ಮುದ್ದೇಬಿಹಾಳ : ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಹಿಂದೂ ಮುಸ್ಲಿಂ ಬಾಂಧವರ ಮಧ್ಯೆ ಸೌಹಾರ್ದತೆಯನ್ನು ಬೆಸೆಯುವ ಹಬ್ಬ ರಂಜಾನ್ ಆಗಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.
ಪಟ್ಟಣದ ಮಹೆಬೂಬ ನಗರದ ಮಕ್ಕಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸೋಮವಾರ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಸ್ಕಿ ಫೌಂಡೇಶನ್ದಿAದ ನಿರಂತರವಾಗಿ ಇಫ್ತಾರಕೂಟಗಳನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ.ಈ ಬಾರಿ ಕ್ಷೇತ್ರದ ಎಂಟು ಕಡೆಗಳಲ್ಲಿ ಇಫ್ತಾರಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಹಸಿವಿನಿAದ ಬಳಲುತ್ತಿರುವನ ಎದುರಿಗೆ ಹೊಟ್ಟೆ ತುಂಬ ಊಟ ಮಾಡುವವನನ್ನು ಪ್ರವಾದಿ ಮಹ್ಮದ ಪೈಗಂಬರ್ ಅವರು ಮೆಚ್ಚುವುದಿಲ್ಲ.ಶಾಂತಿ ಮತ್ತು ಮಾನವೀಯತೆ ಸಂದೇಶ ನೀಡಿದ್ದಾರೆ.ಸೌಹಾರ್ದತೆ,ಸ್ನೇಹಪರತೆಯನ್ನು ನೆರೆಹೊರೆಯುವರೊಡನೆ ಹೊಂದಬೇಕು ಎಂದು ಖುರಾನ್ದಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ್ ಮಾತನಾಡಿ, ಹಬ್ಬಗಳು ಬಾಂಧವ್ಯವನ್ನು ಬೆಸೆಯುತ್ತವೆ.ಅಸ್ಕಿ ಫೌಂಡೇಶನ್ದಿAದ ಕೈಗೊಳ್ಳುತ್ತಿರುವ ಕಾರ್ಯಗಳು ಶ್ಲಾಘನೀಯವಾಗಿವೆ ಎಂದರು.
ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಮುಖಂಡರಾದ ರಾಜು ಕರಡ್ಡಿ,ಬಣಜಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಅಶೋಕ ಚಟ್ಟೇರ,ಗುಲಾಮೊಹ್ಮದ ದಫೇದಾರ,ಜಬ್ಬಾರ ಗೋಲಂದಾಜ,ಹುಸೇನ್ ಮುಲ್ಲಾ, ಸದ್ದಾಂ ಕುಂಟೋಜಿ,ಸAಗಣ್ಣ ಮೇಲಿನಮನಿ, ಬಾಬಾಪಟೇಲ್ ಬಿರಾದಾರ, ಸಿಕಂದರ ಜಾನ್ವೇಕರ,ಟಿ.ವಿಜಯಭಾಸ್ಕರ,ಅಮರೇಶ ಗೂಳಿ, ಸದು ಮಠ, ಜೆ.ಡಿ.ಮುಲ್ಲಾ, ಎ.ಆರ್.ಮುಲ್ಲಾ ಸೇರಿದಂತೆ ಮೌಲಾನಾಗಳು,ಅಸ್ಕಿ ಫೌಂಡೇಷನ್ ಪದಾಧಿಕಾರಿಗಳು ಇದ್ದರು.







