ಮುದ್ದೇಬಿಹಾಳ : ಕೃಷಿಯೊಂದಿಗೆ ಉಪ ಕಸುಬುಗಳನ್ನು ಕೈಗೊಂಡಾಗ ಕೃಷಿಯಲ್ಲಿ ಲಾಭ ಗಳಿಸಲು ಸಾಧ್ಯವಿದೆ ಎಂದು ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ವೆಂಕನಗೌಡ ಪಾಟೀಲ ಹೇಳಿದರು.
ಪಟ್ಟಣದ ಕೃಷಿ ಇಲಾಖೆಯ ಸಭಾಭವನದಲ್ಲಿ ಮಂಗಳವಾರ ತಾಲೂಕು ಕೃಷಿಕ ಸಮಾಜ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ನಡೆದ ರೈತ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಮಹಾಂತಗೌಡ ಎಸ್. ಕಾಶಿನಕುಂಟಿ ಮಾತನಾಡಿ,ಒಕ್ಕಲುತನದಲ್ಲಿ ಸಾವಯವ ಕೃಷಿಯನ್ನು ಹೆಚ್ಚು ಕೈಗೊಂಡರೆ ಉತ್ತಮ ಫಸಲು ಬರಲು ಸಾಧ್ಯವಿದೆ ಎಂದರು.
ಕೃಷಿಕ ಸಮಾಜದ ಉಪಾಧ್ಯಕ್ಷ ಸಂಗನಗೌಡ ಬಿರಾದಾರ, ಪ್ರ.ಕಾರ್ಯದರ್ಶಿ ಅಮಾತಿಗೌಡ, ಖಜಾಂಚಿ ಸಂಗಮ ಶೆಟ್ಟರ, ಸದಸ್ಯರಾದ ಸೋಮನಗೌಡ ಬಿರಾದಾರ, ಲೋಕನಾಥ ಲಮಾಣಿ,ಅರವಿಂದ ಕಾಶಿನಕುಂಟಿ,ಕೃಷಿ ಅಧಿಕಾರಿಗಳಾದ ಸೋಮನಗೌಡ ಬಿರಾದಾರ, ರಾಜೇಶ್ವರಿ ನಾಡಗೌಡ,ಮುಬಿನಾ, ಗೋವಿಂದರೆಡ್ಡಿ ಮೆದಕಿನಾಳ ಇದ್ದರು.ಶ್ರೇಷ್ಠ ಕೃಷಿಕರನ್ನು ಇಲಾಖೆಯಿಂದ ಸನ್ಮಾನಿಸಲಾಯಿತು.







