟಿರುವ ಕೆಲವು ಗಣ್ಯರು, ಊರಿನ ಪ್ರಮುಖರು ಎಂದು ಹೇಳಿಕೊಳ್ಳುವವರು ದೇವಿ ಜಾತ್ರೆಯ ದೇಣಿಗೆ ಸಂಗ್ರಹಕ್ಕೆ ಹೋದಾಗ ತಮ್ಮ ಪತ್ನಿಯರನ್ನು ಮುಂದೆ ಕಳಿಸಿ ತಾವು ಊರಲ್ಲಿ ಇಲ್ಲ, ಇಷ್ಟೇ ಬರೆದುಕೊಳ್ಳಿ ಎಂದು ಅಲ್ಪಮೊತ್ತವನ್ನು ಕೊಟ್ಟು ಕಳಿಸಿದ ಉದಾಹರಣೆಗಳು ನಮ್ಮ ಬಳಿ ಇವೆ. ದೊಡ್ಡವರೆನ್ನಿಸಿಕೊಂಡವರು ಕೇವಲ ತೋರಿಕೆಗಾಗಿ ನಮ್ಮದು ಪ್ರತಿಷ್ಠಿತ ಮನೆತನಗಳು ಎಂದು ಹೇಳಿಕೊಂಡು ಪುಕ್ಕಟೆ ಪ್ರಚಾರ ಪಡೆದುಕೊಳ್ಳದೇ ಭಕ್ತಿಯಿಂದ ದೇವಿ ಜಾತ್ರೆಗೆ ದೇಣಿಗೆ ನೀಡಲು ಮುಕ್ತ ಮನಸ್ಸನ್ನು ಹೊಂದಿರುವಂತೆ ಮುಂದಿನ ದಿನಗಳಲ್ಲಿ ದೇವಿ ಅಂತವರಿಗೆ ಸದ್ಭುದ್ದಿ ಕೊಡಲಿ ಎಂದು ಹಣಕಾಸು ಸಮೀತಿಯ ಪ್ರಮುಖ ಸುನೀಲ ಇಲ್ಲೂರ, ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ ದೇಣಿಗೆ ಸಂಗ್ರಹದ ಸಮಯದಲ್ಲಿ ಎದುರಿಸಿದ ಸಂಕಷ್ಟವನ್ನು ತೋಡಿಕೊಂಡರು.

Latest News

ಆ.1 ರಂದು ಕುಂಟೋಜಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

ಆ.1 ರಂದು ಕುಂಟೋಜಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಬಸ್ ನಿಲ್ದಾಣದಲ್ಲಿ ಆ.1 ರಂದು ಬೆಳಗ್ಗೆ 10 ಕ್ಕೆ

ನಾನು ಅವಕಾಶವಾದಿ ರಾಜಕಾರಣಿಯಲ್ಲ: ನಾಡಗೌಡ

ನಾನು ಅವಕಾಶವಾದಿ ರಾಜಕಾರಣಿಯಲ್ಲ: ನಾಡಗೌಡ

ಮುದ್ದೇಬಿಹಾಳ : ಅಧಿಕಾರಕ್ಕಾಗಿ ನಾನು ಪಕ್ಷನಿಷ್ಠೆ ಬದಲಿಸುವ ಜಾಯಮಾನ ನನ್ನದಲ್ಲ. ನಾನು ಅವಕಾಶವಾದಿ ರಾಜಕಾರಣಿಯಲ್ಲ

ಅಸಂಘಟಿತ ಕಾರ್ಮಿಕರ ಮಂಡಳಿಗೆ ಡೀಸೆಲ್ ಸೆಸ್ ನಲ್ಲಿ ಪಾಲು : ಸಚಿವ ಸಂತೋಷ್‌ ಎಸ್‌ ಲಾಡ್‌

ಅಸಂಘಟಿತ ಕಾರ್ಮಿಕರ ಮಂಡಳಿಗೆ ಡೀಸೆಲ್ ಸೆಸ್ ನಲ್ಲಿ ಪಾಲು : ಸಚಿವ ಸಂತೋಷ್‌ ಎಸ್‌ ಲಾಡ್‌

ಕಾರವಾರ, ಜು.29 :- ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯ ಸಾಮಾಜಿಕ ಭದ್ರತಾ ಯೋಜನೆಗಳನ್ನು

ಬಸ್ ಸ್ಟೇರಿಂಗ್ ಕಟ್ : 22 ಜನ ಪ್ರಯಾಣಿಕರು ಪಾರು

ಬಸ್ ಸ್ಟೇರಿಂಗ್ ಕಟ್ : 22 ಜನ ಪ್ರಯಾಣಿಕರು ಪಾರು

ಲಿಂಗಸಗೂರ ಘಟಕದ ಕೆ.ಎಸ್.ಆರ್.ಟಿ.ಸಿ. ಬಸ್ ಲಿಂಗಸಗೂರನಿಂದ ಮುದ್ದೇಬಿಹಾಳಕ್ಕೆ ತೆರಳುವಾಗ ಬಸ್ ಸ್ಟೇರಿಂಗ್ ಕಟ್ ಆಗಿದೆ.

ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ಆಚರಣೆ

ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ಆಚರಣೆ

ಹುಣಸಗಿ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಯಾದಗಿರಿ ಮತ್ತು ಹುಣಸಗಿ ಪಟ್ಟಣದ ಮುಖಂಡರು ಸೇರಿ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಜಿಲ್ಲೆಯ ಎಲ್ಲಾ ಸೇನಾಪಡೆಯ ಅಧಿಕೃತ ಮಾಜಿ ಸೈನಿಕರು 1971ರ ಯುದ್ಧದಲ್ಲಿ ಭಾಗವಹಿಸಿದ, ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಸೈನಿಕರು ಸೇರಿದಂತೆ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಹುಣಸಗಿ ತಾಲೂಕಿನ ಮುಖಂಡರು, ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು, ಹುಣಸಗಿ ಪಟ್ಟಣದ ಎಲ್ಲಾ ಜನ ಸಾಮಾನ್ಯರು ಅಕ್ಕ ತಂಗಿಯರು,

ಹಸಿವಿನಿಂದ ಬಳಲುತ್ತಿರುವ ಮಕ್ಕಳಿಗೆ ಅನ್ನ‌ ನೀಡಿ, ವ್ಯರ್ಥ ಮಾಡಬೇಡಿ : ಬಸವರಾಜ ಕೋರಿ

ಹಸಿವಿನಿಂದ ಬಳಲುತ್ತಿರುವ ಮಕ್ಕಳಿಗೆ ಅನ್ನ‌ ನೀಡಿ, ವ್ಯರ್ಥ ಮಾಡಬೇಡಿ : ಬಸವರಾಜ ಕೋರಿ

ಮುದ್ದೇಬಿಹಾಳ: ಹಸಿವಿನಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅನ್ನ ನೀಡುವ ಕೆಲಸ ಮಾಡಬೇಕೇ ಹೊರತೂ ಅಮೂಲ್ಯವಾದ ಆಹಾರ ಪದಾರ್ಥಗಳನ್ನು ವ್ಯರ್ಥ ಹಾಳು ಮಾಡಬಾರದು ಎಂದು ಪಟ್ಟಣದ ಮಹಾಮನೆ ಬಳಗದ ಅಧ್ಯಕ್ಷ ಬಸವರಾಜ ಕೋರಿ ಹೇಳಿದರು. ಅವರು ಶನಿವಾರ ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ತೋರಣ ಬಳಗದಿಂದ ನಾಗರ ಪಂಚಮಿ ನಿಮಿತ್ತ ಹಮ್ಮಿಕೊಂಡಿದ್ದ ಬಸವ ಪಂಚಮಿಯ "ಹಾಲು ಕುಡಿಯುವ ಹಬ್ಬ"ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲ್ಲಿನ ನಾಗರಕ್ಕೆ