ಮುದ್ದೇಬಿಹಾಳ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ,ಔದ್ಯೋಗಿಕ ಚಟುವಟಿಕೆಗಳಿಗೆ ನೆರವು ನೀಡುವ ಮೂಲಕ ಜನಮನ್ನಣೆ ಪಡೆದುಕೊಂಡಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸಂತೋಷಕುಮಾರ ರೈ ಹೇಳಿದರು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ನಿಂದ ಮಂಗಳವಾರ ಕಾರ್ಯನಿರತ ಪತ್ರಕರ್ತರಿಗೆ ಸಿರಿ ಕಿಟ್‌ಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಒಂದು ಕೆರೆ ಪುನಶ್ಚೇತನ, ಸುಜ್ಞಾನ ನಿಧಿ ಯೋಜನೆಯಡಿ 214 ವಿದ್ಯಾರ್ಥಿಗಳಿಗೆ, ಜ್ಞಾನ ದೀಪ ಶಿಕ್ಷಕರ ಸಂಖ್ಯೆ, ಮಾಶಾಸನ, ದೇವಸ್ಥಾನಗಳಿಗೆ ಅನುದಾನ, ವಾತ್ಸಲ್ಯ ಮನೆ ರಚನೆ,ಶಾಲೆಗಳಿಗೆ ಡೆಸ್ಕ್ ವಿತರಣೆ, ಜನಮಂಗಲ ಸಲಕರಣೆಗಳ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆಯ ಪೂಜ್ಯರಾದ ವೀರೇಂದ್ರ ಹೆಗ್ಗಡೆ ಅವರು ಕೈಗೊಂಡಿದ್ದಾರೆ ಎಂದರು.
ಹಿರಿಯ ಪತ್ರಕರ್ತರಾದ ಡಿ.ಬಿ.ವಡವಡಗಿ, ಶಂಕರ ಹೆಬ್ಬಾಳ, ಪರಶುರಾಮ ಕೊಣ್ಣೂರ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ನಿಜವಾದ ಅರ್ಥದಲ್ಲಿ ಗ್ರಾಮಗಳ ಸಬಲೀಕರಣದಲ್ಲಿ ತೊಡಗಿಕೊಂಡಿದೆ ಎಂದರು.
ಇದೇ ಸಮಯದಲ್ಲಿ ಕಾರ್ಯನಿರತ ಪತ್ರಕರ್ತರುಗಳಿಗೆ ಸಂಸ್ಥೆಯಿAದ ಸಿರಿ ಕಿಟ್‌ಗಳನ್ನು ವಿತರಿಸಲಾಯಿತು.ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ನಾಗೇಶ ಎನ್.ಪಿ., ಪತ್ರಕರ್ತರಾದ ಗುಲಾಮಮೊಹ್ಮದ ದಫೇದಾರ, ಚೇತನ ಶಿವಶಿಂಪಿ,ನಾರಾಯಣ ಮಾಯಾಚಾರಿ,ಮುತ್ತು ವಡವಡಗಿ,ಲಾಡ್ಲೇಮಶ್ಯಾಕ ನದಾಫ, ಬಸವರಾಜ ಕುಂಬಾರ, ಸಾಗರ ಉಕ್ಕಲಿ, ಮಾರುತಿ ಹಿಪ್ಪರಗಿ, ಅನೀಲ ತೇಲಂಗಿ, ರವೀಂದ್ರ ನಂದೆಪ್ಪನವರ, ಹಣಮಂತ ನಲವಡೆ, ಮುತ್ತು ಕನ್ನೂರ, ವಿನಯ ಕಡ್ಲಿಮಟ್ಟಿ ಮೊದಲಾದವರು ಇದ್ದರು.