ಸಿದ್ದು ಸರ್ಕಾರ ಅಸ್ಥಿರಕ್ಕೆ ವಿಪಕ್ಷಗಳ ಕುತಂತ್ರ ಖಂಡಿಸಿ ನಾಳೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ: ಎಂ.ಎನ್.ಮದರಿ

ಸಿದ್ದು ಸರ್ಕಾರ ಅಸ್ಥಿರಕ್ಕೆ ವಿಪಕ್ಷಗಳ ಕುತಂತ್ರ ಖಂಡಿಸಿ ನಾಳೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ: ಎಂ.ಎನ್.ಮದರಿ


ಮುದ್ದೇಬಿಹಾಳ : ಮುಡಾ ಹಗರಣ ಹಿನ್ನೆಲೆ ಸಿಎಂ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಹೊರಡಿಸಿರುವ ಶೋಕಾಸ್ ನೋಟಿಸ್‌ನ್ನು ಖಂಡಿಸಿ ನೋಟಿಸ್‌ನ್ನು ಹಿಂಪಡೆಯುವಂತೆ ಆಗ್ರಹಿಸಿ ಅಹಿಂದ ಒಕ್ಕೂಟದ ನೇತೃತ್ವದಲ್ಲಿ ಆ.6ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಹಿಂದ ಒಕ್ಕೂಟದ ಮುಖಂಡ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ಹೇಳಿದರು.

ಪಟ್ಟಣದ ಹುಡ್ಕೋದಲ್ಲಿರುವ ಪಲ್ಲವಿ ಹೊಟೇಲ್‌ನಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮುಡಾ ಹಗರಣದಲ್ಲಿ ವಿನಾಕಾರಣ ಸಿದ್ಧರಾಮಯ್ಯನವರ ಹೆಸರು ಎಳೆದು ತಂದು ಅವರಿಗೆ ಕಪ್ಪು ಮಸಿ ಬಳಿಯಲು ಯತ್ನಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಬಿಜೆಪಿಯ ಏಜೆಂಟ ಆಗಿ ಅಬ್ರಾಹಂ ವರ್ತಿಸುತ್ತಿದ್ದಾರೆ. ಸಿದ್ಧರಾಮಯ್ಯ ವರ್ಚಸ್ಸು ತಾಳದೇ ಬಿಜೆಪಿಗರು ಕುತಂತ್ರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನಾದರೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಲ್ಲಿ ಮತ್ತಷ್ಟು ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.

ಬಿಜೆಪಿ-ಜೆಡಿಎಸ್ ಪಕ್ಷದ ನಾಯಕರು ಪಾದಯಾತ್ರೆ ನಡೆಸುತ್ತಿರುವುದು ಅಹಿಂದ ವರ್ಗದ ನಾಯಕರಾಗಿರುವ ಸಿಎಂ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ಹುನ್ನಾರ ನಡೆಸಿದ್ದಾರೆ. ರಾಜ್ಯಪಾಲರ ಸಂವಿಧಾನ ಬಾಹಿರ ನಡೆಯನ್ನು ಖಂಡಿಸಿ ಆ.6 ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟçಪತಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದು ದೂರಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ ಮಾತನಾಡಿ, ಚುನಾವಣೆಯಲ್ಲಿ ಬಹುಮತದಿಂದ ಸರ್ಕಾರವನ್ನು ಇಳಿಸಬೇಕೇ ಹೊರತು ರಾಜ್ಯಪಾಲರ ನೋಟಿಸ್‌ನಿಂದಲ್ಲ. ಆದರೆ ಬಹುಮತವಿರುವ ಸಿದ್ದರಾಮಯ್ಯನವರ ಸರ್ಕಾರವನ್ನು ಅಸ್ಥಿರಗೊಳಿಸಲು ಸಿಎಂಗೆ ನೋಟಿಸ ಕೊಡುವುದರ ಹಿಂದೆ ಬಿಜೆಪಿ, ಜೆಡಿಎಸ್ ಪಕ್ಷದ ಪಿತೂರಿ ಕೆಲಸ ಮಾಡುತ್ತಿದೆ. ಸಿದ್ಧರಾಮಯ್ಯನವರ ರಾಜಕೀಯ ಜೀವನದಲ್ಲಿ ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ, ಸಿಎಂ ಆಗಿರುವ ಕಾಲದಲ್ಲಿ ಅಧಿಕಾರ ದುರುಪಯೋಗ, ಹಗರಣಗಳು ನಡೆದಿರುವ ನಿದರ್ಶನಗಳಿಲ್ಲ. ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ನಿಷ್ಕಳಂಕ ರಾಜಕಾರಣಿಯಾಗಿದ್ದಾರೆ ಎಂದರು.

ಅಹಿಂದ ಮುಖಂಡ ವಾಯ್.ಎಚ್.ವಿಜಯಕರ್ ಮಾತನಾಡಿ, ಹಿಂದೆ ಎಸ್.ಆರ್.ಬೊಮ್ಮಾಯಿ ಇದೇ ರೀತಿ ರಾಜಭವನದ ಕಿರುಕುಳ ನಡೆದು ರಾಜೀನಾಮೆ ಕೊಡಬೇಕಾಯಿತು. ಸರ್ವೋಚ್ಚ ನ್ಯಾಯಾಲಯ ರಾಜಭವನಕ್ಕಿಂತ ಶಾಸನಸಭೆ ಸರ್ವೋಚ್ಛ ಎಂದು ತೀರ್ಪು ನೀಡಿತ್ತು. ಪ್ರಜಾಪ್ರಭುತ್ವದಲ್ಲಿ ಶಾಸನಸಭೆ ಸಂವಿಧಾನ ಬದ್ಧವಾಗಿ ಸರ್ವೋಚ್ಚ. ಶಾಸನ ಸಭೆಯಲ್ಲಿ ವಿಶೇಷ ಅಧಿವೇಶನವನ್ನು ನಡೆಸಿ ಮುಖ್ಯಮಂತ್ರಿಗಳ ಪಾತ್ರದ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಬಹುದಾಗಿತ್ತು. ಆದರೆ ವಿಧಾನಸೌಧದಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ಕಾಲಹರಣ ಮಾಡಿ ಹಗಲು-ರಾತ್ರಿ ಧರಣಿ ಮಾಡಿ ತಾಳ, ತಂಬೂರಿಯನ್ನು ಹಿಡಿದು ನರ್ತನ ಮಾಡಿ ಸದನದ ಗೌರವವನ್ನು ಹಾಳು ಮಾಡಿ ಚರ್ಚೆ ಇಲ್ಲದೆ ಒಂದು ದಿನ ಮುಂಚಿತವಾಗಿಯೇ ಸದನವನ್ನು ಮುಂದೂಡಬೇಕಾಯಿತು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಹಿಂದ ಮುಖಂಡರಾದ ಜಿಪಂ ಮಾಜಿ ಸದಸ್ಯ ಬಿ.ಎಸ್.ಶಿರೋಳ, ದಾದಾ ಎತ್ತಿನಮನಿ, ಬಾಬಾ ಯಕೀನ್, ಪುರಸಭೆ ನಾಮನಿರ್ದೇಶಿತ ಸದಸ್ಯ ಸಂತೋಷ ನಾಯ್ಕೋಡಿ, ಸಂಗಣ್ಣ ಮೇಲಿನಮನಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಹಣಮಂತ ಮೇಟಿ, ಮಹಾದೇವ ಪೂಜಾರಿ, ಮುನ್ನಾ ಸಗರ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಕೆ.ಹಳೇಮನಿ ಇದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಡಿಸಿಜಿ ಕನ್ನಡ Facebook, Dailyhunt, ShareChat, Twitter ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Latest News

ಕೃಷಿ ಇಲಾಖೆಯಲ್ಲೇ ಉಳಿದ ಅಧ್ಯಕ್ಷ ಸ್ಥಾನ: ಅರವಿಂದ ಹೂಗಾರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ .

ಕೃಷಿ ಇಲಾಖೆಯಲ್ಲೇ ಉಳಿದ ಅಧ್ಯಕ್ಷ ಸ್ಥಾನ: ಅರವಿಂದ ಹೂಗಾರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ .

ವಿಶೇಷ ವರದಿ-ಶಂಕರ ಹೆಬ್ಬಾಳ ಮುದ್ದೇಬಿಹಾಳ : ತೀವ್ರ ಕುತೂಹಲ ಕೆರಳಿಸಿದ್ದ ಮುದ್ದೇಬಿಹಾಳ ತಾಲ್ಲೂಕು ರಾಜ್ಯ

ಅಂಗನವಾಡಿ ನೌಕರರಿಂದ ಧರಣಿ ಸತ್ಯಾಗ್ರಹ:ಸಿಡಿಪಿಒ, ಮೇಲ್ವಿಚಾರಕಿ ಅಮಾನತಿಗೆ ಆಗ್ರಹಿಸಿ ಧರಣಿ

ಅಂಗನವಾಡಿ ನೌಕರರಿಂದ ಧರಣಿ ಸತ್ಯಾಗ್ರಹ:ಸಿಡಿಪಿಒ, ಮೇಲ್ವಿಚಾರಕಿ ಅಮಾನತಿಗೆ ಆಗ್ರಹಿಸಿ ಧರಣಿ

ಮುದ್ದೇಬಿಹಾಳ : ಪಟ್ಟಣದ ಪಿಲೇಕೆಮ್ಮ ನಗರದ ಅಂಗನವಾಡಿ ಕೇಂದ್ರ ಸಂಖ್ಯೆ 1 ಕಾರ್ಯಕರ್ತೆ ಶಾಂತಾ

ಮುದ್ದೇಬಿಹಾಳದಲ್ಲಿ ಪ್ರತಿಭಟನಾ ರ‍್ಯಾಲಿ : ವಕ್ಫ್ ಕಾಯ್ದೆ ರದ್ದುಗೊಳಿಸಲು ವಿ.ಎಚ್.ಪಿ, ಬಜರಂಗ ದಳ ಆಗ್ರಹ

ಮುದ್ದೇಬಿಹಾಳದಲ್ಲಿ ಪ್ರತಿಭಟನಾ ರ‍್ಯಾಲಿ : ವಕ್ಫ್ ಕಾಯ್ದೆ ರದ್ದುಗೊಳಿಸಲು ವಿ.ಎಚ್.ಪಿ, ಬಜರಂಗ ದಳ ಆಗ್ರಹ

ಮುದ್ದೇಬಿಹಾಳ : ವಕ್ಭ್ ಕಾಯ್ದೆ ರದ್ದುಗೊಳಿಸಿ ರೈತರ ಜಮೀನುಗಳಲ್ಲಿ ವಕ್ಭ್ ಹೆಸರು ಕಡಿಮೆ ಮಾಡಿ

BPL Ration Cardಗೆ ಇ-ಶ್ರಮ ಕಾರ್ಡ್ ಇದ್ದವರು ಅರ್ಹರು

BPL Ration Cardಗೆ ಇ-ಶ್ರಮ ಕಾರ್ಡ್ ಇದ್ದವರು ಅರ್ಹರು

E-Shrama Card: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ BPL ಪಡಿತರ ಚೀಟಿ ಪಡೆಯಲು

ಮುದ್ನಾಳ ಎಲ್.ಟಿ ಮಹಿಳೆ ಕೊಲೆ ಪ್ರಕರಣ-ಆರೋಪಿಗಳಿಬ್ಬರ ಬಂಧನ

ಮುದ್ನಾಳ ಎಲ್.ಟಿ ಮಹಿಳೆ ಕೊಲೆ ಪ್ರಕರಣ-ಆರೋಪಿಗಳಿಬ್ಬರ ಬಂಧನ

ಮುದ್ದೇಬಿಹಾಳ : ತಾಲ್ಲೂಕಿನ ಮುದ್ನಾಳ ಎಲ್.ಟಿಯ ನಿವಾಸಿ ಶೋಭಾ ಲಮಾಣಿ ಕೊಲೆಗೆ ಸಂಬAಧಿಸಿದAತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುದ್ನಾಳ ಗ್ರಾಮದ ಮುತ್ತಪ್ಪ ಶಿವಪ್ಪ ಅಮರಪ್ಪಗೋಳ ಹಾಗೂ ಸುರೇಶ ನಿಂಗಪ್ಪ ದೊಡಮನಿ ಬಂಧಿತ ಆರೋಪಿಗಳು.ಇದರಲ್ಲಿ ಮುತ್ತಪ್ಪ ಅಮರಪ್ಪಗೋಳ ಎಂಬಾತನೇ ಮುಖ್ಯ ಆರೋಪಿಯಾಗಿದ್ದು ಆತನನ್ನು ದಸ್ತಗಿರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್ಪಿ ಪ್ರಸನ್ನ ದೇಸಾಯಿ, ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ,

25 ಸಾವಿರ ರೂ.ಮಾನವೀಯ ನೆರವು: ಕಾರ್ಮಿಕರ ಕುಟುಂಬಕ್ಕೆ ಅಸ್ಕಿ ಫೌಂಡೇಶನ್ ಸಾಂತ್ವನ

25 ಸಾವಿರ ರೂ.ಮಾನವೀಯ ನೆರವು: ಕಾರ್ಮಿಕರ ಕುಟುಂಬಕ್ಕೆ ಅಸ್ಕಿ ಫೌಂಡೇಶನ್ ಸಾಂತ್ವನ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಹೊರವಲಯದ ಅಮರಗೋಳ ಕ್ರಾಸ್‌ನಲ್ಲಿ ಗೂಡ್ಸ್ ವಾಹನ ಪಲ್ಟಿಯಾಗಿ ಸಾವನ್ನಪ್ಪಿದ್ದ ಮಹಿಳೆ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಅಸ್ಕಿ ಫೌಂಡೇಶನ್ ಅಧ್ಯಕ್ಷ , ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸಾಂತ್ವನ ಹೇಳಿದರು. ಇಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರದ ಸಮೀಪದಲ್ಲಿ ಮೃತರ ಕುಟುಂಬಸ್ಥರನ್ನು ಭೇಟಿಯಾಗಿ ಮೃತ ಹವಾಲ್ದಾರ್ ಕುಟುಂಬಕ್ಕೆ 25ಸಾವಿರ ರೂ.ಆರ್ಥಿಕ ಮಾನವೀಯ ನೆರವು ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯದ ಕೂಲಿ ನಂಬಿ ಬೇರೆ ತಾಲ್ಲೂಕಿಗೆ ಉದ್ಯೋಗಕ್ಕೆ