Protest by pro-Dalit coalition

ದಲಿತಪರ ಒಕ್ಕೂಟದಿಂದ ಪ್ರತಿಭಟನೆ, ಶಾಸಕ ಸ್ಥಾನದಿಂದ ಮುನಿರತ್ನ ವಜಾಕ್ಕೆ ಆಗ್ರಹ (ವಿಡಿಯೋ ನೋಡಿ)

ದಲಿತಪರ ಒಕ್ಕೂಟದಿಂದ ಪ್ರತಿಭಟನೆ, ಶಾಸಕ ಸ್ಥಾನದಿಂದ ಮುನಿರತ್ನ ವಜಾಕ್ಕೆ ಆಗ್ರಹ (ವಿಡಿಯೋ ನೋಡಿ)

ಮುದ್ದೇಬಿಹಾಳ : ದಲಿತ ಜನಾಂಗದವರಿಗೆ ಜಾತಿ ನಿಂದನೆ ಮಾಡಿದ ಆಪಾದನೆ ಎದರಿಸುತ್ತಿರುವ ಬಿಜೆಪಿಯ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂಬುದು ಸೇರಿದಂತೆ 10 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ತಮಟೆ ಬಾರಿಸುತ್ತಾ ದಲಿತ ಜನಾಂಗದವರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತಾ ತಹಶೀಲ್ದಾರ್ ಕಚೇರಿಗೆ ಆಗಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಮುಖಂಡರಾದ ತಿಪ್ಪಣ್ಣ ದೊಡಮನಿ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ದಲಿತರ ಜಾತಿ ನಿಂದನೆ ಮಾಡಿದ್ದು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಡಿ.ಬಿ.ಮುದೂರ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ತಾರತಮ್ಯ ಎಸಗದೇ ಸರ್ಕಾರದ ಸೌಲಭ್ಯಗಳು ಎಲ್ಲ ದಲಿತ ಜನಾಂಗದವರಿಗೆ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದರು.

ಮುಖಂಡ ಹರೀಶ ನಾಟೀಕಾರ, ಪ್ರಕಾಶ ಚಲವಾದಿ(ಸರೂರ) ಮಾತನಾಡಿ, ಬ.ಬಾಗೇವಾಡಿ ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಅವರು ದಲಿತ ಜನಾಂಗದವರ ಮೇಲೆ ವಿವಿಧ ರೀತಿಯ ದೌರ್ಜನ್ಯದ 21 ಪ್ರಕರಣಗಳು ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯ ಸಿಪಿಐ, ಪಿಎಸ್‌ಐ,ಡಿವೈಎಸ್ಪಿ ಅವರಿಗೆ ಲಂಚದ ರೂಪದಲ್ಲಿ ಹಣವನ್ನು ಪೋನಪೇ ಮೂಲಕ ಮಾಡಿಸಿಕೊಂಡಿದ್ದು ಅದನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಇನ್ನುಳಿದಂತೆ ತಾಳಿಕೋಟಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯ ಸಾವಿಗೆ ಕಾರಣರಾಗಿರುವವರ ಮೇಲೆ ಕ್ರಮ ಜರುಗಿಸಬೇಕು.ಗಂಗಾವತಿ ತಾಲ್ಲೂಕು ಸಂಕನಾಳ, ಬಾದಾಮಿ, ಹುಣಸಗಿ ತಾಲ್ಲೂಕು ಬಪ್ಪರಗಿಯಲ್ಲಿ ದಲಿತ ಜನಾಂಗದವರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳಲ್ಲಿ ಭಾಗಿಯಾದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಮುಖಂಡ ಚೆನ್ನಪ್ಪ ವಿಜಯಕರ್,ಸಿದ್ದು ಕಟ್ಟಿಮನಿ, ದೇವರಾಜ ಹಂಗರಗಿ ಮಾತನಾಡಿದರು.

ಗ್ರೇಡ್-2 ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

Protest by pro-Dalit coalition

ಪ್ರತಿಭಟನೆಯಲ್ಲಿ ದೌರ್ಜನ್ಯ ತಡೆ ಸಮಿತಿ ಸದಸ್ಯ ಮಲ್ಲು ತಳವಾರ, ಮುಖಂಡರಾದ ಪರಶುರಾಮ ನಾಲತವಾಡ, ಪ್ರಶಾಂತ ಕಾಳೆ, ಪರಶುರಾಮ ಮುರಾಳ, ಬಸವರಾಜ ಸರೂರ, ಭಗವಂತ ಕಬಾಡೆ,ಬಲಭೀಮ ನಾಯ್ಕಮಕ್ಕಳ, ಮಹೆಬೂಬ ಕುಂಟೋಜಿ, ರಾಮಣ್ಣ ರಾಜನಾಳ, ಮುತ್ತು ಚಲವಾದಿ, ಪ್ರಚಂಡಪ್ಪ ಚಲವಾದಿ, ಆನಂದ ಮುದೂರು, ಪುರಸಭೆ ಸದಸ್ಯ ಶಿವು ಶಿವಪೂರ, ಮಂಜುನಾಥ ಕಟ್ಟಿಮನಿ ಪಾಲ್ಗೊಂಡಿದ್ದರು.

Latest News

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ:                       ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಪ್ರಥಮ ಬಾರಿಗೆ ಲಿಂಗಸ್ಗೂರಿನಲ್ಲಿ ಆಯೋಜನೆ: ಜ.11 ರಂದು ಆಕ್ಸಫರ್ಡ್ ಪಾಟೀಲ್ಸ್ ಮಾಸ್ಟರ್ ಮೈಂಡ್ ಅವಾರ್ಡ್

ಮುದ್ದೇಬಿಹಾಳ : ಇದೇ ಪ್ರಥಮ ಬಾರಿಗೆ ಲಿಂಗಸುಗೂರಿನಲ್ಲಿ ಜ.11 ರಂದು ನಾಗರಬೆಟ್ಟ ಆಕ್ಸಫರ್ಡ್ ಪಾಟೀಲ್ಸ್

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಕೃಷಿ ಭಾಗ್ಯ ಯೋಜನೆ : ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನ

ಮುದ್ದೇಬಿಹಾಳ : ಸನ್ 2025-26ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ರೈತರು ಹೊಲಗಳಲ್ಲಿ ಕೃಷಿ

ಮುದ್ದೇಬಿಹಾಳ : ಜ.6 ರಂದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಮುದ್ದೇಬಿಹಾಳ : ಜ.6 ರಂದು ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಮುದ್ದೇಬಿಹಾಳ : ತಾಲ್ಲೂಕಿನ 220-110ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಬಸರಕೋಡದಿಂದ ಹಾಲಿ ಇರುವ 110

ಕೆಕೆಆರ್‌ಟಿಸಿ ನೂತನ ಘಟಕ ವ್ಯವಸ್ಥಾಪಕರಾಗಿ ಅಶೋಕಕುಮಾರ ಭೋವಿ ಅಧಿಕಾರ ಸ್ವೀಕಾರ

ಕೆಕೆಆರ್‌ಟಿಸಿ ನೂತನ ಘಟಕ ವ್ಯವಸ್ಥಾಪಕರಾಗಿ ಅಶೋಕಕುಮಾರ ಭೋವಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮುದ್ದೇಬಿಹಾಳ ಘಟಕಕ್ಕೆ

ಬನದೇವಿ ನಿನ್ನ ಪಾದಕ ಶಂಭುಕೋ :                                   ಭಕ್ತರ ಜಯಘೋಷದ ಮಧ್ಯೆ ಬನಶಂಕರಿ ದೇವಿ ರಥೋತ್ಸವ

ಬನದೇವಿ ನಿನ್ನ ಪಾದಕ ಶಂಭುಕೋ : ಭಕ್ತರ ಜಯಘೋಷದ ಮಧ್ಯೆ ಬನಶಂಕರಿ ದೇವಿ ರಥೋತ್ಸವ

ಮುದ್ದೇಬಿಹಾಳ : ಪಟ್ಟಣದ ಶ್ರೀ ಬನಶಂಕರಿ ದೇವಿ ರಥೋತ್ಸವ ಶನಿವಾರ ಸಾವಿರಾರು ಭಕ್ತಸಮೂಹದ ಜಯಘೋಷಗಳ ಮಧ್ಯೆ ವೈಭವದಿಂದ ಜರುಗಿತು. ಶನಿವಾರ ಬೆಳಗ್ಗೆ ದೇವಿಗೆ ಮಹಾರುದ್ರಾಭಿಷೇಕ, ಬೆಳಗಿನ ಜಾವ ಚಂಡಿ ಹವನ ನಡೆಸಲಾಯಿತು.ದೇವಿಯ ರಥದ ಕಳಸವು ಶಂಕರಪ್ಪ ಗುಡ್ಡದ ಅವರ ಮನೆಯಿಂದ ಹೊರಟು ಕಾಳಿಕಾದೇವಿ ಗಂಗಸ್ಥಳಕ್ಕೆ ತೆರಳಿ ಮರಳಿ ತು.ಸಂಜೆ ಶಿರೋಳ ಗ್ರಾಮದಿಂದ ರಥೋತ್ಸವದ ಹಗ್ಗದ ಮಿಣಿ(ಹಗ್ಗ)ದ ಮೆರವಣಿಗೆ ಆಗಮಿಸಿತು. ಸಂಜೆ 6.25ಕ್ಕೆ ದೇವಿಯ ಮಹಾರಥೋತ್ಸವ ಸಸಾವಿರಾರು ಭಕ್ತರ ಜಯಘೋಷಗಳ ಮಧ್ಯೆ

ಶ್ರಮಿಕರಿಗಾಗಿ ಗ್ರಾಮ ವ್ಯಾಪ್ತಿಗೆ ವಿಸ್ತಿರಿಸಿದ- ನೆರವು ಸಂಸ್ಥೆ.

ಯಾದಗಿರಿ : ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಅಶ್ವಥ್ ಟಿ ಮರಿಗೌಡ ಅಣ್ಣ ರವರ ಆದೇಶದ ಮೇರೆಗೆ ಇಂದು ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಹತ್ತಿಕುಣಿ ಮತ್ತು ತಾಲೂಕು ಅಧ್ಯಕ್ಷರು ವೀರೇಶ್ ಗಣಪುರ್ ನೇತೃತ್ವದಲ್ಲಿ ತಾಲೂಕಿನ ಮಲಾರ್ ಗ್ರಾಮದಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮಲಾರ್ ಗ್ರಾಮ ಘಟಕದ ನೂತನ ಅಧ್ಯಕ್ಷರಾಗಿ ವಿಜಯ್ ಮತ್ತು ಗೌರವಾಧ್ಯಕ್ಷರಾಗಿ ಗೋಪಾಲ್, ಪ್ರಧಾನ ಕಾರ್ಯದರ್ಶಿಯಾಗಿ ಈರಪ್ಪ, ಸಂಘಟನೆ ಕಾರ್ಯದರ್ಶಿಯಾಗಿ