Respect to SSLC students: Don't fall asleep and study when the exam comes - Kulkarni

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸನ್ಮಾನ:ಪರೀಕ್ಷೆ ಬಂದಾಗಲೇ ನಿದ್ದೆಗೆಟ್ಟು ಓದಬೇಡಿ- ಕುಲಕರ್ಣಿ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸನ್ಮಾನ:ಪರೀಕ್ಷೆ ಬಂದಾಗಲೇ ನಿದ್ದೆಗೆಟ್ಟು ಓದಬೇಡಿ- ಕುಲಕರ್ಣಿ

ಮುದ್ದೇಬಿಹಾಳ : ವಿದ್ಯಾರ್ಥಿಗಳು ಪರೀಕ್ಷೆಗಳು ಬಂದಾಗಲೇ ನಿದ್ದೆಗೆಟ್ಟು ಹಗಲು ರಾತ್ರಿ ಎನ್ನದೇ ಓದಿದರೆ ನಿರೀಕ್ಷಿತ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ರ‍್ಯಾಂಕ್ ಪಡೆದಿರುವ ಆಕ್ಸಫರ್ಡ್ ಪಾಟೀಲ್ಸ್ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಕುಲಕರ್ಣಿ ಹೇಳಿದರು.

ಪಟ್ಟಣದ ಮಾರುತಿ ನಗರದಲ್ಲಿರುವ ಪ್ರತಿಭಾ ಕಿಡ್ಸ್ ಕಿಂಡರ್ ಗಾರ್ಟನ್ ಸ್ಕೂಲ್‌ನಲ್ಲಿ ಭಾನುವಾರ 2025ನೇ ಸಾಲಿನ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿದ್ದೆಗೆಟ್ಟು ಓದಿದರೆ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸ್ನೇಹಿತರೊಂದಿಗೆ ಅಂದಿನ ಪಾಠಗಳನ್ನು ಅಂದೇ ಓದಿ ಮನನ ಮಾಡಿಕೊಂಡರೆ ಉತ್ತಮ ಫಲಿತಾಂಶ ಪಡೆದುಕೊಳ್ಳಬಹುದು ಎಂದರು.

ಪ್ರತಿಭಾ ಕಿಡ್ಸ್ ಕಿಂಡರ್ ಗಾರ್ಟನ್ ಸ್ಕೂಲ್‌ನ ಮುಖ್ಯಶಿಕ್ಷಕಿ ಅಕ್ಷತಾ ಮಠ ಮಾತನಾಡಿ, ವಿದ್ಯಾರ್ಥಿಗಳಿಗೆ ರಜೆಯ ಸಮಯದಲ್ಲಿ ವಚನಗಳು, ಭಗವದ್ಗೀತೆ ಶ್ಲೋಕಗಳನ್ನು ಹೇಳಿಕೊಡಲಾಗಿದ್ದು ಮುಂಬರುವ ವಿದ್ಯಾಭ್ಯಾಸದ ಸಮಯದಲ್ಲಿ ಅವರ ಓದಿಗೆ ಸಹಕಾರಿಯಾಗಲಿವೆ ಎಂದರು.

ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಮಠ, ಸಂಸ್ಥಾಪಕ ಶಿವಕುಮಾರ ಮಠ, ಶಿಕ್ಷಕ ಬಿ.ಎಂ.ಕಡಿ, ಬಿ.ಎಸ್.ಬಿರಾದಾರ, ಶಿವಾನಂದ ಹೆಬ್ಬಾಳ, ಪಾಲಕರಾದ ಸಿ.ಜಿ.ಕುಲಕರ್ಣಿ ಮಾತನಾಡಿದರು. ಶಿಕ್ಷಕರಾದ ಸವಿತಾ ಪಾಟೀಲ, ಆರ್ಚನಾ ಮಠ ಇದ್ದರು. ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಾಸಂತಿ ಹಿರೇಮಠ, ಅನುಶ್ರೀ ಬಿರಾದಾರ, ಸಿಂಧೂ ಬಳವಾಟ, ಸಂಗೀತಾ ಹುಲಿಗೇರಿ, ಶ್ರೇಯಾ ಹೊನಕೇರಿ, ಸೇಜಲ ಮೇಟಿ ಅವರನ್ನು ಸನ್ಮಾನಿಸಲಾಯಿತು.

Latest News

ಆ.1 ರಂದು ಕುಂಟೋಜಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

ಆ.1 ರಂದು ಕುಂಟೋಜಿಯಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಬಸ್ ನಿಲ್ದಾಣದಲ್ಲಿ ಆ.1 ರಂದು ಬೆಳಗ್ಗೆ 10 ಕ್ಕೆ

ನಾನು ಅವಕಾಶವಾದಿ ರಾಜಕಾರಣಿಯಲ್ಲ: ನಾಡಗೌಡ

ನಾನು ಅವಕಾಶವಾದಿ ರಾಜಕಾರಣಿಯಲ್ಲ: ನಾಡಗೌಡ

ಮುದ್ದೇಬಿಹಾಳ : ಅಧಿಕಾರಕ್ಕಾಗಿ ನಾನು ಪಕ್ಷನಿಷ್ಠೆ ಬದಲಿಸುವ ಜಾಯಮಾನ ನನ್ನದಲ್ಲ. ನಾನು ಅವಕಾಶವಾದಿ ರಾಜಕಾರಣಿಯಲ್ಲ

ಅಸಂಘಟಿತ ಕಾರ್ಮಿಕರ ಮಂಡಳಿಗೆ ಡೀಸೆಲ್ ಸೆಸ್ ನಲ್ಲಿ ಪಾಲು : ಸಚಿವ ಸಂತೋಷ್‌ ಎಸ್‌ ಲಾಡ್‌

ಅಸಂಘಟಿತ ಕಾರ್ಮಿಕರ ಮಂಡಳಿಗೆ ಡೀಸೆಲ್ ಸೆಸ್ ನಲ್ಲಿ ಪಾಲು : ಸಚಿವ ಸಂತೋಷ್‌ ಎಸ್‌ ಲಾಡ್‌

ಕಾರವಾರ, ಜು.29 :- ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯ ಸಾಮಾಜಿಕ ಭದ್ರತಾ ಯೋಜನೆಗಳನ್ನು

ಬಸ್ ಸ್ಟೇರಿಂಗ್ ಕಟ್ : 22 ಜನ ಪ್ರಯಾಣಿಕರು ಪಾರು

ಬಸ್ ಸ್ಟೇರಿಂಗ್ ಕಟ್ : 22 ಜನ ಪ್ರಯಾಣಿಕರು ಪಾರು

ಲಿಂಗಸಗೂರ ಘಟಕದ ಕೆ.ಎಸ್.ಆರ್.ಟಿ.ಸಿ. ಬಸ್ ಲಿಂಗಸಗೂರನಿಂದ ಮುದ್ದೇಬಿಹಾಳಕ್ಕೆ ತೆರಳುವಾಗ ಬಸ್ ಸ್ಟೇರಿಂಗ್ ಕಟ್ ಆಗಿದೆ.

ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ಆಚರಣೆ

ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವ ಆಚರಣೆ

ಹುಣಸಗಿ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ ಯಾದಗಿರಿ ಮತ್ತು ಹುಣಸಗಿ ಪಟ್ಟಣದ ಮುಖಂಡರು ಸೇರಿ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಜಿಲ್ಲೆಯ ಎಲ್ಲಾ ಸೇನಾಪಡೆಯ ಅಧಿಕೃತ ಮಾಜಿ ಸೈನಿಕರು 1971ರ ಯುದ್ಧದಲ್ಲಿ ಭಾಗವಹಿಸಿದ, ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಸೈನಿಕರು ಸೇರಿದಂತೆ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಹುಣಸಗಿ ತಾಲೂಕಿನ ಮುಖಂಡರು, ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು, ಹುಣಸಗಿ ಪಟ್ಟಣದ ಎಲ್ಲಾ ಜನ ಸಾಮಾನ್ಯರು ಅಕ್ಕ ತಂಗಿಯರು,

ಹಸಿವಿನಿಂದ ಬಳಲುತ್ತಿರುವ ಮಕ್ಕಳಿಗೆ ಅನ್ನ‌ ನೀಡಿ, ವ್ಯರ್ಥ ಮಾಡಬೇಡಿ : ಬಸವರಾಜ ಕೋರಿ

ಹಸಿವಿನಿಂದ ಬಳಲುತ್ತಿರುವ ಮಕ್ಕಳಿಗೆ ಅನ್ನ‌ ನೀಡಿ, ವ್ಯರ್ಥ ಮಾಡಬೇಡಿ : ಬಸವರಾಜ ಕೋರಿ

ಮುದ್ದೇಬಿಹಾಳ: ಹಸಿವಿನಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಅನ್ನ ನೀಡುವ ಕೆಲಸ ಮಾಡಬೇಕೇ ಹೊರತೂ ಅಮೂಲ್ಯವಾದ ಆಹಾರ ಪದಾರ್ಥಗಳನ್ನು ವ್ಯರ್ಥ ಹಾಳು ಮಾಡಬಾರದು ಎಂದು ಪಟ್ಟಣದ ಮಹಾಮನೆ ಬಳಗದ ಅಧ್ಯಕ್ಷ ಬಸವರಾಜ ಕೋರಿ ಹೇಳಿದರು. ಅವರು ಶನಿವಾರ ಪಟ್ಟಣದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಸಿರು ತೋರಣ ಬಳಗದಿಂದ ನಾಗರ ಪಂಚಮಿ ನಿಮಿತ್ತ ಹಮ್ಮಿಕೊಂಡಿದ್ದ ಬಸವ ಪಂಚಮಿಯ "ಹಾಲು ಕುಡಿಯುವ ಹಬ್ಬ"ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲ್ಲಿನ ನಾಗರಕ್ಕೆ