Recruitment of 32,000 Posts in Railway Department

RRB GROUP D RECRUITMENT ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ನೇಮಕಾತಿ

RRB GROUP D RECRUITMENT ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ನೇಮಕಾತಿ

RRB GROUP D RECRUITMENT: ಭಾರತೀಯ ರೈಲ್ವೆ ಇಲಾಖೆಯು ಬರೋಬ್ಬರಿ 32 ಸಾವಿರ ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ.

ಈ ಕುರಿತು ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.

Join Our Telegram: https://t.me/dcgkannada

ಆರಂಭಿಕ ವೇತನವು 18000 ರೂ. ಇರುತ್ತದೆ. ಸದ್ಯದಲ್ಲಿಯೇ ಅರ್ಜಿ ಸ್ವೀಕೃತಿಯು ಆರಂಭವಾಗಲಿದೆ. ನಂತರ ಪರೀಕ್ಷೆ ದಿನಾಂಕವನ್ನು ಬಿಡುಗಡೆ ಮಾಡಲಾಗುತ್ತದೆ.

2024 ನೇ ಸಾಲಿನ, 8ನೇ ನೀರ ನೇಮಕಾತಿ ಅದಿ ಸೂಚನೆಯನ್ನು ಭಾರತೀಯ ರೈಲ್ವೆ ಇಲಾಖೆಯು ಬಿಡುಗಡೆ ಮಾಡಿದೆ. ಈಗ ಕೇವಲ ಶಾರ್ಟ್ ನೋಟಿಫಿಕೇಶನ್ ಮಾತ್ರ ಬಿಡುಗಡೆ ಮಾಡಿದೆ. 2025 ಜನವರಿಯಲ್ಲಿ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿ ಅರ್ಜಿ ಸ್ವೀಕೃತಿಯನ್ನು ಆರಂಭಿಸಲಿದೆ. ಒಟ್ಟು 32,000 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಕೇವಲ SSLC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನೀವು ಕೇಂದ್ರ ಸರ್ಕಾರ ಉದ್ಯೋಗವನ್ನು ಬಯಸಿ, ಸುಲಭ ಪರೀಕ್ಷೆ ವಿಧಾನ ಹಾಗೂ ಆಕರ್ಷಕ ಸಂಬಳದ ಉದ್ಯೋಗವನ್ನು ನೋಡುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಲಿದೆ. ಜನವರಿ 2025 ತಿಂಗಳಿನಿಂದ ಅರ್ಜಿ ಸ್ವೀಕೃತಿಯು ಆರಂಭವಾಗಲಿದೆ.

ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು

ಇಲಾಖೆಯ ಹೆಸರು: ಭಾರತೀಯ ರೈಲ್ವೆ ಇಲಾಖೆ (Indian Railway)

ಹುದ್ದೆಯ ಹೆಸರು: ವಿವಿಧ ಗ್ರೂಪ್ ಡಿ ಹುದ್ದೆಗಳು

ಖಾಲಿ ಇರುವ ಹುದ್ದೆಗಳು: 32,000

ಉದ್ಯೋಗ ಸ್ಥಳ : All India

ವೇತನ ಶ್ರೇಣಿ: ನಿಯಮದ ಪ್ರಕಾರ

ಅರ್ಜಿ ಸಲ್ಲಿಸುವ ಬಗೆ: Online

ಶೈಕ್ಷಣಿಕ ಅರ್ಹತೆ: ಭಾರತೀಯ ರೈಲ್ವೆ ಇಲಾಖೆಯು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ SSLC ಅಥವಾ ITI ಪದವಿಯನ್ನು ಪಡೆದಿರಬೇಕು.

ವಯಸ್ಸಿನ ಮಿತಿ: ನಿಯಮದ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 36 ವರ್ಷ ವಯೋಮಿತಿಯನ್ನು ಮೀರಿರಬಾರದು.

ಖಾಲಿ ಇರುವ ಹುದ್ದೆಗಳು: ರೈಲ್ವೆ ಇಲಾಖೆಯು ಹೊರಡಿಸಿದ ಅಧಿಸೂಚನೆಯ ಪ್ರಕಾರ ಒಟ್ಟು 32 ಸಾವಿರ ಗ್ರೂಪ್ ಡಿ ಹುದ್ದೆಗಳು ಖಾಲಿ ಇದ್ದು ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ, ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಖಾಲಿ ಇರುವ ಹುದ್ದೆಗಳ ವಿವರಗಳು(Railway Group D Posts List)

ಟ್ರ್ಯಾಕ್ ಮೇಂಟೆನರ್ ಗ್ರೇಡ್‌ IV
ತಾಂತ್ರಿಕ ವಿಭಾಗದ ಸಹಾಯಕ
ಅಸಿಸ್ಟಂಟ್‌ ಪಾಯಿಂಟ್ಸ್‌ಮನ್
ಟ್ರ್ಯಾಕ್ ಮ್ಯಾನ್
ಅಸಿಸ್ಟೆಂಟ್ ಬ್ರಿಡ್ಜ್
ಇತರೆ ಹಲವು ವಿಭಾಗಗಳ level 1 ಹುದ್ದೆಗಳು
ಕೋವಿಡ್ ಹಿನ್ನೆಲೆಯಲ್ಲಿ ಪ್ರವರ್ಗಗಳ ವಯಸ್ಸಿನ ಮಿತಿಯನ್ನು ಸಡಿಲಿಕ್ಕೆ ಮಾಡಲಾಗಿದೆ ಹೆಚ್ಚಿನ ಮಾಹಿತಿಗೆ ಅಧಿಕೃತ ಅಧಿಸೂಚನೆಯನ್ನು ಓದಿ.

ಪ್ರಮುಖ ದಿನಾಂಕಗಳು:

ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ದಿನಾಂಕ 24/12/2024
ಅರ್ಜಿ ಸಲ್ಲಿಸಲು ಆರಂಭವಾಗುವ ದಿನಾಂಕ 23/01/2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22/02/2025
ನೇಮಕ ಪರೀಕ್ಷೆ ದಿನಾಂಕ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಪ್ರವರ್ಗಗಳ ಆಧಾರದ ಮೇಲೆ ಅರ್ಜಿ ಶುಲ್ಕವನ್ನು ಪಾವತಿಸಬೇಕು,

ಸಾಮಾನ್ಯ ಅರ್ಹತೆ, OBC, ಆರ್ಥಿಕವಾಗಿ ಹಿಂದುಳಿದ ಕೆಟಗರಿಯವರಿಗೆ ರೂ.500. (Rs.400 ರೀಫಂಡ್‌ ಮಾಡಲಾಗುತ್ತದೆ).
ವಿಶೇಷ ಚೇತನರು, ಮಹಿಳಾ, ತೃತೀಯ ಲಿಂಗಿಗಳು, ಮಾಜಿ ಸೈನಿಕರು, SC, ST ಅಭ್ಯರ್ಥಿಗಳಿಗೆ ಶುಲ್ಕ ರೂ.250. ಬ್ಯಾಂಕ್‌ ಚಾರ್ಜ್‌ ಹೊರತುಪಡಿಸಿ, ಉಳಿದ ಹಣ ರೀಫಂಡ್‌ ಮಾಡಲಾಗುತ್ತದೆ.

ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

www.rrbbnc.gov.in

ಮೊದಲು ಮೇಲೆ ಕಾಣಿಸಿದ RRB ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ನಂತರ ಅರ್ಜಿ ಸಲ್ಲಿಸುವ ಮುಖಪುಟ ತೆರೆದುಕೊಳ್ಳುತ್ತದೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕವಾದ 22 ಫೆಬ್ರುವರಿ 2025ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು ನಂತರ ಸಲ್ಲಿಸಿದ ಅರ್ಜಿಯನ್ನು ಪರಿಗಣನೆ ಮಾಡಲಾಗುವುದಿಲ್ಲ.
ನಂತರ ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಿ, ಭರ್ತಿ ಮಾಡಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ಜೊತೆಗೆ ಅಭ್ಯರ್ಥಿಯ ಸಹಿ ಮತ್ತು ಹೆಬ್ಬೆರಳಿನ ಥಮ್ ಅನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು (ಅಗತ್ಯವಿದ್ದರೆ ಮಾತ್ರ)
ಎಲ್ಲಾ ದಾಖಲಾತಿಗಳನ್ನು ಭರ್ತಿ ಮಾಡಿದ ನಂತರ ಒಮ್ಮೆ ಪರಿಶೀಲನೆ ಮಾಡಿ ಏನಾದರೂ ತಪ್ಪಿದಲ್ಲಿ ಪುನಃ ಸರಿಪಡಿಕೆ ಮಾಡಿ
ಸರಿಪಡಿಸಿದ್ದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು. ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ
ಅಭ್ಯರ್ಥಿಯು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಒಳ್ಳೆಯದು. ಅರ್ಜಿ ಸಲ್ಲಿಸಿದ ನಂತರ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
ಕೊನೆಯಲ್ಲಿ ಅರ್ಜಿ ಸಲ್ಲಿಸಿದ ದಾಖಲಾತಿಗಳನ್ನು ಡೌನ್ಲೋಡ್ ಮಾಡಿಕೊಂಡು ಇಟ್ಟುಕೊಳ್ಳಿ.

ಪರೀಕ್ಷೆಯ ಸಮಯದಲ್ಲಿ ನಿಮಗೆ ಇದು ಸಹಕಾರಿಯಾಗಬಹುದು.
ಅಭ್ಯರ್ಥಿಯು ಮೇಲೆ ನೀಡಲಾದ ಎಲ್ಲಾ ವಿಧಾನಗಳನ್ನು ಸರಿಯಾಗಿ ಪಾಲಿಸುವ ಮುಖಾಂತರ, ರೈಲ್ವೆ ಇಲಾಖೆಯ ಗ್ರೂಪ್ ಡಿ ಹುದ್ದೆಗಳಿಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಆಯ್ಕೆಯ ವಿಧಾನ:
ರೈಲ್ವೆ ಗ್ರೂಪ್ ಡಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು, ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳು ನಡೆಸುವ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಕೇವಲ ಒಂದು ಹಂತ ಅಥವಾ ಎರಡು ಹಂತಗಳಲ್ಲಿ ನಡೆಸುವ ಹಕ್ಕನ್ನು ಒಂದಿದೆ, ಗ್ರೂಪ್ ಡಿ ಅಬ್ಯರ್ಥಿಗಳು ಸ್ವಚ್ಛತೆ, ಟ್ರ್ಯಾಕ್ ನಿರ್ವಹಣೆ, ರೈಲ್ವೆ ಮೆಂಟೇನೆನ್ಸ್, ನಿರ್ವಹಣೆ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.

ವೇತನ ಶ್ರೇಣಿ: ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂಪಾಯಿ 18,000 ವೆತನವನ್ನು ನೀಡಲಾಗುತ್ತದೆ.

ಅರ್ಹ ಅಭ್ಯರ್ಥಿಗಳು ರೈಲ್ವೆ ಗ್ರೂಪ್ ಡಿ ಗಳಿಗೆ ಅರ್ಜಿ ಸಲ್ಲಿಸಲು ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ನೇಮಕ ಪರೀಕ್ಷೆ ದಿನಾಂಕ ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.

ಇದನ್ನೂ ಓದಿ: https://t.me/dcgkannada

Latest News

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ

ಧಾರವಾಡ, ಜುಲೈ 1: ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವಾರು ಯೋಜನೆ,

ಆರ್.ಎಂ.ಎಸ್.ಎ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಆರ್.ಎಂ.ಎಸ್.ಎ ಶಾಲೆಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಯ ಸನ್

ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

ಜೆಡಿಎಸ್ ಪಕ್ಷದಿಂದ ಬೃಹತ್ ಪ್ರತಿಭಟನೆ : ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಮನವಿ

ಮುದ್ದೇಬಿಹಾಳ : ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು ಕೂಡಲೇ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕೆಂದು ಆಗ್ರಹಿಸಿ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ವರದಿಗಾರರಾದ ಅಮರೇಶ ನಾಗೂರ ಆಯ್ಕೆ

ಹುನಗುಂದ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಅಮರೇಶ ನಾಗೂರ ಹಾಗೂ ಪ್ರಧಾನ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ ಇದೇ 29 ನೇ ಭಾನುವಾರ ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ದಿ ಗ್ರಾಂಡ್‌ ಕ್ಯಾಸಲ್‌, ಗೇಟ್‌ ಸಂಖ್ಯೆ 6 ರಲ್ಲಿ ಸಂಜೆ 5 ರಿಂದ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯೋಗದಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ವಿಶ್ವದ ಐವರು ಶ್ರೇಷ್ಠ ಯೋಗ ಸಾಧಕರಿಗೆ ಪ್ರಶಸ್ತಿ

ನಾರಾಯಣಪುರ ಅಣೆಕಟ್ಟೆ ನಿಂದ 1,10,000 ಕ್ಯೂಸೆಕ್ ನೀರು ಬಿಡುವ ಸಾಧ್ಯತೆ

ನಾರಾಯಣಪುರ ಅಣೆಕಟ್ಟೆ ನಿಂದ 1,10,000 ಕ್ಯೂಸೆಕ್ ನೀರು ಬಿಡುವ ಸಾಧ್ಯತೆ

ನಾರಾಯಣಪುರ : ಅಣೆಕಟ್ಟಿನ ಪ್ರಸ್ತುತ ನೀರಿನ ಸಂಗ್ರಹವು 80.27% ಇರುತ್ತದೆ. ಕೃಷ್ಣಾ ನದಿಗೆ ಹೊರಹರಿವು 84,445 ಕ್ಯೂಸೆಕ್ ಇರುವದರಿಂದ ಆಣೆಕಟ್ಟಿನ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಹೆಚ್ಚಾಗಲಿದೆ ಎಂದು ಪರಿಗಣಿಸಲಾಗಿದೆ. ನಾರಾಯಣಪುರ ಆಣೆಕಟ್ಟೆಗೆ ಸುಮಾರು 1,10,000 ಕ್ಯೂಸೆಕ್ ಒಳಹರಿವು ಬರುವ ಸಾಧ್ಯತೆಯಿದೆ. ಮದ್ಯಾಹ್ನ 3 ಗಂಟೆ ನಂತರ, ಪ್ರಸ್ತುತ ಇರುವ ಹೊರಹರಿವನ್ನು 84,445 ಕ್ಯೂಸೆಕ್ ರಿಂದ 1,10,000 ಕ್ಯೂಸೆಕ್ ಗೆ ಹಂತ ಹಂತವಾಗಿ ಹೆಚ್ಚಿಸಲಾಗುವುದು