ಮುದ್ದೇಬಿಹಾಳ : ಪಟ್ಟಣದ ವಿದ್ಯಾ ನಗರದಲ್ಲಿರುವ ವಿದ್ಯಾಸ್ಪೂರ್ತಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಶಾಲೆಯ ಅಧ್ಯಕ್ಷ ಬಸಮ್ಮ ಸಿದರಡ್ಡಿ ಧ್ವಜಾರೋಹಣ ಮಾಡಿದರು.ಸಂಸ್ಥಾಪಕರಾದ ರಾಮನಗೌಡ ಸಿದರಡ್ಡಿ, ಕಾರ್ಯದರ್ಶಿಗಳಾದ ಮಹಾಂತೇಶ ಸಿದರಡ್ಡಿ,ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ,ಮಾಜಿ ಸೈನಿಕ ಗೌಡಪ್ಪ ಚವನಬಾವಿ ಇದ್ದರು.
ದೈಹಿಕ ಶಿಕ್ಷಕ ಚನ್ನಬಸು ಬಳವಾಟ ಧ್ವಜವಂದನೆ ಕಾರ್ಯಕ್ರಮ ನಡೆಸಿಕೊಟ್ಟರು.ದೇಶಭಕ್ತರ ವಿಶೇಷ ವೇಷಭೂಷಣಗಳಲ್ಲಿ ಮಕ್ಕಳು ಗಮನ ಸೆಳೆದರು.







