ಮುದ್ದೇಬಿಹಾಳ : ಜನಪ್ರೀಯತೆಯ ಮಧ್ಯೆದಲ್ಲಿ ನಡೆಯುವ ಸನ್ಮಾನಗಳು ಸಹಜವಾಗಿದ್ದು ಅಂತಹ ಸನ್ಮಾನಗಳು ಸಮಾಜದಲ್ಲಿ ಗೌರವ ಹೆಚ್ಚಿಸುತ್ತವೆ ಎಂದು ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಹೇಳಿದರು.
ಪಟ್ಟಣದ ಬೆಂಗಳೂರು ಬೇಕರಿ ಫಂಕ್ಷನ್ ಹಾಲ್ನಲ್ಲಿ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಧಕರ ಸನ್ಮಾನ,ಕ್ಯಾಲೆಂಡರ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವರು ಬೆದರಿಸಿ ಸನ್ಮಾನ ಮಾಡಿಸಿಕೊಳ್ಳುತ್ತಾರೆ.ಇನ್ನು ಕೆಲವರು ಸನ್ಮಾನಕ್ಕೆ ಇಂತಹದ್ದೇ ವಸ್ತು,ಸಾಮಗ್ರಿ ಬೇಕೆಂದು ಬೇಡಿಕೆ ಇರಿಸಿಕೊಂಡು ಸನ್ಮಾನ ಮಾಡಿಸಿಕೊಳ್ಳುತ್ತಾರೆ.ಆದರೆ ಸಮಾಜದಲ್ಲಿ ಎಲ್ಲರ ಮಧ್ಯೆ ನಡೆಯುವ ಸಾಧನೆಗಳ ಪುರಸ್ಕಾರದ ಸನ್ಮಾನಗಳಿಗೆ ಗೌರವ ಜಾಸ್ತಿ.ಅಸ್ಕಿ ಫೌಂಡೇಶನ್ ಸಹಜ ಸನ್ಮಾನದ ಮೂಲಕ ಸಾಧಕರ ಗೌರವವನ್ನು ಹೆಚ್ಚಿಸಿದೆ ಎಂದರು.
ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ ಮಾತನಾಡಿ, ಸಿ.ಬಿ.ಅಸ್ಕಿಯವರದ್ದು ಮತ್ತೊಬ್ಬರ ಖುಷಿಯಲ್ಲಿ ಸಂತಸ ಕಾಣುವ ವ್ಯಕ್ತಿತ್ವ.ಎಲ್ಲರನ್ನು ಕರೆದು ಗೌರವಿಸುವ ಗುಣ ನಿಗರ್ವಿ ವ್ಯಕ್ತಿಯಾಗಿದ್ದಾರೆ ಎಂದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ಜನರ ಪ್ರೀತಿ, ಅಭಿಮಾನವೇ ಫೌಂಡೇಶನ್ ಬೆಳವಣಿಗೆಗೆ ಕಾರಣವಾಗಿದೆ.ಗಳಿಸಿದ್ದರಲ್ಲಿ ಅಲ್ಪವನ್ನು ಸಮಾಜ ಸೇವೆಗಾಗಿ ಮುಡಿಪಾಗಿಟ್ಟರೆ ಭವಿಷ್ಯದಲ್ಲಿ ಒಳ್ಳೆಯ ಕಾರ್ಯಗಳಿಗೆ ಸ್ಫೂರ್ತಿಯಾಗಲಿದೆ. ಕಷ್ಟದ ಸಮಯದಲ್ಲಿ ಅಸ್ಕಿ ಫೌಂಡೇಶನ್ ನೆರವಿಗೆ ಸದಾ ಸಿದ್ಧವಾಗಿದೆ ಎಂದರು.
ಹಸಿರು ತೋರಣ ಗೆಳೆಯರ ಬಳಗದ ಸಂಚಾಲಕ ಮಹಾಬಳೇಶ ಗಡೇದ ಮಾತನಾಡಿ, ಅಸ್ಕಿಯವರು ಸುಕನ್ಯಾ ಸಮೃದ್ಧಿ ಯೋಜನೆಯ ಆರಂಭಿಕ ಕಂತುಗಳನ್ನು ಕಟ್ಟುವುದಕ್ಕಾಗಿ ಹಲವು ವರ್ಷಗಳ ಹಿಂದೆ ಬಡ ಹೆಣ್ಣು ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಾರೆ.ಅಸ್ಕಿಯವರು ಸಹೃದಯವಂತರು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ಆನಂದಗೌಡ ಬಿರಾದಾರ,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ,ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಮರೇಶ ಗೂಳಿ, ಮುಖಂಡ ಉದಯ ರಾಯಚೂರ ಮಾತನಾಡಿದರು.ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಕಾರ್ಯಕ್ರಮದಲ್ಲಿದ್ದರು. ದೀಪರತ್ನಶ್ರೀ ಪ್ರಾರ್ಥಿಸಿದರು.ಶ್ರೀಶೈಲ ಹೂಗಾರ ನಿರೂಪಿಸಿದರು.
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ಆನಂದಗೌಡ ಬಿರಾದಾರ,ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಮರೇಶ ಗೂಳಿ ಅವರನ್ನು ಫೌಂಡೇಶನ್ದಿAದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಸ್ಕಿ ಫೌಂಡೇಶನ್ ಪದಾಧಿಕಾರಿಗಳು, ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು,ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ಪದಾಧಿಕಾರಿಗಳು,ಮನೆಯಲ್ಲಿ ಮಹಾಮನೆ, ಶರಣ ಸಾಹಿತ್ಯ ಪರಿಷತ್,ಕನ್ನಡ ಸಾಹಿತ್ಯ ಪರಿಷತ್, ಆನಂದಗೌಡ ಗೆಳೆಯರ ಬಳಗದ ಸದಸ್ಯರು ಪಾಲ್ಗೊಂಡಿದ್ದರು.





