ಮುದ್ದೇಬಿಹಾಳ : ಸಾಲದ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಕುಂಟೋಜಿ ಗ್ರಾಮದ ರೈತ ಸಂಗಪ್ಪ ಗೌಡರ ಅವರ ಮನೆಗೆ ಬುಧವಾರ ಕೃಷಿ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್. ಡಿ. ಭಾವಿಕಟ್ಟಿ ಮಾತನಾಡಿ, ಸರ್ಕಾರದಿಂದ ಮಾರ್ಗಸೂಚಿಯನ್ವಯ ಬರುವ ಪರಿಹಾರವನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ. ರೈತರು ಬೆಳೆನಷ್ಟ, ಹಾನಿಯ ಸಮಯದಲ್ಲಿ ಸಂಯಮ ಕಾಯ್ದುಕೊಂಡರೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗಲಿದೆ. ಆದರೆ, ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ಹೇಳಿದರು.
ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ, ಕೃಷಿ ತಾಂತ್ರಿಕ ಅಧಿಕಾರಿ ಮುಬಿನಾ ತೋಪಘರ, ಕಂದಾಯಾಧಿಕಾರಿ ಪವನಕುಮಾರ ತಳವಾರ, ಕುಂಟೋಜಿ ಗ್ರಾಮ ಆಡಳಿತಾಧಿಕಾರಿ ಸಂತೋಷ ಬಿದರಕುಂದಿ, ಶಶಿಧರ ವಾಲಿಕಾರ, ರೈತನ ಪತ್ನಿ ಬೋರಮ್ಮ ಗೌಡರ, ಮಕ್ಕಳಾದ ಅರುಣಕುಮಾರ, ಅಶ್ವಿನಿ, ಬಸಮ್ಮ, ಹುಲ್ಲನಗೌಡ, ಮೃತನ ತಾಯಿ ಯಲ್ಲವ್ವ ಗೌಡರ, ಸಹೋದರ ಲಕ್ಕಪ್ಪ ಗೌಡರ ಇದ್ದರು.