ಮುದ್ದೇಬಿಹಾಳ : ಕಬ್ಬು ಹೇರಿಕೊಂಡು ರಸ್ತೆಯಲ್ಲಿ ಸಾಗಿಸುವಾಗ ಸಂಚಾರಿ ನಿಯಮಗಳನ್ನು ಅನುಸರಿಸಿ ಅಪಘಾತಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಹೇಳಿದರು.
ತಾಲ್ಲೂಕು ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರದಂದು ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಕಬ್ಬು ಸಾಗಾಣಿಕೆ ಮಾಡುವ ವಾಹನಗಳ ಚಾಲಕ ಮತ್ತು ಮಾಲಕರ ಸಭೆಯಲ್ಲಿ ಅವರು ಮಾತನಾಡಿದರು.
ಕಬ್ಬು ಸಾಗಾಣಿಕೆ ಮಾಡುವ ಸಮಯದಲ್ಲಿ ಅನುಸರಿಸಬೇಕಾದ ರಸ್ತೆ ನಿಯಮಗಳ ಬಗ್ಗೆ ತಿಳಿಸಿದರು.ಚಾಲಕರು ರಾತ್ರಿ ವೇಳೆಯಲ್ಲಿ ಚಾಲನೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
ಕಬ್ಬು ಸಾಗಿಸುವ ಸಮಯದಲ್ಲಿ ಫ್ಯಾಕ್ಟರಿ ಆಡಳಿತ ಮಂಡಳಿಯವರು, ಟ್ರಾö್ಯಕ್ಟರ್ ಚಾಲಕ ಮತ್ತು ಮಾಲೀಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನೋಟಿಸ್ ನೀಡಲಾಯಿತು.
ಅಲ್ಲದೇ ಸುಮಾರು 50 ಟ್ರಾö್ಯಕ್ಟರ್‌ಗಳ ಹಿಂಬದಿಯಲ್ಲಿ ರೆಫ್ಲೆಕ್ಟರ್ ಬ್ಯಾನರ್‌ಗಳನ್ನು ಕಟ್ಟಲಾಯಿತು.ರೇಡಿಯಂಗಳನ್ನು ಹಚ್ಚಲಾಯಿತು.ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಮುದ್ದೇಬಿಹಾಳ ಪಿಎಸ್‌ಐ ಸಂಜಯ ತಿಪರೆಡ್ಡಿ, ತಾಳಿಕೋಟಿ ಪಿಎಸ್‌ಐ ರಾಮನಗೌಡ ಸಂಕನಾಳ,ಬಾಲಾಜಿ ಸಕ್ಕರೆ ಕಾರ್ಖಾನೆ ವಿಭಾಗದ ಅಧಿಕಾರಿಗಳು ಇದ್ದರು.