ಮುದ್ದೇಬಿಹಾಳ : ರಾಜ್ಯ ಸರ್ಕಾರ ಆರಂಭಿಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ರೆಡ್ಡಿ ಸಮಾಜದ ಬಾಂಧವರು ಸಮಾಜದ ಸಭೆಯಲ್ಲಿ ಕೈಗೊಳ್ಳಲಾಗಿರುವ ತೀರ್ಮಾನದಂತೆ ಬರೆಯಿಸಬೇಕು ಎಂದು ರೆಡ್ಡಿ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಭಾನುವಾರ ಸಭೆ ಸೇರಿದ್ದ ಸಮಾಜದ ಬಾಂಧವರು ಧರ್ಮ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ರೆಡ್ಡಿ, ಉಪ ಜಾತಿ ಕಾಲಂನಲ್ಲಿ ರೆಡ್ಡಿ(ನಂ.1222) ಎಂದು ಬರೆಯಿಸಬೇಕು ಎಂದು ತೀರ್ಮಾನ ಮಾಡಲಾಗಿದೆ ಎಂದು ರೆಡ್ಡಿ ಸಮಾಜದ ಮುಖಂಡರಾದ ಬಸನಗೌಡ ಪಾಟೀಲ, ಸುರೇಶಗೌಡ ಪಾಟೀಲ ಇಂಗಳಗೇರಿ, ಸಂಗನಗೌಡ ಬಿರಾದಾರ (ಜಿಟಿಸಿ),ರಾಯನಗೌಡ ತಾತರೆಡ್ಡಿ, ರಾಜಶೇಖರ ಕರಡ್ಡಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಸಂಗನಗೌಡ ಪಾಟೀಲ, ಬಸವರಾಜ ಅಂಗಡಗೇರಿ,ಅಶೋಕ ನಾಡಗೌಡ, ನಿಂಗಣ್ಣ ಬಿರಾದಾರ,ಎಚ್.ಎಲ್.ಕರಡ್ಡಿ,ಕಿರಣ ಪಾಟೀಲ, ಸೋಮನಗೌಡ ಬಿರಾದಾರ ಮೊದಲಾದವರು ಇದ್ದರು.